
ಪುದುಚೆರಿ : ಪುದುಚೆರಿ ಲೆಫ್ಟಿನಂಟ್ ಗವರ್ನರ್ ಕಿರಣ್ ಬೇಡಿ ಸ್ವತಃ ಟ್ರಾಫಿಕ್ ಪೊಲೀಸ್ ಆಗಿ ಹೆಲ್ಮೆಟ್ ಧರಿಸದಿದ್ದವರಿಗೆ, ತ್ರಿಬಲ್ ರೈಡ್, ಸಂಚಾರ ನಿಯಮ ಪಾಲಿಸದಿದ್ದವರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ನಿಟ್ಟಿನಲ್ಲಿ ಪುದುಚೆರಿಯ ರಸ್ತೆಗಿಳಿದು ಸುರಕ್ಷತೆಯ ಪಾಠ ಮಾಡಿದ್ದಾರೆ. ಟ್ರಾಫಿಕ್ ನಲ್ಲೇ ಎಲ್ಲಾ ವಾಹನ ಸವಾರರನ್ನು ತಡೆದು ಹೆಲ್ಮೆಟ್ ಧರಿಸಲು ಹೇಳಿದ್ದು, ತ್ರಿಬಲ್ ರೈಡ್ ಮಾಡುತ್ತಿದ್ದವರನ್ನು ವಾಹನದಿಂದಲೇ ಕೆಳಗಿಳಿಸಿದರು. ಆಟೋದಲ್ಲಿ ನಾಲ್ಕಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದವರನ್ನು ಎಚ್ಚರಿಸಿದರು.
ರಸ್ತೆಗಿಳಿದು ಎಚ್ಚರಿಕೆ ನೀಡಿದ ವಿಡಿಯೋವನ್ನು ತಮ್ಮ ಟ್ವಿಟರ್ ಮೂಲಕ ಶೇರ್ ಮಾಡಿಕೊಂಡ ಮಾಜಿ ಐಪಿಎಸ್ ಅಧಿಕಾರಿ ಪುದುಚೇರಿಯಲ್ಲಿ ಹೆಲ್ಮೆಟ್ ಧರಿಸುವ ಸಂಸ್ಕೃತಿ ಇಲ್ಲ. ಇದರಿಂದ ಪ್ರತೀ ಮೂರು ದಿನಕ್ಕೊಮ್ಮೆ ಭೀಕರ ಅಪಘಾತ ಸಂಭವಿಸುತ್ತಿವೆ. ಹೆಚ್ಚಿನ ಸಾವು ನೋವುಗಳಾಗುತ್ತಿದ್ದು, ಕಟ್ಟುನಿಟ್ಟಿನ ನಿಯಮ ಜಾರಿ ತರುವ ಅಗತ್ಯವಿದೆ ಎಂದು ಬರೆದುಕೊಂಡಿದ್ದಾರೆ.
ಫೆಬ್ರವರಿ 4ರಿಂದ ಫೆಬ್ರವರಿ 10ರವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ