ವಿಶ್ವಸಂಸ್ಥೆ ಮಾಜಿ ಪ್ರಧಾನ ಕಾಯರ್ಯದರ್ಶಿ ಕೋಫಿ ಅನ್ನನ್ ಇನ್ನಿಲ್ಲ!

By Web DeskFirst Published Aug 18, 2018, 4:44 PM IST
Highlights

ಮತ್ತೋರ್ವ ಹಿರಿಯ ಮುತ್ಸದಿ ನಿಧನ! ವಿಶ್ವಸಂಸ್ಥೆ ಮಾಜಿ ಪ್ರಧಾನ ಕಾರ್ಯದರ್ಶಿ! ನೊಬೆಲ್ ಪ್ರಶಸ್ತಿ ಪುರಸ್ಕೃತ ಕೋಫಿ ಅನ್ನನ್ ನಿಧನ! ಅನಾರೋಗ್ಯದ ಕಾರಣದಿಂದ ವಿಧಿವಶರಾದ ಅನ್ನನ್
 

ಯನೈಟೆಡ್ ನೇಷನ್ಸ್(ಆ.18): ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೋಫಿ ಅನ್ನನ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ  80 ವರ್ಷದ ಅನ್ನನ್ ಇನ್ನಿಲ್ಲ ಎಂದು ಅವರ ಕುಟುಂಬದ ಮೂಲಗಳು ಖಚಿತಪಡಿಸಿವೆ.

ವಿಶ್ವದ ಅತ್ಯಂತ ಅಗ್ರಸ್ಥಾನವಾದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ ಮೊದಲ ಕಪ್ಪು ಆಫ್ರಿಕನ್ ಎಂಬ ಖ್ಯಾತಿಗೆ ಕೋಫಿ ಅನ್ನನ್ ಪಾತ್ರರಾಗಿದ್ದರು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ 1997ರಿಂದ 2006ರವರೆಗೆ ಅನ್ನನ್ ಸೇವೆ ಸಲ್ಲಿಸಿದ್ದರು.

It is with immense sadness that the Annan family and the Kofi Annan Foundation announce that Kofi Annan, former Secretary General of the United Nations and Nobel Peace Laureate, passed away peacefully on Saturday 18th August after a short illness... pic.twitter.com/42nGOxmcPZ

— Kofi Annan (@KofiAnnan)

ಸಿರಿಯಾದ ವಿಶ್ವಸಂಸ್ಥೆಯ ವಿಶೇಷ ರಾಯಭಾರಿಯಾಗಿ ಕೂಡ ಅನ್ನನ್ ಸೇವೆ ಸಲ್ಲಿಸಿದ್ದರು. ಸಿರಿಯಾ ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಹುಡುಕಲು ಅನ್ನನ್ ಅವಿರತವಾಗಿ ಪ್ರಯತ್ನಿಸಿದ್ದರು.

click me!