ಗ್ರಾಹಕರಿಗೆ ಎಲ್'ಪಿಜಿ ಬಳಿಕ ಸೀಮೆಎಣ್ಣೆ ಶಾಕ್: ಸೀಮೆಎಣ್ಣೆ ದರವೂ 15 ದಿನಕ್ಕೊಮ್ಮೆ ಏರಿಕೆ

Published : Aug 04, 2017, 01:24 PM ISTUpdated : Apr 11, 2018, 01:06 PM IST
ಗ್ರಾಹಕರಿಗೆ ಎಲ್'ಪಿಜಿ ಬಳಿಕ ಸೀಮೆಎಣ್ಣೆ ಶಾಕ್: ಸೀಮೆಎಣ್ಣೆ ದರವೂ 15 ದಿನಕ್ಕೊಮ್ಮೆ ಏರಿಕೆ

ಸಾರಾಂಶ

2018ರ ಮಾರ್ಚ್ ವೇಳೆಗೆ ಎಲ್‌'ಪಿಜಿ ಸಬ್ಸಿಡಿಯನ್ನು ಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಿರುವ ನಡುವೆಯೇ, ಕಡುಬಡವರು ಬಳಸುವ ಸೀಮೆ ಎಣ್ಣೆ ಬೆಲೆಯನ್ನೂ 15 ದಿನಕ್ಕೊಮ್ಮೆ ಏರಿಸುವ ಯೋಜನೆಯನ್ನು ಸರ್ಕಾರ ಸದ್ದಿಲ್ಲದೇ ಜಾರಿಗೆ ತಂದಿರುವುದು ಬೆಳಕಿಗೆ ಬಂದಿದೆ.

ನವದೆಹಲಿ(ಆ.04): 2018ರ ಮಾರ್ಚ್ ವೇಳೆಗೆ ಎಲ್‌'ಪಿಜಿ ಸಬ್ಸಿಡಿಯನ್ನು ಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಿರುವ ನಡುವೆಯೇ, ಕಡುಬಡವರು ಬಳಸುವ ಸೀಮೆ ಎಣ್ಣೆ ಬೆಲೆಯನ್ನೂ 15 ದಿನಕ್ಕೊಮ್ಮೆ ಏರಿಸುವ ಯೋಜನೆಯನ್ನು ಸರ್ಕಾರ ಸದ್ದಿಲ್ಲದೇ ಜಾರಿಗೆ ತಂದಿರುವುದು ಬೆಳಕಿಗೆ ಬಂದಿದೆ.

ಪಡಿತರ ವ್ಯವಸ್ಥೆಯಲ್ಲಿ ವಿತರಿಸುವ ಸೀಮೆಎಣ್ಣೆ ಬೆಲೆಯನ್ನು ಪ್ರತಿ 15 ದಿನಗಳಿಗೊಮ್ಮೆ 25 ಪೈಸೆಯಂತೆ ಏರಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಸರ್ಕಾರ ಸೂಚಿಸಿದೆ. ಕಳೆದ ವರ್ಷ ಕೂಡಾ ತೈಲ ಕಂಪನಿಗಳ ಬೇಡಿಕೆಯಂತೆ ಮಾಸಿಕ 50 ಪೈಸೆಯಷ್ಟು ದರ ಏರಿಕೆ ಮಾಡಲು ಸರ್ಕಾರ ಸಮ್ಮತಿಸಿತ್ತು. ಅದರ ಹೊರತಾಗಿ ಈ ಏರಿಕೆಗೆ ಸರ್ಕಾರದಿಂದ ಸೂಚನೆ ಹೊರಬಿದ್ದಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಎಲ್‌ಪಿಜಿ ಸಬ್ಸಿಡಿಯನ್ನು ಪೂರ್ಣವಾಗಿ ರದ್ದುಗೊಳಿಸುವ ನಿಟ್ಟಿನಲ್ಲಿ ಮಾಸಿಕ 4 ರು.ನಷ್ಟು ಏರಿಕೆ ಮಾಡಲು ನಿರ್ಧಸಲಾಗಿದೆ ಎಂದು ಸರ್ಕಾರ ಇತ್ತೀಚೆಗೆ ಮಾಹಿತಿ ನೀಡಿತ್ತು. ಇದಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಸೀಮೆಎಣ್ಣೆ ಬೆಲೆಯನ್ನೂ ಏರಿಸಲು ಸರ್ಕಾರ ನಿರ್ಧರಿಸಿರುವುದು ಬೆಳಕಿಗೆ ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಣರಾಜ್ಯ ದಿನದಲ್ಲೂ ಸರ್ಕಾರ V/s ಗೌರ್ನರ್‌ ಸಂಘರ್ಷ?: ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣ ಓದ್ತಾರಾ?
ಮನೆ ಮುಂದೆ ಕಾರು ನಿಲ್ಲಿಸಿದ್ದಕ್ಕೆ ಕಾಂಗ್ರೆಸ್‌ ನಾಯಕನ ಕುಟುಂಬದವರ ಜತೆ ಸ್ಥಳೀಯರ ಜಗಳ