ಕೊಡಗಿನಲ್ಲಿ ಭೂಕಂಪ ಸುದ್ದಿಗೆ ಜಿಲ್ಲಾಧಿಕಾರಿಯ ಉತ್ತರ

By Web DeskFirst Published Aug 18, 2018, 5:20 PM IST
Highlights

ಇದು ಕಿಡಿಕೇಡಿಗಳಿಂದ ಹಬ್ಬಿರುವ  ಸುದ್ದಿ. ಜಿಲ್ಲೆಯಲ್ಲಿ ಹೆಚ್ಚಾದ ಮಳೆಯ ಅಬ್ಬರದಿಂದ ಹಲವು ಭಾಗದಲ್ಲಿ ಭೂಕುಸಿತ ಉಂಟಾಗಿದ್ದು, ಇದು ಭೂಕಂಪನವಲ್ಲ. ಹವಾಮಾನ ಇಲಾಖೆ ಕೂಡ ಸ್ಪಷ್ಟನೆ ನೀಡಿದೆ. 

ಮಡಿಕೇರಿ[ಆ.18]: ಕೊಡಗಿನಲ್ಲಿ ಭೂಕಂಪನವಾಗಿದೆ ಎಂಬ ವದಂತಿಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಸುವರ್ಣ ನ್ಯೂಸ್ .ಕಾಂ ಸೋದರ ಸಂಸ್ಥೆ ಸುವರ್ಣ ನ್ಯೂಸ್ ಗೆ ಸ್ಪಷ್ಟನೆ ನೀಡಿದ್ದಾರೆ.

ಜಿಲ್ಲೆಯಾದ್ಯಂತ ಹರಡಿರುವ ಭೂಕಂಪದ ವರದಿ ಕೇವಲ ವದಂತಿಯಾಗಿದೆ. ಇದು ಕಿಡಿಕೇಡಿಗಳಿಂದ ಹಬ್ಬಿರುವ  ಸುದ್ದಿ. ಜಿಲ್ಲೆಯಲ್ಲಿ ಹೆಚ್ಚಾದ ಮಳೆಯ ಅಬ್ಬರದಿಂದ ಹಲವು ಭಾಗದಲ್ಲಿ ಭೂಕುಸಿತ ಉಂಟಾಗಿದ್ದು, ಇದು ಭೂಕಂಪನವಲ್ಲ. ಹವಾಮಾನ ಇಲಾಖೆ ಕೂಡ ಸ್ಪಷ್ಟನೆ ನೀಡಿದೆ. ನಿನ್ನೆಯಿಂದ ಮಳೆಯು ಕೂಡ ಕಡಿಮೆಯಾಗುತ್ತಿದೆ. ಸುಳ್ಳು ಸುದ್ದಿಗೆ ಯಾರೂ ಕಿವಿಕೊಡಬೇಡಿ ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

Latest Videos

ಎನ್ ಡಿಅರ್ ಎಪ್ ನಿಂದ 150 ಮಂದಿ ರಕ್ಷಣೆ
ಜಿಲ್ಲೆಯಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದ್ದು ಮದೆನಾಡು, ಜೋಡುಪಾಲ ವ್ಯಾಪ್ತಿಯಲ್ಲಿ ಸಿಲುಕಿಕೊಮಡಿದ್ದ 150 ಮಂದಿಯನ್ನು ಎನ್ ಡಿಅರ್ ಎಪ್ ಸ್ಥಳೀಯರ ಸಹಕಾರದಿಂದ ರಕ್ಷಿಸಿದೆ. ಇವರಿಗೆಲ್ಲ ಗಂಜಿ ಕೇಂದ್ರದಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ.  ಹಿಟಾಚಿ ಇಲ್ಲದ ಕಾರಣ ಕೆಲವು ಕಡೆ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗಿದೆ. ಸೋಮವಾರಪೇಟೆ ಐಗೂರು ಸಮೀಪ ಮಕ್ಕಳಾಗುಡಿ ಬೆಟ್ಟ ಕುಸಿತಗೊಂಡಿದ್ದು, ಅಪಾಯದ ಅಂಚಿನಲ್ಲಿದ್ದ ಮನೆಗಳ ಜನರನ್ನು ಮುಂಜಾಗ್ರತೆಯಾಗಿ ಸ್ಥಳಾಂತರಿಸಿದ್ಧರಿಂದ ಭಾರಿ ಅನಾಹುತ ತಪ್ಪಿದೆ.

ಸುಳ್ಯದ ಅರಂತೋಡು ಗಂಜಿಕೇಂದ್ರದಲ್ಲಿ ನೂರಾರು ಸಂತ್ರಸ್ತರಿಗೆ ವಾಸ್ತವ್ಯ ಕಲ್ಪಿಸಲಾಗಿದೆ. ಸುಳ್ಯದ ಸಂಪಾಜೆ ಸರ್ಕಾರಿ ಶಾಲೆಯಲ್ಲೂ ಇನ್ನೆರೆಡು ಗಂಜಿಕೇಂದ್ರ ಸ್ಥಪಿಸಲಾಗಿದ್ದು, 200 ಸಂತ್ರಸ್ತರಿಗೆ ಬಟ್ಟೆ, ಆಹಾರ, ವೈದ್ಯಕೀಯ ವ್ಯವಸ್ಥೆ ನೀಡಿ ಆಶ್ರಯ ಕಲ್ಪಿಸಲಾಗಿದೆ.

click me!