ರೂಢಿಗತ ಸಂಪ್ರದಾಯ ಮುರಿದ ಕೇರಳದ ಮುಸ್ಲಿಂ ಮಹಿಳಾ ಇಮಾಂ

By Suvarna Web DeskFirst Published Jan 28, 2018, 10:24 AM IST
Highlights

ರೂಢಿಗತ ಸಂಪ್ರದಾಯವೊಂದನ್ನು ಮುರಿದ ಕೇರಳದ 34ರ ಹರೆಯದ ಮುಸ್ಲಿಂ ಮಹಿಳಾ ಇಮಾಂ ಒಬ್ಬರು ಶುಕ್ರವಾರದ ಪ್ರಾರ್ಥನೆ ಸೇವೆಯನ್ನು ನಿರ್ವಹಿಸಿದ್ದಾರೆ.

ಮಲಪ್ಪುರಂ: ರೂಢಿಗತ ಸಂಪ್ರದಾಯವೊಂದನ್ನು ಮುರಿದ ಕೇರಳದ 34ರ ಹರೆಯದ ಮುಸ್ಲಿಂ ಮಹಿಳಾ ಇಮಾಂ ಒಬ್ಬರು ಶುಕ್ರವಾರದ ಪ್ರಾರ್ಥನೆ ಸೇವೆಯನ್ನು ನಿರ್ವಹಿಸಿದ್ದಾರೆ. ದೇಶದ ಇತಿಹಾಸದಲ್ಲೇ ಇದು ಇಂಥ ಮೊದಲ ಘಟನೆ ಎನ್ನಲಾಗಿದೆ. ಕುರಾನ್ ಸುನ್ನತ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಜಮಿತಾ ಪ್ರಾರ್ಥನೆ ಸಲ್ಲಿಸುವ ‘ಇಮಾಂ’ರ ಕಾರ್ಯ ನಿರ್ವಹಿಸಿದರು.

ಮುಸ್ಲಿಂ ಪ್ರಾಬಲ್ಯದ ಮಲಪ್ಪುರಂ ನಲ್ಲಿರುವ ಸೊಸೈಟಿಯ ಕಚೇರಿಯಲ್ಲಿ ಈ ಪ್ರಾರ್ಥನಾ ಕಾರ್ಯಕ್ರಮ ನಡೆಯಿತು. ಸಾಮಾನ್ಯವಾಗಿ ಶುಕ್ರವಾರದ ಪ್ರಾರ್ಥನೆ ಮುಸ್ಲಿಂ ಪುರುಷ ಧಾರ್ಮಿಕ ವ್ಯಕ್ತಿಯಿಂದ ನಡೆಯುತ್ತದೆ. ಆದರೆ ಮಹಿಳಾ ಇಮಾಂರಿಂದ ನಡೆದ ಈ ಕಾರ್ಯಕ್ರಮದಲ್ಲಿ 80 ಮಂದಿ ಭಾಗಿಯಾದರು. ಪವಿತ್ರ ಕುರಾನ್‌ನಲ್ಲಿ ಮಹಿಳೆಯರು, ಪುರುಷರ ನಡುವೆ ತಾರತಮ್ಯ ವಿಲ್ಲ, ಮಹಿಳೆಯರು ಇಮಾಮ್‌ಗಳಾಗುವುದಕ್ಕೆ ಇಸ್ಲಾಂನಲ್ಲಿ ವಿರೋಧವಿಲ್ಲ ಎಂದು ಜಮಿತಾ ತಿಳಿಸಿದ್ದಾರೆ.

ಜಮಿತಾ, ಇನ್ನು ಮುಂದೆ ಶುಕ್ರವಾರದ ಪ್ರಾರ್ಥನೆ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಶುಕ್ರವಾರದ ಪ್ರಾರ್ಥನೆ ಮಸೀದಿಗಳಲ್ಲೇ ನಡೆಯಬೇಕೆಂಬ ನಿಯಮಗಳಿಲ್ಲ ಎಂದೂ ಅವರು ಹೇಳಿದ್ದಾರೆ.  

click me!