ಶೀಘ್ರ ವಿದೇಶಿ ಮಾರುಕಟ್ಟೆಗೆ ಖಾದಿ ಲಗ್ಗೆ

By Ramesh BannikuppeFirst Published Dec 31, 2017, 8:45 AM IST
Highlights

ಯುವ ಸಮೂಹವನ್ನು ಆಕರ್ಷಿಸಲು ಹೊಸ ವಿನ್ಯಾಸದ ಆವಿಷ್ಕಾರಗಳೊಂದಿಗೆ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳು ಶೀಘ್ರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ.

ಬೆಂಗಳೂರು (ಡಿ.30): ಯುವ ಸಮೂಹವನ್ನು ಆಕರ್ಷಿಸಲು ಹೊಸ ವಿನ್ಯಾಸದ ಆವಿಷ್ಕಾರಗಳೊಂದಿಗೆ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳು ಶೀಘ್ರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ.

ನಗರದ ರಾಷ್ಟ್ರೀಯ ವಸ್ತ್ರ ವಿನ್ಯಾಸ ತಂತ್ರಜ್ಞಾನ ಸಂಸ್ಥೆ (ಎನ್‌ಐಎಫ್‌ಟಿ) ಖಾದಿ ಉತ್ಪನ್ನಗಳಿಗೆ ಹೊಸ ರೂಪ, ವಿನ್ಯಾಸ ನೀಡಲು ಮುಂದಾಗಿದೆ. ರಾಜ್ಯದ ಖಾದಿ ಮತ್ತು ಗ್ರಾಮೋದ್ಯೋಗದ ಉತ್ಪನ್ನಗಳನ್ನು ಕಾರ್ಪೊರೇಟ್ ವಲಯ ಹಾಗೂ ಯುವ ಸಮುದಾಯವನ್ನು ಆಕರ್ಷಿಸುವುದಕ್ಕಾಗಿ ಆಧುನಿಕ ಕಾಲಕ್ಕೆ ತಕ್ಕಂತೆ ವಸ್ತ್ರಗಳ ವಿನ್ಯಾಸಗೊಳಿಸಗೊಳಿಸುವ ಸಂಬಂಧ ಗ್ರಾಮೋ ದ್ಯೋಗ ಸಂಘಗಳಲ್ಲಿ ಕಾರ್ಯ ನಿರ್ವಹಿಸು ತ್ತಿರುವರಿಗೆ ತರಬೇತಿ ನೀಡುತ್ತಿದೆ.

ಕರ್ನಾಟದ ವಿವಿಧ ಭಾಗಗಳಲ್ಲಿನ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಪೈಕಿ ಈಗಾಗಲೇ 300 ಜನರಲ್ಲಿ ತರಬೇತಿ ನೀಡಲಾಗಿದೆ. ಶಿವಮೊಗ್ಗ, ಹಾಸನ, ಮಂಡ್ಯ ಬೆಂಗಳೂರು ನಗರ ಮತ್ತು ಗ್ರಾಮಂತರ ಜಿಲ್ಲೆಗಳಿಗೆ ತರಬೇತಿ ಕಾರ್ಯ ಮುಂದುವರಿಯುತ್ತಿದೆ ಎಂದು ಎನ್‌ಐಎಫ್‌ಟಿ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಎನ್‌ಐಎಫ್‌ಟಿಯು ಸಂಶೋಧನೆಗಳ ಮೂಲಕ ಹೊಸ ವಿನ್ಯಾಸಗಳನ್ನು ಈಗಾಗಲೇ ಗುರುತಿಸಲಾಗಿದ್ದು, ವಿವಿಧ ರೀತಿಯ 900 ವಸ್ತ್ರಗಳನ್ನು ಪಟ್ಟಿ ಮಾಡಲಾಗಿದೆ. ಅವುಗಳಲ್ಲಿ 200ಕ್ಕೂ ಹೆಚ್ಚು ವಸ್ತ್ರಗಳ ಉತ್ಪಾದನೆಗೆ ತರಬೇತಿ ನೀಡಲಾಗುತ್ತಿದೆ. ಉತ್ಪಾದನಾ ಕಾರ್ಯ ಶೀಘ್ರದಲ್ಲಿ ಪ್ರಾರಂಭಿಸಲಾಗುತ್ತಿದೆ. ಅಲ್ಲದೆ, ಗ್ರಾಮೋದ್ಯೋಗದ ಅಡಿಯಲ್ಲಿ ಸಿದ್ದಗೊಂಡ ವಸ್ತ್ರಗಳನ್ನು ಎನ್‌ಐಎಫ್‌ಟಿ ತಜ್ಞರು ಪರಿಶೀಲಿಸಿದ ಬಳಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ವಿನ್ಯಾಸಗೊಳ್ಳುವ ಉಡುಪುಗಳು: ಪುರುಷ ಮತ್ತು ಮಹಿಳೆಯರಿಗೆ ಕಚೇರಿ ಸಂದರ್ಭದಲ್ಲಿ ಬಳಸುವ ಉಡುಪುಗಳು, ಸಭೆ, ಸಮಾರಂಭಗಳಲ್ಲಿನ ಧರಿಸುವ ತೊಡುಗೆಗಳನ್ನು ಸಿದ್ಧಪಡಿಸಿ ಜನರ ಕಣ್ಸೆಳೆವ ವಸ್ತ್ರಗಳನ್ನು ಸಿದ್ಧಪಡಿಸಲಾಗಿದೆ. ಅಲ್ಲದೆ, ಮನೆ ಬಳಕೆಗೆ ಕರ್ಟನ್ಸ್‌ಗಳು, ರೇಷ್ಮೆ ಬಟ್ಟೆಯಲ್ಲಿ ಸಿದ್ಧಪಡಿಸಿದ ಆಕರ್ಷಕ ಉಡುಗೊರೆ ಇಡುವ ಕವರ್‌ಗಳನ್ನು ಯಾರಿಸಲಾಗಿದೆ.ಖಾದಿ ಉತ್ಪನ್ನಗಳನ್ನು ಪ್ರಚಾರ ಮತ್ತು ಮಾರಾಟಕ್ಕೆ ವೇದಿಕೆಯಾಗಿ ‘ನಮ್ಮ ಖಾದಿ’ ಹೆಸರಿನಲ್ಲಿ ವೆಬ್‌ಸೈಟ್ ಅನ್ನು ಪ್ರಾರಂಭಿಸುವ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಅಧಿಕಾರಿಗಳು ಹಾಗೂ ಖಾದಿ ಗ್ರಾಮೋದ್ಯೋಗ ಮಂಡಳಿಯೊಂದಿಗೆ ಚರ್ಚೆ ನಡೆಸಲಾಗುತ್ತಿದ್ದು, ಈ ನಿರ್ಧಾರ ಅಂತಿಮಗೊಂಡಲ್ಲಿ ವೆಬ್‌ಸೈಟ್‌ಗೆ ಚಾಲನೆ ದೊರೆಯಲಿದೆ.

click me!