ಪದ್ಮನಾಭ ದೇಗುಲಕ್ಕೆ ಚೂಡಿದಾರ್ ಧರಿಸಿ ಹೋಗುವಂತಿಲ್ಲ : ಹೈಕೋರ್ಟ್

By Suvarna Web DeskFirst Published Dec 8, 2016, 10:08 AM IST
Highlights

ಇಲ್ಲಿನ ಪ್ರಖ್ಯಾತ ಪದ್ಮನಾಭಸ್ವಾಮಿ ದೇವಾಲಯದ ಒಳಗೆ ಮಹಿಳೆಯರು ಚೂಡಿದಾರ, ಸಲ್ವಾರ್ ಕಮೀಜ್ ಧರಿಸಿ ಪ್ರವೇಶಿಸುವುದನ್ನು ಕೇರಳ ಹೈಕೋರ್ಟ್ ನಿಷೇಧಿಸಿದೆ.

ತಿರುವನಂತಪುರಂ (ಡಿ.08): ಇಲ್ಲಿನ ಪ್ರಖ್ಯಾತ ಪದ್ಮನಾಭಸ್ವಾಮಿ ದೇವಾಲಯದ ಒಳಗೆ ಮಹಿಳೆಯರು ಚೂಡಿದಾರ, ಸಲ್ವಾರ್ ಕಮೀಜ್ ಧರಿಸಿ ಪ್ರವೇಶಿಸುವುದನ್ನು ಕೇರಳ ಹೈಕೋರ್ಟ್ ನಿಷೇಧಿಸಿದೆ.

ದೇವಸ್ಥಾನದ ಸಂಪ್ರದಾಯದ ಪ್ರಕಾರ ಚೂಡಿದಾರ್ ಅಥವಾ ಸಲ್ವಾರನ್ನು ಧರಿಸಿ ಪ್ರವೇಶಿಸುವಂತಿಲ್ಲ. ಒಂದು ವೇಳೆ ಚೂಡಿದಾರ್ ಧರಿಸಿದ್ದರೆ ಸೊಂಟಕ್ಕೆ ಧೋತಿಯನ್ನು ಸುತ್ತಿಕೊಳ್ಳಬೇಕು. ಸೀರೆಯನ್ನು ಧರಿಸಿರುವ ಮಹಿಳೆಯರಿಗೆ ಮಾತ್ರ ಪ್ರವೇಶಕ್ಕೆ

ಅವಕಾಶ  ನೀಡಲಾಗುವುದು ಎಂದು ಉಚ್ಚ ನ್ಯಾಯಾಲಯ ಹೇಳಿದೆ.

ಕಳೆದ ತಿಂಗಳು ದೇವಾಲಯ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಚೂಡಿದಾರ್ ಧರಿಸಿರುವ ಮಹಿಳೆಯರಿಗೆ ದೇವಸ್ಥಾನದ ಒಳಭಾಗ ಪ್ರವೇಶಿಸಲು ಅವಕಾಶ ನೀಡಿದ್ದರು. ಇದು ಸಂಬಂಧಪಟ್ಟ ಕೆಲ ಅಧಿಕಾರಿಗಳು ಹಾಗೂ ಭಕ್ತಾದಿಗಳ

ಪ್ರತಿಭಟನೆಗೆ ಕಾರಣವಾಗಿತ್ತು.

click me!