
ಬೆಂಗಳೂರು: ಮಹಿಳೆಯರ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರು ಬಿಡುಗಡೆ ಮಾಡಿರುವ ಸುರಕ್ಷಾ ಮೊಬೈಲ್ ಆ್ಯಪ್’ಗೆ ನಗರದ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ.
ಬೆಂಗಳೂರು ಪೊಲೀಸರು ಅಭಿವೃದ್ಧಿಪಡಿಸಿರುವ ಸುರಕ್ಷಾ ಆ್ಯಪ್’ಗೆ ಕಳೆದ ಏ.10ರಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಈವರೆಗೆ ಆ ಆ್ಯಪನ್ನು ಸುಮಾರು 26 ಸಾವಿರ ಮಂದಿ ಡೌನ್’ಲೋಡ್ ಮಾಡಿದ್ದಾರೆಂದು ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಹೇಳಿದ್ದಾರೆ.
ಮಹಿಳೆಯರು ಯಾವುದಾದರು ಸಮಸ್ಯೆಯಲ್ಲಿದ್ದಾಗ ಸುರಕ್ಷಾ ಆ್ಯಪ್’ನಲ್ಲಿರುವ SOS ಗುಂಡಿಯನ್ನು ಒತ್ತಿದರೆ ಸಾಕು, ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಹಾಗೂ ಇತರ ಕಾಂಟಾಕ್ಟ್'ಗಳಿಗೆ ಸಂದೇಶ ರವಾನೆಯಾಗುತ್ತದೆ ಹಾಗೂ ಮಹಿಳೆಯ ಇರುವ ಸ್ಥಳವು ಕೂಡಾ ಆ್ಯಪ್ ಮೂಲಕ ಅವರಿಗೆ ತಿಳಿಯುತ್ತದೆ. ಇದರಾಧಾರದಲ್ಲಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗುರತ್ತಾರೆ.
ಆದರೆ ತುರ್ತುಸಂದರ್ಭಕ್ಕಾಗಿ ವಿನ್ಯಾಸಗೊಳಿಸಲಾಗಿರುವ ನಮ್ಮ 100 ಆ್ಯಪ್’ಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ದೊರಕಿದೆ. ಈವರೆಗೆ ಕೇವಲ 700 ಮಂದಿ ಈ ಆ್ಯಪನ್ನು ಡೌನ್’ಲೋಡ್ ಮಾಡಿದ್ದಾರೆ.
ಅದೇ ರೀತಿ, ಠಾಣಾ ಸರಹದ್ದಿನ ಕುರಿತು ಮಾಹಿತಿ ನೀಡಲು ಇತ್ತೀಚೆಗೆ ಬಿಡುಗಡೆ ಮಾಡಲಾದ ‘Know Your Police Station’ ಆ್ಯಪ್’ಗೆ ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ವರೆಗೆ ಸುಮಾರು 5000 ಮಂದಿ ಈ ಆ್ಯಪನ್ನು ತಮ್ಮ ಮೊಬೈಲ್’ಗಳಲ್ಲಿ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.