ಹಸಿವಿನಿಂದ ಅಳುತ್ತಿದ್ದ ಮಗುವಿಗೆ ವಿಮಾನದಲ್ಲಿ ಏರ್ ಹೋಸ್ಟೆಸ್ ಹಾಲುಣಿಸಿದ ಫೊಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಫಿಲಿಫೈನ್ಸ್ : ಹಸಿವಿನಿಂದ ಅಳುತ್ತಿದ್ದ ಮಗುವಿಗೆ ಏರ್ ಹೋಸ್ಟೆಸ್ ಓರ್ವರು ಎದೆ ಹಾಲುಣಿಸಿ ಮಾನವೀಯತೆ ಮೆರೆದ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಫಿಲಿಫೈನ್ಸ್ ವಿಮಾನದಲ್ಲಿ ತಾಯಿ ಮಗು ಪ್ರಯಾಣಿಸುತ್ತಿದ್ದರು. ಮಗು ಹಸವಿನಿಂದ ಅಳುತ್ತಿದ್ದು ತಾಯಿಯ ಎದೆ ಹಾಲು ಒಣಗಿ ಹೋಗಿದ್ದು ಆಕೆ ಬಾಟಲ್ ಹಾಲನ್ನೂ ಕೂಡ ಮರೆತು ಬಂದಿದ್ದರು.
ಆದರೆ ಮಗು ಮಾತ್ರ ಒಂದೇ ಸಮನೆ ಅಳುತ್ತಿದ್ದು ಇದನ್ನು ಕಂಡ 24 ವರ್ಷದ ಏರ್ ಹೋಸ್ಟೆಸ್ ಪತ್ರಿಶಾ ಓರ್ಗ್ಯಾನೋ ಮಗುವಿಗೆ ಹಾಲುಣಿಸಿ ಮಮತೆ ಮೆರೆದಿದ್ದಾರೆ.
ಸ್ವತಃ ಪತ್ರಿಶಾ 9 ತಿಂಗಳ ಮಗುವಿನ ತಾಯಿಯಾಗಿದ್ದು, ತಾಯಿ ಒಡಲಿನ ನೋವು ಆಕೆಗೆ ಅರ್ಥವಾಗಿದ್ದು ಮಗುವಿನ ಹಸಿವು ತಣಿಸಿದ್ದಾರೆ.
ಮಗು ಒಂದೇ ಸಮನೆ ಅಳುವುದನ್ನು ಕೇಳಿ ಏನಾದರೂ ಮಾಡಲೇಬೇಕು ಎಂದು ಯೋಚಿಸಿ ಹಾಲು ಕುಡಿಸಲು ತೀರ್ಮಾನಿಸಿದ್ದಾಗಿ ಹೇಳಿದ್ದಾರೆ. ಈ ವೇಳೆ ಆ ಪುಟ್ಟ ಮಗುವಿನ ತಾಯಿ ಈ ಏರ್ ಹೋಸ್ಟೆಸ್ ಗೆ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ.
ಆಕೆ ಹಾಲುಣಿಸುತ್ತಿರುವ ಫೊಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.