
ವೃಂದಾವನ : ಪ್ರಧಾನಿ ನರೇಂದ್ರ ಮೋದಿ ಅವರು ವೃಂದಾವನಕ್ಕೆ ಭೇಟಿ ನೀಡಿದ್ದ ವೇಳೆ ಇಲ್ಲಿನ ಬಡಮಕ್ಕಳಿಗೆ ಸ್ವತಃ ಊಟ ಬಡಿಸಿದ್ದಾರೆ.
ಅಕ್ಷಯ ಪಾತ್ರ ಪ್ರತಿಷ್ಠಾನದ ಬಿಸಿಯೂಟದ ಫಲಾನುಭವಿ ಮಕ್ಕಳ ಸಂಖ್ಯೆ 300 ಕೋಟಿ ತಲುಪಿದ ಸವಿನೆನಪಿಗಾಗಿ ವೃಂದಾವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಧಾನಿ ಉಣಬಡಿಸುತ್ತಾ, ಸಂಭಾಷಣೆಯನ್ನೂ ನಡೆಸಿದರು.
ಈ ಸಂದರ್ಭದಲ್ಲಿ ಪುಟ್ಟ ಬಾಲಕಿಯೋರ್ವಳು ಪ್ರಧಾನಿಗೆ ಕೊಟ್ಟ ಉತ್ತರ ಎಲ್ಲರ ಗಮನ ಸೆಳೆಯಿತು. ನಿಮ್ಮ ಊಟ ನನ್ನಿಂದ ತಡವಾಯಿತು ಎಂದು ಪ್ರಧಾನಿ ಹೇಳಿದ್ದಕ್ಕೆ ನಾವು ಬೆಳಗ್ಗೆ ಆಹಾರ ಸೇವಿಸಿ ಬಂದಿದ್ದೇವೆ ಎಂದು ಹೇಳಿದ್ದು, ಎಲ್ಲೆಡೆ ವೈರಲ್ ಆಗಿದೆ.
ಇನ್ನು ಇಸ್ಕಾನ್ ಅಕ್ಷಯಪಾತ್ರ ಕೋಟ್ಯಂತರ ಸಂಖ್ಯೆಯ ಬಡಮಕ್ಕಳಿಗೆ ಬಿಸಿಯೂಟ ವಿತರಿಸುತ್ತಿದೆ. ಬೆಂಗಳೂರು ಮೂಲದ ಈ ಸಂಸ್ಥೆ ಸಾಮಾಜಿಕ ಸೇವೆಯ ರೂಪದಲ್ಲಿ ಮಕ್ಕಳಿಗೆ ಊಟ ವಿತರಣೆ ಮಾಡುತ್ತಿದ್ದು, ದಿನದಿನಕ್ಕೂ ಇದರ ಫಲಾನುಭವಿಗಳ ಸಂಖ್ಯೆ ದಿನದಿನಕ್ಕೂ ಏರುತ್ತಿದೆ. 300 ಕೋಟಿಗೆ ಫಲಾನುಭವಿ ಮಕ್ಕಳ ಸಂಖ್ಯೆ ತಲುಪಿದ್ದು, ಇದರ ಸಂಭ್ರಮಾಚರಣೆಯಲ್ಲಿ ವೃಂದಾವನದಲ್ಲಿ ಫೆ. 11ರಂದು ನಡೆಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ