
ಮಂಗಳೂರು (ಸೆ.21): ಆರಾಧನಾ ಸೇವೆ ಮತ್ತು ಹರಕೆ ಸಂಸ್ಕೃತಿಯ ಜೊತೆ ಮಿಳಿತಗೊಂಡಿರುವ ಕರಾವಳಿಯ ಗಂಡುಕಲೆ ಯಕ್ಷಗಾನದ ಸನ್ನಿವೇಶವೊಂದು ಸದ್ಯ ಕರಾವಳಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಯಕ್ಷಗಾನವೊಂದರ ಶೃಂಗಾರ ಸನ್ನಿವೇಶದಲ್ಲಿ ಸಿನಿಮಾ ಶೈಲಿಯ ಚುಂಬನ ಮಾಡಿರುವುದು ಪ್ರೇಕ್ಷಕರಿಗೆ ಇರಿಸು ಮುರಿಸಿ ಉಂಟು ಮಾಡಿದೆ. ಸದ್ಯ ಈ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಕಟೀಲು, ಧರ್ಮಸ್ಥಳ ಮೊದಲಾದ ಮೇಳಗಳು ಹರಕೆಯ ರೂಪದಲ್ಲಿಯೇ ಯಕ್ಷಗಾನವನ್ನು ಆಡಿಸಿಕೊಂಡು ಬರುವುದು ಸಾಮಾನ್ಯ. ಆದ್ರೆ ಯಕ್ಷಗಾನದಲ್ಲಿ ಚುಂಬನ ಕಾಲಿಟ್ಟಿದ್ದು, ಕಟೀಲು ಮೇಳದ ಯಕ್ಷಗಾನದಲ್ಲಿ ನಡೆದ ಚುಂಬನಕ್ಕೆ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ ಕೇಳಿ ಬಂದಿದೆ. ಕರಾವಳಿಯ ಹೆಮ್ಮೆಯ ಸಂಸ್ಕೃತಿ ಅಂತಾನೆ ಕರೆಯಲ್ಪಡುವ ಈ ಶ್ರೇಷ್ಠ ಕಲೆಯಲ್ಲಿ ಈ ರೀತಿಯ ಅಸಂಬದ್ಧ ವರ್ತನೆ ಸಲ್ಲ ಅಂತ ಕಲಾ ಆರಾಧಕರು ವಿರೋಧಿಸಿದ್ದಾರೆ. ಅಲ್ಲದೇ ಯಕ್ಷಗಾನಕ್ಕೆ ಇಂಥ ವರ್ತನೆ ಬೇಕಿತ್ತೇ ಎಂಬ ಪ್ರಶ್ನೆ ಕೂಡಾ ಎದ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.