ಅಧಿವೇಶನ ಬಳಿಕ ಕೆ.ಜೆ.ಜಾರ್ಜ್'ಗೆ ಮತ್ತೆ ಗೃಹ ಖಾತೆ ಹೊಣೆ?

By Suvarna Web DeskFirst Published May 30, 2017, 1:42 PM IST
Highlights

ಪರಮೇಶ್ವರ್ ಮತ್ತೆ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯುವ ಸಾಧ್ಯತೆ ಇದೆ ಎಂಬ ಸುದ್ದಿಯ ಬೆನ್ನಲ್ಲೇ ಇದೀಗ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ಕೂಡಾ ಮತ್ತೆ ಗೃಹ ಖಾತೆ ಸಚಿವ ಸ್ಥಾನ ಒಲಿಯಲಿದೆ ಎಂಬ ಮಾತುಗಳು ದಟ್ಟವಾಗಿವೆ.

ಬೆಂಗಳೂರು(ಮೇ.30): ಪರಮೇಶ್ವರ್ ಮತ್ತೆ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯುವ ಸಾಧ್ಯತೆ ಇದೆ ಎಂಬ ಸುದ್ದಿಯ ಬೆನ್ನಲ್ಲೇ ಇದೀಗ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ಕೂಡಾ ಮತ್ತೆ ಗೃಹ ಖಾತೆ ಸಚಿವ ಸ್ಥಾನ ಒಲಿಯಲಿದೆ ಎಂಬ ಮಾತುಗಳು ದಟ್ಟವಾಗಿವೆ.

 ಅಧಿವೇಶನದ ಬಳಿಕ ಗೃಹ ಸಚಿವ ಸ್ಥಾನಕ್ಕೆ ಪರಮೇಶ್ವರ್ ರಾಜೀನಾಮೆ ನೀಡುವ ಸಾಧ್ಯತೆ ತಿಳಿದು ಬಂದಿದ್ದು, ಬಳಿಕ ಕೆ.ಜೆ.ಜಾರ್ಜ್​​ ಗೃಹ ಖಾತೆಯ ಹೊಣೆ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.  

ಜೂನ್ 5ರಿಂದ 15ರವರೆಗೆ ನಡೆಯಲಿರುವ  ಮಳೆಗಾಲದ ಅಧಿವೇಶನ ನಡೆಯಲಿದ್ದು, ಸದ್ಯ ಲಭ್ಯವಾಗಿರುವ ಮಾಹಿತಿ ಅನ್ವಯ ಜಾರ್ಜ್ ಮತ್ತೆ ತಮ್ಮ ಹಳೆಯ ಖಾತೆಯ ಸ್ಥಾನ ಪಡೆಯಲಿದ್ದಾರೆ. ಇನ್ನು ಜಾರ್ಜ್ ಗೃಹ ಸಚಿವರಾದರೆ ಬೆಂಗಳೂರು ನಗರಾಭಿವೃದ್ಧಿ ಖಾತೆ ರಾಮಲಿಂಗಾರೆಡ್ಡಿ ಹೆಗಲಿಗೆ ಬೀಳುತ್ತದೆ ಎಂಬ ಮಾತುಗಳೂ ಕೆಳಿ ಬಂದಿವೆ. ಇದರೊಂದಿಗೆ ಸಾರಿಗೆ ಇಲಾಖೆಯೂ ಇವರ ಹೊಣೆಯಾಗಲಿದೆ.

click me!