ವೀಕೆಂಡ್’ನಲ್ಲಿ ಎಲ್ಲಿಗೆ ಹೋಗೋದು ಎಂದು ಪ್ಲಾನ್ ಮಾಡ್ತಾ ಇದ್ದೀರಾ? ಹಸಿರನ್ನೇ ಹೊದ್ದು ನಿಂತಿರುವ ಇಲ್ಲಿಗೆ ಹೋಗಿ ಬನ್ನಿ

By Suvarna Web Desk  |  First Published Feb 27, 2018, 4:51 PM IST

ಮನಸ್ಸಿಗೆ ಕಿರಿಕಿರಿ ಇಲ್ಲ. ಶಾಂತಿ ಕದಡುವ  ವಾಹನಗಳ ಸದ್ದುಗದ್ದಲ್ಲವಿಲ್ಲ. ಮನಸ್ಸಿಗೆ  ಮುದ ನೀಡುವಂತೆ ಮೃದುವಾಗಿ ಬೀಸುವ ತಣ್ಣನೆಯ ಗಾಳಿ. ಕಣ್ಣುಗಳಿಗೆ ಹಸಿರ ಹಬ್ಬ. ಇನ್ನು ಬೆಟ್ಟದ ತುದಿಯಲ್ಲಿ ಕುಣಿದು ಕುಪ್ಪಳಿಸುವಷ್ಟು ವಿಶಾಲ ಮೈದಾನ. ಇಲ್ಲಿಗೆ ಪ್ರವಾಸಿಗರ ಸಂಖ್ಯೆ ಕಡಿಮೆ. ಹಾಗಾಗಿ ಪರಿಸರವಂತೂ ನಿರ್ಮಲ, ನಿಷ್ಕಲ್ಮಶ. ಇದು ಕೋಲಾರ  ಸಮೀಪದ ವಕ್ಕಲೇರಿ ಮಾರ್ಕಂಡೇಯ ಬೆಟ್ಟ.


ಬೆಂಗಳೂರು (ಫೆ. 27): ಮನಸ್ಸಿಗೆ ಕಿರಿಕಿರಿ ಇಲ್ಲ. ಶಾಂತಿ ಕದಡುವ  ವಾಹನಗಳ ಸದ್ದುಗದ್ದಲ್ಲವಿಲ್ಲ. ಮನಸ್ಸಿಗೆ  ಮುದ ನೀಡುವಂತೆ ಮೃದುವಾಗಿ ಬೀಸುವ ತಣ್ಣನೆಯ ಗಾಳಿ. ಕಣ್ಣುಗಳಿಗೆ ಹಸಿರ ಹಬ್ಬ. ಇನ್ನು ಬೆಟ್ಟದ ತುದಿಯಲ್ಲಿ ಕುಣಿದು ಕುಪ್ಪಳಿಸುವಷ್ಟು ವಿಶಾಲ ಮೈದಾನ. ಇಲ್ಲಿಗೆ ಪ್ರವಾಸಿಗರ ಸಂಖ್ಯೆ ಕಡಿಮೆ. ಹಾಗಾಗಿ ಪರಿಸರವಂತೂ ನಿರ್ಮಲ, ನಿಷ್ಕಲ್ಮಶ. ಇದು ಕೋಲಾರ  ಸಮೀಪದ ವಕ್ಕಲೇರಿ ಮಾರ್ಕಂಡೇಯ ಬೆಟ್ಟ.

ಸ್ಥಳೀಯ ಜನರಿಗೆ ಬಿಟ್ಟರೆ ದೂರದೂರಿನವರಿಗೆ ಮಾರ್ಕಂಡೇಯ ಬೆಟ್ಟದ ಸೊಬಗು ತಿಳಿದಿಲ್ಲ.ಬರದ ನಾಡಿನ, ಬಯಲು ಸೀಮೆಯ ಈ ಬೆಟ್ಟವನ್ನು ದಟ್ಟ ಕಾನನೇ ಹೊದ್ದು ನಿಂತಿದೆ. ಇನ್ನು ಬೆಟ್ಟದ ತುದಿ ತಲುಪಲು ಬೆಟ್ಟದ ಬಂಡೆಗಳಲ್ಲೇ ಕೆತ್ತಿದ, ಕಲ್ಲಿನಿಂದ  ನಿರ್ಮಿಸಿದ ಮೆಟ್ಟಿಲುಗಳಿವೆ. ಕಾರು, ಬೈಕ್‌ಗಳ ಮೂಲಕ  ಹತ್ತಲು ಉತ್ತಮ ರಸ್ತೆ ಇದೆ. ರಸ್ತೆಗೆ ಚಾಚಿಕೊಂಡ  ರೆಂಬೆಕೊಂಬೆಗಳು. ಇವುಗಳ ನಡುವೆ ಹೋಗುವುದು  ಮನಸ್ಸಿಗೆ ಹಿತ. ತಿರುವುಗಳ ಅಂಚಿನಲ್ಲಿ ನಿಂತು ಬಾಗಿ ನೋಡಿದರೆ ಪಾತಾಳ. ಹಕ್ಕಿಗಳ ಚಿಲಿಪಿಲಿ ಗಾನ  ಕೇಳುತ್ತಾ ತಂಗಾಳಿಯಲ್ಲಿ ಮೆಟ್ಟಿಲು ಏರುತ್ತಿದ್ದರೆ, ಬೆಟ್ಟದ  ತುದಿ ತಲುಪುವುದೇ ತಿಳಿಯುವುದಿಲ್ಲ. ಬೆಟ್ಟದ ಮೇಲಿದೆ ಮಾರ್ಕಂಡೇಶ್ವರ ದೇಗುಲ  ಬೆಟ್ಟದ ತುದಿಯಲ್ಲಿ ಪುರಾತನ ಕಾಲದ ಐತಿಹಾಸಿಕ,
ಪೌರಾಣಿಕ ಹಿನ್ನೆಲೆಯುಳ್ಳ ಬೃಹತ್ತಾದ ಮಾರ್ಕಂಡೇಶ್ವರ  ದೇಗುಲವಿದೆ. ಮಾರ್ಕಂಡೇಶ್ವರ ಸ್ಥಳೀಯರ ಆರಾಧ್ಯ  ದೈವ. ದೇಗುಲ ಹೊರಾಂಗಣದಲ್ಲಿ ವಿಶಾಲ ಮೈದಾನವಿದೆ. ಕುಳಿತುಕೊಳ್ಳಲು ಅಲಲ್ಲಿ ಕಲ್ಲುಹಾಸುಗಳು. ಒಳಭಾಗದಲ್ಲಿ ಹತ್ತಾರು ದೇವರ ಪುಟ್ಟ ಪುಟ್ಟ ಗುಡಿಗಳಿವೆ. ಈ ದೇವಾಲಯ 12 ನೇ ಶತಮಾನದಲ್ಲಿ  ನಿರ್ಮಾಣಗೊಂಡಿತು ಎಂದು ಹೇಳಲಾಗುತ್ತದೆ.

Latest Videos

ಶಿವರಾತ್ರಿ ಸಮಯದಲ್ಲಿ ವಿಜೃಂಭಣೆಯ ಜಾತ್ರೆ  ನಡೆಯುತ್ತದೆ. ಮಾರ್ಕಂಡೇಯ ನದಿಯ ಉಗಮಸ್ಥಾನ  ವಕ್ಕಲೇರಿ ಹೋಬಳಿಯ ಮಾರ್ಕಂಡ ಪುರದಲ್ಲಿರುವ  ಮಾರ್ಕಂಡೇಯ ಬೆಟ್ಟಕ್ಕೆ ಸಮೀಪದಲ್ಲೇ ಬಿಳಿಬೆಟ್ಟ ಇದೆ.   ಈ ಬೆಟ್ಟಗಳ ಸಾಲಿನಲ್ಲಿ ಮಾರ್ಕಂಡೇಯ ನದಿ ಹುಟ್ಟುತ್ತದೆ. ಮಾರ್ಕಂಡೇಯ ನದಿ ಮಾಲೂರು ತಾಲೂಕಿನಲ್ಲಿ ಹರಿದು ಬೂದಿಕೋಟೆ ಸಮೀಪದ ಮಾರ್ಕಂಡೇಯ ಜಲಾಶಯ ಸೇರುತ್ತದೆ. ಸದ್ಯ ಕೋಲಾರ ಬರದ ನಾಡು. ನದಿಯ ಹರಿವೂ ತೀರ ಕಡಿಮೆ. 

click me!