
ನವದೆಹಲಿ(ಜುಲೈ 04): ಇಸ್ರೇಲ್ ದೇಶಕ್ಕೆ ಪ್ರಧಾನಿ ಮೋದಿ 3 ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಇಲ್ಲಿ ನಡೆಯುವ ಮಿಲಿಟರಿ ಒಪ್ಪಂದಗಳ ಬಗ್ಗೆ ಎಲ್ಲರ ಗಮನ ಹರಿದಿದೆ. ಭಾರತದಿಂದ ಬಹಳವೇ ದೂರದಲ್ಲಿರುವ ಹಾಗೂ ವಿಭಿನ್ನ ಆಹಾರಕ್ರಮ ಇರುವ ದೇಶದಲ್ಲಿ ಮೋದಿಯವರು ಊಟಕ್ಕೇನು ಮಾಡುತ್ತಾರೆ ಎಂಬ ಕುತೂಹಲ ಹಲವು ಮಂದಿಗಿದೆ. ಇಸ್ರೇಲ್'ನಲ್ಲಿ ಅದರದ್ದೇ ಕಟ್ಟುನಿಟ್ಟಿನ ಆಹಾರ ಕಟ್ಟಳೆಗಳಿವೆ. ಮೋದಿ ಆ ಕಟ್ಟಳೆಗಳನ್ನ ಮೀರುತ್ತಾರಾ? ಎಂಬ ಕುತೂಹಲವಿದ್ದವರಿಗೆ ರಿಪಬ್ಲಿಕ್ ಟಿವಿಯ ಪ್ರತಿನಿಧಿ ಶೀತಲ್ ರಜಪೂತ್ ಕೆಲ ಉಪಯುಕ್ತ ಮಾಹಿತಿ ನೀಡಿದ್ದಾರೆ.
* ಇಸ್ರೇಲ್'ನ ಕರ್ರಿ(ಸಾಂಬಾರ್) ಕ್ವೀನ್ ಎಂದೇ ಖ್ಯಾತವಾಗಿರುವ ಚೆಫ್ ರೀನಾ ಪುಷ್ಕರ್ಣಾ ಅವರು ಮೋದಿಗೆ ಅಡುಗೆ ಮಾಡಿಕೊಡುತ್ತಾರೆ.
* ಮೋದಿಯವರಿಗೆ ಶುದ್ಧ ಸಸ್ಯಾಹಾರ ಮಾಡಿಕೊಡುತ್ತಾರೆ. ದಕ್ಷಿಣ ಭಾರತೀಯ, ಗುಜರಾತಿ ಮತ್ತು ಪಂಜಾಬೀ ಆಹಾರ ಖಾದ್ಯಗಳಿರಲಿವೆ.
* ಇಡ್ಲಿ, ಗೋಲ್'ಗಪ್ಪಾ, ಪಾನಿಪುರಿ, ಪುಷ್ಕಾ ಮೊದಲಾದವು ಉಪಾಹಾರವಾಗಲಿವೆ.
* ಊಟಕ್ಕೆ ಕಾಶ್ಮೀರೀ ಅನ್ನ ಮತ್ತು ದಾಲ್ ಹಾಗೂ ಸಬ್ಜಿ ಕುರ್ಮಾಗಳನ್ನು ಮಾಡಿ ಬಡಿಸಲಾಗುತ್ತದೆ.
* ರಾತ್ರಿ ಊಟದ ವೇಳೆ ಮೋದಿಗೆ ಗೌರವವಾಗಿ ಭಾರತೀಯ ಹಾಡುಗಾರರಿಂದ ಸಂಗೀತ ರಂಜನೆ ಇರಲಿದೆ.
* ಇಸ್ರೇಲ್'ನ ಬಹಳ ಕಟ್ಟುನಿಟ್ಟಿನ ಆಹಾರಕ್ರಮವೆನಿಸಿದ ಸಾಂಪ್ರದಾಯಿಕ ಕಶ್ರುತ್ ನಿಯಮಗಳ ಪ್ರಕಾರ ಖಾದ್ಯಗಳನ್ನ ತಯಾರಿಸಲಾಗುತ್ತದೆ.
* ಅಡುಗೆಗಾಗಿ ತಾಜಾ ತರಕಾರಿ, ಬೇಳೆ ಕಾಳುಗಳನ್ನು ಬಳಸಲಾಗುತ್ತದೆ.
(ಮಾಹಿತಿ: ರಿಪಬ್ಲಿಕ್ ಟಿವಿ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.