
ಚಿಕ್ಕೋಡಿ(ಅ.28): ಶಂಕರ್ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಬಳಿಯ ಗೋಟುರು ಗ್ರಾಮದ ನಿವಾಸಿ. ಕಳೆದ ತಿಂಗಳು ಸಣ್ಣದಾಗಿ ಜ್ವರ ಕಾಣಿಸಿಕೊಂಡಿದೆ ಎಂದು ಸಂಕೇಶ್ವರ ಪಟ್ಟಣದ ಗುರುನಾಥ್ ಕ್ಲಿನಿಕ್'ಗೆ ಬಂದಿದ್ದಾರೆ. ಇವರನ್ನ ತಪಾಸಣೆ ಮಾಡಿದ ವೈದ್ಯ ಗುರುನಾಥ್ ಎರಡು ಇಂಜಕ್ಷನ್ ಕೊಟ್ಟು ಮಾತ್ರೆ ನೀಡಿ ಗುಣವಾಗುತ್ತೆ ಎಂದು ಕಳುಹಿಸಿಕೊಟ್ಟಿದ್ದಾರೆ. ಆದರೆ ಆಗಿದ್ದೇ ಬೇರೆ ಆ ವೈದ್ಯ ಮಹಾಶಯ ಸೂಜಿ ಚುಚ್ಚಿದ ಜಾಗದಲ್ಲಿ ಕಿವು ಸೋರೋಕೆ ಪ್ರಾರಂಭವಾಗಿದೆ ಮತ್ತೆ ಹೋಗಿ ಡಾ ಗುರುನಾಥ್'ಗೆ ಕೇಳಿದರೆ ಬೇರೆ ಆಸ್ಪತ್ರೆಗೆ ರೆಪರ್ ಮಾಡಿದ್ದಾನೆ.ಆಪರೇಷನ್ ಮಾಡಿಸಿಕೊಂಡ ಶಂಕರ್ ಈಗ ಹಾಸಿಗೆ ಹಿಡಿದಿದ್ದಾರೆ.
ಇನ್ನು ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷಮೆಂಟ್ ಖಾಯಿದೆ ಪ್ರಕಾರ ಹೊಮಿಯೋಪತಿ ಕಲಿತ ಡಾಕ್ಟರ್ ಅಲೋಪತಿ ಮಾಡೋಹಾಗಿಲ್ಲ. ಆದರೆ ಹೋಮಿಯೋಪತಿ ಡಾಕ್ಟರ್ ಗುರುನಾಥ್ ಆಲೋಪತಿ ಟ್ರೀಟ್ಮೇಂಟ್ ಕೊಡ್ತಿದ್ದಾನೆ. ಆದ್ರೆ, ಡಾಕ್ಟರ್ ಗುರುನಾಥ್ ಮಾತ್ರ ಹೇಳೋದೇ ಬೇರೆ. ವೈದ್ಯನ ಯಡವಟ್ಟಿಗೆ ಹಾಸಿಗೆ ಹಿಡಿದ ಶಂಕರ್ ನ್ಯಾಯಕ್ಕಾಗಿ ಸಂಕೇಶ್ವರ ಠಾಣೆ ಮೆಟ್ಟಿಲೇರಿದ್ದಾರೆ. ವೈದ್ಯಕೀಯ ಕಾನೂನು ಗಾಳಿಗೆ ತೂರಿ ಬಡವರ ಜೀವದ ಜೊತೆ ಚಲ್ಲಾಟವಾಡೋ ಧನದಾಹಿ ವೈದ್ಯರಿಗೆ ತಕ್ಕ ಶಿಕ್ಷೆ ಆಗಲೇಬೇಕಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.