
ಬೆಂಗಳೂರು: ಅಪಾರ್ಟ್‌ಮೆಂಟ್ 5ನೇ ಮಹಡಿಯಿಂದ ಬಿದ್ದು ವೈದ್ಯರ ಪತ್ನಿಯೊಬ್ಬರು ಅನುಮಾನಾಸ್ಪದ ವಾಗಿ ಸಾವನ್ನಪ್ಪಿರುವ ಘಟನೆ ಭಾನು ವಾರ ರಾತ್ರಿ ಉತ್ತರಹಳ್ಳಿ ಯಲ್ಲಿ ನಡೆದಿದೆ. ಉತ್ತರಹಳ್ಳಿ ನಿವಾಸಿ ಸೋನಾಲ್ ಅಗರ ವಾಲ್ (25) ಮೃತರು. ಸೋನಾಲ್ ಪತಿ ಅವಿ ನಾಶ್ ಮತ್ತು 3 ವರ್ಷದ ಮಗು ವಿನ ಜತೆ ಮಂತ್ರಿ ಅಲ್ಪೈನ್ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಲ್ಲಿ 505ರ ಫ್ಲ್ಯಾಟ್‌ನಲ್ಲಿ ವಾಸವಿದ್ದರು. ಭಾನುವಾರ ರಾತ್ರಿ ಸೋನಾಲ್ 501 ನ ಫ್ಲ್ಯಾಟ್‌ಗೆ ತೆರಳಿದ್ದರು. ಈ ವೇಳೆ 501 ಫ್ಲ್ಯಾಟ್‌ನಲ್ಲಿ ಕುಟುಂಬ ಹೊರಗೆ ಹೋಗಿತ್ತು. ಸಂಜೆ 7.30ರ ಸುಮಾರಿಗೆ 501 ಫ್ಲ್ಯಾಟ್‌ನಲ್ಲಿ ವಾಸವಿದ್ದ ಕುಟುಂಬ ಮನೆಗೆ ಬಂದಿದೆ.
ಫ್ಲ್ಯಾಟ್ ಮಾಲೀಕರನ್ನು ನೋಡಿದ ಕೂಡಲೇ ಸೋನಾಲ್ ಅಗರವಾಲ್ ಐದನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾರೆ. ಬಳಿಕ ತೀವ್ರ ರಕ್ತಸ್ರಾವವಾಗಿ ಸೋನಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಧಾವಿಸಿದ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದಾಗ, ಸೋನಾಲಿ ಅವರ ಒಳ ಉಡುಪಿನಲ್ಲಿ ಮೊಬೈಲ್ ಮತ್ತು ಚಿನ್ನಾಭರಣ ಪತ್ತೆಯಾಗಿದೆ. ಸೋನಾಲ್ ಬಳಿ ಕೀಯೊಂದು ಪತ್ತೆಯಾಗಿದೆ. ಏಕೆ ಬೇರೊಬ್ಬರ ಫ್ಲ್ಯಾಟ್‌ಗೆ ತೆರಳಿದ್ದರೂ, ಫ್ಲ್ಯಾಟ್‌ನಲ್ಲಿ ಬೇರೆ ಯಾರಾದರೂ ಇದ್ದಾರಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.