
ಕೆಎಫ್‌ಸಿಯಲ್ಲಿ ಕ್ರಿಸ್ಪಿಯಾದ ಚಿಕನ್ ಸವಿಯಬೇಕು ಎಂಬ ಆಸೆ. ಆದ್ರೆ, ಶುದ್ಧ ಸಸ್ಯಾಹಾರಿಗಳಾದ ನಿಮಗೆ ಚಿಕನ್ ಮತ್ತು ಮಟನ್ ಸೇರಿದಂತೆ ಇನ್ನಿತರ ಯಾವುದೇ ಮಾಂಸಹಾರ ಪದಾರ್ಥಗಳನ್ನು ಸೇವಿಸಬಾರದು ಎಂಬ ಚಿಂತೆಯೇ.
ಇದಕ್ಕೆಲ್ಲ ಇನ್ನು ಕೊರಗಬೇಕಿಲ್ಲ.
ಯಾಕೆಂದ್ರೆ, ಮುಂದಿನ ದಿನಗಳಲ್ಲಿ ನೀವು ಚಿಕನ್ ರೀತಿಯೇ ಮಜಾ ಕೊಡುವ ವೆಜಿಟೇರಿಯನ್ ಫ್ರೈಡ್ ಚಿಕನ್ ಅನ್ನು ಸವಿಯಬಹುದು. ಮೊದಲಿಗೆ ಬ್ರಿಟನ್‌ನಲ್ಲಿ ವೆಜಿಟೇರಿಯನ್ ಫ್ರೈಡ್ ಚಿಕನ್ ಅನ್ನು ಮಾರಾಟ ಮಾಡಲಾಗುತ್ತದೆ. ನಂತರದ ದಿನಗಳಲ್ಲಿ ಇತರ ದೇಶಗಳಿಗೆ ವಿಸ್ತರಿಸಲಾಗುತ್ತದೆ ಎಂದು ಕೆಎಫ್‌ಸಿ ಹೇಳಿದೆ ಎಂಬುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.