ವಿದ್ಯಾರ್ಥಿನಿಯರು ಜೀನ್ಸ್ ಧರಿಸಬಾರದೆಂದು ತಾಕೀತು ಮಾಡಿದ ಸರ್ಕಾರಿ ಕಾಲೇಜು

Published : Oct 23, 2016, 01:28 AM ISTUpdated : Apr 11, 2018, 01:10 PM IST
ವಿದ್ಯಾರ್ಥಿನಿಯರು ಜೀನ್ಸ್ ಧರಿಸಬಾರದೆಂದು  ತಾಕೀತು ಮಾಡಿದ ಸರ್ಕಾರಿ ಕಾಲೇಜು

ಸಾರಾಂಶ

ವಿದ್ಯಾರ್ಥಿನಿಯರು ಸೀರೆ ಹಾಗೂ ಚೂಡಿದಾರವನ್ನು ಧರಿಸಬೇಕು ಹಾಗೂ ಕೂದಲನ್ನು ಬಿಡುವಂತಿಲ್ಲ, ವಿವಿಧ ರೀತಿಯ ಕೇಶವಿನ್ಯಾಸ ಮಾಡುವಂತಿಲ್ಲ, ಕೂದಲನ್ನು ಕಟ್ಟಿ ಹಿಂಬದಿ ಗಂಟು ಹಾಕಬೇಕು, ಆಡಂಬರದ ಆಭರಣಗಳನ್ನು ಹಾಕುವಂತಿಲ್ಲ ಎಂಬೆಲ್ಲಾ ಸೂಚನೆಗಳನ್ನು ನೀಡಿದೆ

ತಿರುವನಂತಪುರ(ಅ.23): ವೈದ್ಯಕೀಯ ವಿದ್ಯಾರ್ಥಿನಿಯರು ಕಾಲೇಜಿನ ಆವರಣದಲ್ಲಿ ಜೀನ್ಸ್, ಟೀ-ಶರ್ಟ್ಸ್ ಹಾಗೂ ಲೆಗಿಂಗ್ಸ್‌ಗಳನ್ನು ಕಡ್ಡಾಯವಾಗಿ ಹಾಕುವಂತಿಲ್ಲ ಎಂದು ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕಾಲೇಜಿನಲ್ಲಿ ಬಿಳಿಯ ಕೋಟ್ ಹಾಗೂ ಐಡಿ ಕಾರ್ಡನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಆಡಳಿತ ಮಂಡಳಿ ಆದೇಶ ನೀಡಿದೆ ಎಂದು ‘ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ವಿದ್ಯಾರ್ಥಿನಿಯರು ವಾರ್ಡ್‌ಗಳಿಗೆ ಭೇಟಿ ನೀಡಿದಾಗ ಅಲ್ಲಿ ಹಲವು ಮನಸ್ಥಿತಿಯ ಜನರಿರುತ್ತಾರೆ ಹಾಗೂ ಸೋಂಕು ತಗುಲಿದ ರೋಗಿಗಳಿರುತ್ತಾರೆ ಆದ್ದರಿಂದ ವಸ ಸಂಹಿತೆ ಅವರ ರಕ್ಷಣೆಗಾಗಿ ಅವಶ್ಯವಿದೆ ಎಂದು ಆಡಳಿತ ಮಂಡಳಿ ಸಮರ್ಥಿಸಿದೆ. ವಿದ್ಯಾರ್ಥಿನಿಯರು ಸೀರೆ ಹಾಗೂ ಚೂಡಿದಾರವನ್ನು ಧರಿಸಬೇಕು ಹಾಗೂ ಕೂದಲನ್ನು ಬಿಡುವಂತಿಲ್ಲ, ವಿವಿಧ ರೀತಿಯ ಕೇಶವಿನ್ಯಾಸ ಮಾಡುವಂತಿಲ್ಲ, ಕೂದಲನ್ನು ಕಟ್ಟಿ ಹಿಂಬದಿ ಗಂಟು ಹಾಕಬೇಕು, ಆಡಂಬರದ ಆಭರಣಗಳನ್ನು ಹಾಕುವಂತಿಲ್ಲ ಎಂಬೆಲ್ಲಾ ಸೂಚನೆಗಳನ್ನು ನೀಡಿದೆ. ಇದೇ ವೇಳೆ ಪುರುಷ ವಿದ್ಯಾರ್ಥಿಗಳು ಸಹ ಶೂ ಸಹಿತ ಫಾರ್ಮಲ್ ಉಡುಗೆ ಧರಿಸಬೇಕೆಂಬ ನಿಯಮಗಳನ್ನು ವಿಸಿದೆ. ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ, ಅಡಳಿತ ಮಂಡಳಿ ಹೇಳಿದೆ. ಈ ಕ್ರಮಕ್ಕೆ ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೈದ್ಯಾಧಿಕಾರಿಯಿಂದ ನರ್ಸ್‌ಗೆ ನಿರಂತರ ಕಿರುಕುಳ, ಆಸ್ಪತ್ರೆಯಲ್ಲೇ 20ಕ್ಕೂ ಹೆಚ್ಚು ನಿದ್ರೆ ಮಾತ್ರೆ ಸೇವಿಸಿ ಆತ್ಮ*ಹತ್ಯೆ ಯತ್ನ!
2 ಮಕ್ಕಳಾದ ನಂತರವು ಮುಸ್ಲಿಂ ಸೊಸೆಯ ಒಪ್ಪಿಕೊಳ್ಳದ ಪೋಷಕರು: ವಿಚ್ಛೇದನ ನೀಡಲು ಮುಂದಾದ ಮಗನಿಂದ ಆಯ್ತು ಘೋರ ಅಪರಾಧ