ಕನಕ ನಡೆ: ಯುವ ಬ್ರಿಗೇಡ್'ನಿಂದ ಮಠದ ಒಳಾಂಗಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

Published : Oct 23, 2016, 12:16 AM ISTUpdated : Apr 11, 2018, 12:39 PM IST
ಕನಕ ನಡೆ: ಯುವ ಬ್ರಿಗೇಡ್'ನಿಂದ ಮಠದ ಒಳಾಂಗಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಸಾರಾಂಶ

ಉಡುಪಿ ನಗರದಲ್ಲಿ ಆಯೋಜಿಸಲಾಗಿದ್ದ ಕನಕ ನಡೆಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ, ಯುವ ಬ್ರಿಗೇಡ್  ಕಾರ್ಯಕರ್ತರು ಮಠದ ಓಳಾಂಗಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಉಡುಪಿ (ಅ.23): ಉಡುಪಿಯಲ್ಲಿ ಆಯೋಜಿಸಲಾಗಿದ್ದ ಕನಕ ನಡೆಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ, ಯುವ ಬ್ರಿಗೇಡ್  ಕಾರ್ಯಕರ್ತರು ಮಠದ ಓಳಾಂಗಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಯುವ ಬ್ರಿಗೇಡ್ ನೇತೃತ್ವದಲ್ಲಿ ಕನಕ ನಡೆ ಹೆಸರಲ್ಲಿ ನಗರದ ಸ್ವಚ್ಛತಾ ಕಾರ್ಯಕ್ರಮ ನಡೆಸಲು ಚಿಂತಿಸಲಾಗಿತ್ತು. ಆದರೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇದಕ್ಕೆ ಅನುಮತಿ ನಿರಾಕರಿಸಿತ್ತು.

ಯುವ ಬ್ರಿಗೇಡ್​​​​​ಗೆ ಇಂದು ಡೂಮ್ಸ್ ಡೇ. ಈ ದಿನಕ್ಕಾಗಿ ಕಾಯುತ್ತಿದ್ದೆವು, ಕನಕ ನಡೆ ಕೃಷ್ಣ ಮಠಕ್ಕೆ ಸೀಮಿತ. ನಾವು ರಸ್ತೆಗೆ ಇಳಿಯುವುದಿಲ್ಲ ಸರ್ಕಾರದ ಆದೇಶ ಧಿಕ್ಕರಿಸಲ್ಲ. ಇದು ಚಲೋ ಉಡುಪಿ, ದಲಿತ ವಿರೋಧಿ ಅಲ್ಲ. ಕನಕ ನಡೆಯಲ್ಲಿ ಹೆಚ್ಚು ದಲಿತರೇ ಇದ್ದಾರೆ. ಕನಕನ ಮಾರ್ಗದಲ್ಲಿ ಕೃಷ್ಣನನ್ನು ನೋಡುತ್ತೇವೆ.

ಚಕ್ರವರ್ತಿ ಸೂಲಿಬೆಲೆ, ಯುವಬ್ರಿಗೇಡ್​​ ಮುಖಂಡ

ಹೀಗಾಗಿ ಯುವ ಬ್ರಿಗೇಡ್​, ಮಠದ ಓಳಾಂಗಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿದೆ. ಕನಕ ನಡೆ ಆಯೋಜನೆಯಾದರೆ ಅದಕ್ಕೆ ಪ್ರತಿಯಾಗಿ ಸ್ವಾಭಿಮಾನಿ ಜಾಥಾ ನಡೆಸುವುದಾಗಿ ಪ್ರಗತಿಪರ ಮತ್ತು ದಲಿತ ಸಂಘಟನೆಗಳು ಎಚರಿಸಿದ್ದವು. ಇದರಿಂದ ಸಂಘರ್ಷವಾಗಬಹುದು ಎನ್ನುವ ಕಾರಣಕ್ಕೆ ಎರಡೂ ಕಾರ್ಯಕ್ರಮಕ್ಕೆ ಅನುಮತಿ ನಿರಕರಿಸಲಾಗಿತ್ತು.

ಇದೊಂದು ಸಾಂಕೇತಿಕ ಸ್ವಚ್ಛತಾ ಕಾರ್ಯಕ್ರಮ. ಕ್ರಾಂತಿಯಲ್ಲ ಇದು ಶಾಂತಿಯ ಆಂದೋಲನ. ರಸ್ತೆ, ಉದ್ಯಾನ, ಗಲ್ಲಿಗಳು ಸ್ವಚ್ಛವಾಗಬೇಕು. ಬಹಿರಂಗ ಶುದ್ಧಿ ಜೊತೆಗೆ ಅಂತರಂಗ ಶುದ್ಧಿಯೂ ಆಗಬೇಕು. ಕನಕ ನಡೆ ಸರ್ಕಾರದ ಆದೇಶದ ಮಿತಿಯಲ್ಲಿ ನಡೆಯುತ್ತಿದೆ. ಇದೊಂದು ಮಾದರಿ ಕಾರ್ಯಕ್ರಮವಾಗಲಿ.

ಪೇಜಾವರಶ್ರೀ 

ಇನ್ನು ಅಹಿತಕರ ಘಟನೆ ನಡೆಯದಂತೆ ಮಠದ ಸುತ್ತ ಬಿಗಿ ಪೋಲಿಸ್ ಭದ್ರತೆ ಮಾಡಲಾಗಿದ್ದು, 5 ಕೆ.ಎಸ್.ಆರ್.ಪಿ, 10 ಡಿ.ಎ.ಆರ್ ತುಕಡಿಗಳ ನಿಯೋಜನೆ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್‌ಒ ಪ್ಲ್ಯಾಂಟ್‌ಗಳ ನಿರ್ವಹಣೆಯೇ ಸರ್ಕಾರಕ್ಕೆ ಸವಾಲು: ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?
ತಪ್ಪು ಮಾಹಿತಿ ಕೊಟ್ಟಿದ್ರೆ ಹೆಬ್ಬಾಳ್ಕರ್‌ ವಿರುದ್ಧ ಹಕ್ಯುಚ್ಯುತಿ ಮಂಡಿಸಿ: ಡಿ.ಕೆ.ಶಿವಕುಮಾರ್‌