ಜನರ ಕೈಲಿ ಈಗ 18 ಲಕ್ಷ ಕೋಟಿ ರು. ನಗದು

First Published Jun 11, 2018, 9:41 AM IST
Highlights

ಜನರ ಬಳಿಯ ನಗದು ಈಗ ದಾಖಲೆಯ 18.5 ಲಕ್ಷ ಕೋಟಿ ರು.ಗೆ ತಲುಪಿದೆ. ಇದರಿಂದಾಗಿ ಅಪನಗದೀಕರಣದ ಸಂದರ್ಭದಲ್ಲಿ (2016ರ ನ.8) 7.8 ಲಕ್ಷ ಕೋಟಿ ರು.ಗೆ ಕುಸಿದಿದ್ದ ನಗದು ಪ್ರಮಾಣ ಈಗ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ.
 

ನವದೆಹಲಿ :  ಜನರ ಬಳಿಯ ನಗದು ಈಗ ದಾಖಲೆಯ 18.5 ಲಕ್ಷ ಕೋಟಿ ರು.ಗೆ ತಲುಪಿದೆ. ಇದರಿಂದಾಗಿ ಅಪನಗದೀಕರಣದ ಸಂದರ್ಭದಲ್ಲಿ (2016ರ ನ.8) 7.8 ಲಕ್ಷ ಕೋಟಿ ರು.ಗೆ ಕುಸಿದಿದ್ದ ನಗದು ಪ್ರಮಾಣ ಈಗ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ.

ಇದೇ ವೇಳೆ ರಿಸವ್‌ರ್‍ ಬ್ಯಾಂಕ್‌ ಹರಿಬಿಟ್ಟನಗದಿನ ಪ್ರಮಾಣ ಕೂಡ ದುಪ್ಪಟ್ಟಾಗಿದೆ. ಅಪನಗದೀಕರಣದ ಸಂದರ್ಭದಲ್ಲಿ 8.9 ಲಕ್ಷ ಕೋಟಿ ರು.ಗಳನ್ನು ಆರ್‌ಬಿಐ ಹರಿಬಿಟ್ಟಿತ್ತು. ಇದು ಅತಿ ಕನಿಷ್ಠವಾಗಿತ್ತು. ಆದರೆ ಈಗ 19.33 ಲಕ್ಷ ಕೋಟಿ ರು.ಗೆ ಏರಿದೆ ಎಂದು ಆರ್‌ಬಿಐ ದತ್ತಾಂಶಗಳು ಹೇಳಿವೆ.

ಇದರಿಂದಗಿ ಅಪನಗದೀಕರಣಕ್ಕಿಂಗತ ಮೊದಲು ಇದ್ದ ಪರಿಸ್ಥಿತಿಗೆ ಬಹುತೇಕ ಮರಳಿದಂತಾಗಿದೆ ಎಂದು ಸರ್ಕಾರದ ಅಧಿಕಾರಿಗಳ ಅನಿಸಿಕೆಯಾಗಿದೆ. ‘1-2 ತಿಂಗಳ ಹಿಂದೆ ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ಹಣವನ್ನು ಅಕ್ರಮವಾಗಿ ಕೂಡಿಡಲಾಗುತ್ತಿದೆ. ಈ ಮೂಲಕ ಕೃತಕ ನಗದು ಅಭಾವ ಸೃಷ್ಟಿಸಲಾಗುತ್ತಿದೆ’ ಎಂಬ ಆರೋಪ ಕೇಳಿಬರುತ್ತಿತ್ತು. ಆದರೆ ಇದು ಈಗ ನೀಗಿದೆ ಎಂದು ಅಧಿಕಾರಿಗಳ ಸಮರ್ಥನೆಯಾಗಿದೆ.

ಜೂನ್‌ 2017ರ ವೇಳೆಗೆ 15.44 ಲಕ್ಷ ಕೋಟಿ ರು. ಮೌಲ್ಯದ ರದ್ದಾದ ನೋಟುಗಳ ಪೈಕಿ 15.28 ಲಕ್ಷ ಕೋಟಿ ರು. ಚಲಾವಣೆಗೆ ಬಂದಿದ್ದವು. ಅಂದರೆ ಸುಮಾರು ಶೇ.99ರಷ್ಟುರದ್ದಾದ ನೋಟುಗಳು ವಾಪಸ್‌ ಬಂದಂತಾಗಿತ್ತು.

click me!