
ಖಾನ್ ಸರ್ ಸುದ್ದಿ: ಪಾಟ್ನಾದಿಂದ ದೇಶದಾದ್ಯಂತ ಯುವಕರ ಮನ ಗೆದ್ದಿರುವ ಖಾನ್ ಸರ್ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತಮ್ಮ ಸರಳ ಶೈಲಿ, ಮನಮುಟ್ಟುವ ಮಾತುಗಳು ಮತ್ತು ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆ ತರುವ ಚಿಂತನೆಗಳಿಂದ ಪ್ರಸಿದ್ಧರಾಗಿರುವ ಖಾನ್ ಸರ್, ಈಗ ಐಎಎಸ್ ಅಧಿಕಾರಿಗಳ ಬಗ್ಗೆ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಖಾನ್ ಸರ್, ಐಎಎಸ್ ಅಧಿಕಾರಿಗಳಿಂದ ದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅವರು ಉತ್ತಮ ಕಾರ್ಯನಿರ್ವಾಹಕರು. ಅವರಿಗೆ ಯಾವುದೇ ಕೆಲಸ ಕೊಟ್ಟರೂ ಅಚ್ಚುಕಟ್ಟಾಗಿ ಮಾಡುತ್ತಾರೆ. ಆದರೆ ಅವರಿಂದ ಹೊಸತನದ ನಿರೀಕ್ಷೆ ಇಟ್ಟುಕೊಳ್ಳುವುದು ಮರುಭೂಮಿಯಲ್ಲಿ ನೀರು ಹುಡುಕಿದಂತೆ. ಅವರಿಂದ ಹೊಸ ಚಿಂತನೆಗಳು ಬರಲು ಸಾಧ್ಯವಿಲ್ಲ.
ಹೋಮಿ ಜಹಾಂಗೀರ್ ಭಾಭಾ ಐಎಎಸ್ ಅಧಿಕಾರಿಯಾಗಿರಲಿಲ್ಲ, ಆದರೆ ಅವರು ಪರಮಾಣು ಬಾಂಬ್ ತಯಾರಿಸಿದರು. ಸತೀಶ್ ಧವನ್ ಮತ್ತು ವಿಕ್ರಂ ಸಾರಾಭಾಯ್ ಅಂತರಿಕ್ಷ ಕಾರ್ಯಕ್ರಮಗಳನ್ನು ರೂಪಿಸಿದರು, ಅವರೂ ಐಎಎಸ್ ಅಧಿಕಾರಿಗಳಾಗಿರಲಿಲ್ಲ. ಎಪಿಜೆ ಅಬ್ದುಲ್ ಕಲಾಂ ಐಎಎಸ್ ಅಧಿಕಾರಿಯಾಗಿರಲಿಲ್ಲ, ಆದರೆ ಅವರು ಪರಮಾಣು ಬಾಂಬ್ ಮತ್ತು ಕ್ಷಿಪಣಿಗಳನ್ನು ತಯಾರಿಸಿದರು. ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ಐಎಎಸ್ ಅಧಿಕಾರಿಯಾಗಿರಲಿಲ್ಲ. ವರ್ಗೀಸ್ ಕುರಿಯನ್ ಕೂಡ ಐಎಎಸ್ ಅಧಿಕಾರಿಯಾಗಿರಲಿಲ್ಲ. ಯಾವುದಾದರೂ ಒಂದು ದೊಡ್ಡ ಕೆಲಸವನ್ನು ಐಎಎಸ್ ಅಧಿಕಾರಿ ಮಾಡಿರುವುದನ್ನು ಹೇಳಿ ಎಂದು ಖಾನ್ ಸರ್ ಪ್ರಶ್ನಿಸಿದ್ದಾರೆ…
ಖಾನ್ ಸರ್ ಅವರ ಪಯಣ ಪಾಟ್ನಾದಲ್ಲಿರುವ ಖಾನ್ ಜಿಎಸ್ ರಿಸರ್ಚ್ ಸೆಂಟರ್ ಎಂಬ ಕೋಚಿಂಗ್ ಸಂಸ್ಥೆಯಿಂದ ಆರಂಭವಾಯಿತು. ಅವರ ಬೋಧನಾ ಶೈಲಿ, ಗಂಭೀರ ವಿಷಯಗಳನ್ನು ಹಾಸ್ಯದ ಮೂಲಕ ವಿವರಿಸುವ ರೀತಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಚಿಂತನೆಗಳು ಅವರನ್ನು ವಿಶಿಷ್ಟರನ್ನಾಗಿ ಮಾಡಿದೆ. ಖಾನ್ ಸರ್ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನದ ಜೊತೆಗೆ ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿಗಳನ್ನೂ ಬೋಧಿಸುತ್ತಾರೆ. ಯುವಕರ ಚಿಂತನೆಗಳು ಸರಿಯಾದ ದಿಕ್ಕಿನಲ್ಲಿ ಇದ್ದರೆ, ಅವರು ಸಮಾಜವನ್ನು ಬದಲಾಯಿಸಬಲ್ಲರು ಎಂಬುದು ಅವರ ಅಭಿಪ್ರಾಯ.
ಖಾನ್ ಸರ್ ಅವರ ಈ ವೈರಲ್ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ. ಹಲವರು ಇದನ್ನು ಲೈಕ್ ಮಾಡಿ ಹಂಚಿಕೊಂಡಿದ್ದಾರೆ. ಜನರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.