ಕೇರಳ ಪ್ರವಾಹಕ್ಕೆ 30 ಬಲಿ, ಕಾಸರಗೋಡು ಸೇರಿ 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

By Web DeskFirst Published Aug 9, 2019, 8:09 PM IST
Highlights

ರಣ ಭೀಕರ ಮಳೆ ಕೇರಳವನ್ನು ಆವರಿಸಿದೆ. ಭೂ ಕುಸಿತದಲ್ಲಿ 40 ಜನ ಸಾವನ್ನಪ್ಪಿರುವ ಸುದ್ದಿ ಗುರುವಾರ ವರದಿಯಾಗಿತ್ತು. ಈಗ ಮತ್ತಷ್ಟು ಜನರು ಮನೆ ಕಳೆದುಕೊಂಡಿದ್ದಾರೆ. ಶುಕ್ರವಾರದ ಮಳೆ ಅನಾಹುತಕ್ಕೆ 30 ಜನ ಪ್ರಾಣ ಕಳೆದುಕೊಂಡಿದ್ದಾರೆ.

ತಿರುವನಂತಪುರ[ಆ. 09]  ಕೇರಳದಲ್ಲೂ ರಣ ಭೀಕರ ಮಳೆಯಾಗುತ್ತಿದೆ. ವಯನಾಡಿನ ಮೆಪ್ಪಾಡಿ ಪುತ್ತುಮಲ ಎಂಬಲ್ಲಿ ಗುರುವಾರ ಭೂ ಕುಸಿತ ಸಂಭವಿಸಿ ಮಣ್ಣಿನಡಿ ಸಿಕ್ಕ ಜನರ ಮಾಹಿತಿ ಇನ್ನು ಸ್ಪಷ್ಟವಾಗಿ ಸಿಕ್ಕಿಲ್ಲ. 

ಕೇರಳದ 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಎರ್ನಾಕುಲಂ, ಉಡುಕ್ಕಿ, ತ್ರಿಶೂರ್.ಮಲ್ಲಪುರಂ, ಪಾಲಕ್ಕಾಡ್, ವಯನಾಡ್, ಕಣ್ಣೂರು, ಕಾಸರಗೋಡು ಮತ್ತು ಕೋಝೀಕೋಡ್ ನಲ್ಲಿ ರೆಡ್ ಅಲರ್ಟ್ ಇದೆ. 330 ನಿರಾಶ್ರಿತರ ಕೇಂದ್ರ ತೆರೆಯಲಾಗಿದ್ದು, 22, 500 ಜನರ ರಕ್ಷಣೆ ಮಾಡಲಾಗಿದೆ.

ಕೇರಳದಲ್ಲೂ ರಣ ಭೀಕರ ಮಳೆ, ವಯನಾಡ್ ಭೂ ಕುಸಿತಕ್ಕೆ 40 ಬಲಿ

ಭೀಕರ ಮಳೆಗೆ 30 ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದ್ದು ಆಗಸ್ಟ್ 11 ರಿಂದ ಆರಂಭವಾಗುವ ಸಾಧ್ಯತೆ ಇದೆ. ಅಲಪುಜ, ಎರ್ನಾಕುಲಂ ಮತ್ತು ಪಟ್ಟನಂತಿಟ್ಟದಲ್ಲಿ ಸೇನೆ ರಕ್ಷಣಾ ಕಾರ್ಯ ನಡೆಸುತ್ತಿದೆ.

 

 

click me!