
ನವದೆಹಲಿ (ಡಿ.31): ‘ತ್ರಿವಳಿ ತಲಾಖ್’ ಅಪರಾಧೀಕರಣಗೊಳಿಸುವ ವಿಧೇಯಕದ ರೀತಿಯಲ್ಲೇ ಇದೀಗ ಮತ್ತೊಂದು ಬೇಡಿಕೆ ಇಡಲಾಗಿದೆ. ಮುಸ್ಲಿಮರಲ್ಲಿರುವ ಬಹುಪತ್ನಿತ್ವ ನಿಷೇಧಿಸುವ ವಿಧೇಯಕವನ್ನೂ ಸಿದ್ಧಪಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮುಸ್ಲಿಂ ಮಹಿಳಾ ಸಂಘಟನೆಗಳು ಮನವಿ ಮಾಡಿವೆ.
ನವದೆಹಲಿ: ತ್ರಿವಳಿ ತಲಾಖ್ ವಿರುದ್ಧದ ಹೋರಾಟವು ಸುಪ್ರೀಂ ಕೋರ್ಟ್ ಮತ್ತು ಲೋಕಸಭೆಯಲ್ಲಿ ಯಶಸ್ವಿಯಾಗಿರುವ ನಡುವೆಯೇ ಮುಸ್ಲಿಂ ಮಹಿಳಾ ಸಂಘಟನೆಗಳು ಈಗ ಬಹುಪತ್ನಿತ್ವದ ವಿರುದ್ಧ ಸಿಡಿದೇಳಲು ಮುಂದಾಗಿವೆ. ಮುಸ್ಲಿಂ ಸಮಾಜದಲ್ಲಿರುವ ಬಹುಪತ್ನಿತ್ವ ರದ್ದುಗೊಳಿಸುವ ವಿಧೇಯಕವನ್ನೂ ಸಿದ್ಧಪಡಿಸಬೇಕು ಎಂದು ಸರ್ಕಾರಕ್ಕೆ ಈ ಸಂಘಟನೆಗಳು ಮನವಿ ಮಾಡಿವೆ. ‘ತ್ರಿವಳಿ ತಲಾಖ್‌ಗಿಂತ ಕೆಟ್ಟ ಪದ್ಧತಿ ಬಹುಪತ್ನಿತ್ವ.
ಮುಸ್ಲಿಮರಲ್ಲಿ ಓರ್ವ ವ್ಯಕ್ತಿ 4 ಪತ್ನಿಯರನ್ನು ಹೊಂದಬಹುದಾಗಿದೆ. ಬಹುಪತ್ನಿತ್ವ ಅಸ್ತಿತ್ವದಲ್ಲಿರುವಾಗ ತ್ರಿವಳಿ ತಲಾಖನ್ನು ಅಸಿಂಧುಗೊಳಿಸುವುದು ಪರಿಣಾಮಕಾರಿಯಾಗಿರದು’ ಎಂದು ಸಂಘಟನೆಗಳು ಹೇಳಿವೆ.
ತಲಾಖ್ ಮಸೂದೆ ಆಯ್ದ ಸಮಿತಿಗೆ?: ತ್ರಿವಳಿ ತಲಾಖ್ ನಿಷೇಧ ಮಸೂದೆ ಮಂಗಳವಾರ ರಾಜ್ಯಸಭೆಯಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ. ಆದರೆ ಇಲ್ಲಿ ಮಸೂದೆ ಸರಳವಾಗಿ ಅನುಮೋದನೆ ಆಗುವುದು ಅನುಮಾನವಾಗಿದ್ದು, ಹೆಚ್ಚಿನ ಸಮಾಲೋಚನೆಗಾಗಿ ‘ಆಯ್ದ ಸಮಿತಿ’ ಸುಪರ್ದಿಗೆ ಹೋಗುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.