
ಬೆಂಗಳೂರು(ಅ.28): ನಮ್ಮ ರಾಜ್ಯದಲ್ಲೇ ಇದೆ ಕಿಲ್ಲರ್ ವೈದ್ಯರನ್ನ ಸೃಷ್ಟಿಸೋ ಫ್ಯಾಕ್ಟರಿಗಳು. ಆ ಫ್ಯಾಕ್ಟರಿಗಳು ಮತ್ತಾವುದೂ ಅಲ್ಲ ರಾಜ್ಯದ ಕೆಲ ಮೆಡಿಕಲ್ ಕಾಲೇಜುಗಳು. ಈ ಸ್ಫೋಟಕ ಮಾಹಿತಿಯನ್ನ ಸುವರ್ಣ ನ್ಯೂಸ್ನ ಕವರ್ಸ್ಟೋರಿ ತಂಡ ಬಯಲು ಮಾಡಿದೆ. ಬೆಂಗಳೂರು ಗ್ರಾಮಾಂತರ ವಲಯದ ಹೊಸಕೋಟೆಯಲ್ಲಿರೋ ಎಂವಿಜೆ ಮೆಡಿಕಲ್ ಕಾಲೇಜು ಹಾಗೂ ರಿಸರ್ಚ ಸೆಂಟರ್ನಲ್ಲಿ ಈ ಹಗರಣ ನಡೆಯುತ್ತಿರೋದನ್ನ ಸಾಕ್ಷಿ ಸಮೇತವಾಗಿ ಸಾಬೀತುಪಡಿಸಿದೆ. ಈ ಕಾಲೇಜು ಭಾರತೀಯ ವೈದ್ಯಕೀಯ ಮಂಡಳಿ ಎಂಸಿಐಯ ನಿಯಮಾವಳಿಗಳನ್ನೆಲ್ಲಾ ಗಾಳಿಗೆ ತೂರಿ ಭಾರೀ ಅಕ್ರಮ ಎಸಗುತ್ತಿದೆ.
ಕಾಲೇಜು ನಡೆಸಲು ಅನುಮತಿ ಪಡೆದೆ ಮೆಡಿಕಲ್ ಸೀಟು ದಂಧೆ ಮಾಡೋಕ್ಕೋಸ್ಕರ ಡಮ್ಮಿ ಅಂದ್ರೆ ನಕಲಿ ರೋಗಿಗಳನ್ನ ಸೃಷ್ಟಿಸಿ ಎಂಬಿಬಿಎಸ್ ಹಾಗೂ ಪಿ.ಜಿ ವಿದ್ಯಾರ್ಥಿಗಳಿಗೆ ಭಾರೀ ಮೋಸ ಮಾಡುತ್ತಿದ್ದಾರೆ. ದೆಹಲಿಯಿಂದ ಎಂಸಿಐ ತಂಡ ಪರಿಶೀಲನೆಗೆ ಬಂದಾಗ ಅನಾಥಾಶ್ರಮಗಳಿಂದ, ಹಳ್ಳಿಗಳಿಂದ ದುಡ್ಡು ಕೊಟ್ಟು ನಕಲಿ ರೋಗಿಗಳನ್ನ ತಂದು ಮಲಗಿಸ್ತಾರೆ. ಅಲ್ಲದೆ ಎಂಸಿಐ ಪರಿಶೀಲನೆ ವೇಳೆ ಮಾತ್ರ ಹಿರಿಯ ವೈದ್ಯರನ್ನು ಮತ್ತು ಪ್ರಾದ್ಯಾಪಕರನ್ನು ಕರೆಸಿ ವಂಚಿಸುತ್ತಿದೆ. ಇವೆಲ್ಲ ಅಂಶಗಳು ಕವರ್ಸ್ಟೋರಿ ರಹಸ್ಯ ಕಾರ್ಯಾಚರಣೆಯಲ್ಲಿ ಸಾಕ್ಷಿ ಸಮೇತ ಬಯಲಾಗದೆ.
ಇಷ್ಟೇ ಅಲ್ಲದೆ ಇವರು ಪಿಜಿ ವಿದ್ಯಾರ್ಥಿ ಸ್ಟೈಫಂಡನ್ನೂ ಗುಳುಂ ಮಾಡುತ್ತಿದ್ದಾರೆ. ಒಟ್ಟಾರೆ ಎಂವಿಜೆ ಮೆಡಿಕಲ್ ಕಾಲೇಜು ಡಮ್ಮಿ ಎಂಬಿಬಿಎಸ್ ವಿದ್ಯಾರ್ಥಿಗಳನ್ನ ಸೃಷ್ಟಿಸಿ ಭಾರೀ ಹಗರಣ ನಡೆಸುತ್ತಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ತನಿಖೆ ನಡೆಸಿ ತಕ್ಷಣ ಕಾಲೇಜು ವಿರುದ್ಧ ಕ್ರಮಕೈಗೊಳ್ಳಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.