ಅಯೋಧ್ಯೆ ರಾಮನ ಜನ್ಮಸ್ಥಾನ ಅಂತಾ ಇಬ್ರೂ ಹೇಳ್ತಾರೆ: ಸುಪ್ರೀಂ!

By Web DeskFirst Published Aug 9, 2019, 7:53 PM IST
Highlights

ಅಯೋಧ್ಯೆ ರಾಮನ ಜನ್ಮಸ್ಥಾನ ಎಂಬುದು ನಿರ್ವಿವಾದಿತ|  ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮ ಭೂಮಿ-ಬಾಬರಿ ಮಸೀದಿ ಪ್ರಕರಣ| ‘ಎರಡೂ ಪಕ್ಷಗಳ ಅರ್ಜಿದಾರರು ಅಯೋಧ್ಯೆ ರಾಮನ ಜನ್ಮಸ್ಥಾನ ಎಂದು ಒಪ್ಪುತ್ತಾರೆ’| ರಾಮ್ ಲಲ್ಲಾ ಪರ ವಕೀಲ ಕೆ. ಪರಾಸರನ್ ಸುಪ್ರೀಂಕೋರ್ಟ್’ಗೆ ಮಾಹಿತಿ|

ನವದೆಹಲಿ(ಆ.09): ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮ ಭೂಮಿ-ಬಾಬರಿ ಮಸೀದಿಯ ಎರಡೂ ಪಕ್ಷಗಳ ಅರ್ಜಿದಾರರು, ಅಯೋಧ್ಯೆಯನ್ನು ರಾಮನ ಜನ್ಮಸ್ಥಳ ಎಂದು ಒಪ್ಪುತ್ತಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ರಾಮ್ ಲಲ್ಲಾ ಪರ ವಕೀಲ ಕೆ. ಪರಾಸರನ್, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೋಗೊಯ್ ನೇತೃತ್ವದ ಪಂಚ ಪೀಠಕ್ಕೆ ಇದನ್ನು ರಾಮನ ಜನ್ಮಸ್ಥಳ ಎಂದು ಅರ್ಥೈಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ. 

ಇದೇ ವೇಳೆ ವಿವಾದಿತ 2.77 ಎಕರೆ ಭೂಮಿಯನ್ನು ಮೂರು ಭಾಗಗಳಾಗಿ ವಿಂಗಡಿಸಿ 2010ರ ಸೆಪ್ಟೆಂಬರ್ 30ರಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ಬಗ್ಗೆ ಪರಾಸರನ್ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

click me!