
ರಾಯಚೂರು[ಅ.02]: ಕೇಂದ್ರ ಸರ್ಕಾರದಿಂದ ಪ್ರವಾಹದ ಪರಿಹಾರ ತರಲು ಸಾಧ್ಯವಾಗದ ಬಿ.ಎಸ್.ಯಡಿಯೂರಪ್ಪ ಅವರನ್ನು ಸ್ಟ್ರಾಂಗ್ ಮುಖ್ಯಮಂತ್ರಿ ಎನ್ನಬೇಕಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಬಿಎಸ್‌ವೈ ಅವರನ್ನು ವೀಕ್(ದುರ್ಬಲ) ಸಿಎಂ ಎಂದು ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡರು. ರಾಜ್ಯದಲ್ಲಿ ಸಂಭವಿಸಿರುವ ಪ್ರವಾಹಕ್ಕೆ ಪರಿಹಾರ ತರುವಲ್ಲಿ ವಿಫಲವಾಗಿರುವುದರಿಂದಲೇ ಹಾಗೆ ಮಾತನಾಡಿದ್ದೇನೆ. ಬಿಎಸ್‌ವೈ ತಂತಿ ಮೇಲೆ ನಡೆಯುತ್ತಿದ್ದಾರೆ, ಬಿದ್ದು ಹೋದರೆ ಹೇಗೆ ಎನ್ನುವ ಕಾರಣಕ್ಕೆ ರಾಜೀನಾಮೆ ಕೊಡಲಿ ಎಂದು ಹೇಳಿದ್ದೇನೆ ಎಂದರು.
ಬ್ಯುಸಿ ಇದ್ದಿದ್ದರಿಂದ ಕರ್ನಾಟಕ ನೆರೆ ಬಗ್ಗೆ ಮೋದಿ ಟ್ವೀಟ್ ಇಲ್ಲ: ಅಂಗಡಿ ವಿವಾದ
ನೆರೆ ಪರಿಹಾರ ವಿಷಯದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ ನೆರೆಗೆ ಸ್ಪಂದಿಸದ ಪ್ರಧಾನಿ ಮೋದಿಯವರು ಬಿಹಾರ ರಾಜ್ಯದ ನೆರೆಗೆ ಸ್ಪಂದಿಸಿದ್ದಾರೆ. ನೆರೆ ಪರಿಹಾರ ಕೇಳುವ ಧೈರ್ಯವನ್ನು ಸಿಎಂ ಯಡಿಯೂರಪ್ಪ ಮಾಡುತ್ತಿಲ್ಲ. ಅವರಿಗೆ ಧೈರ್ಯ ಇಲ್ಲದಿದ್ದರೇ ನಮ್ಮನ್ನು ಕರೆಯಲಿ ನಾವು ಹೋಗುತ್ತೇವೆ ಎಂದು ತಿಳಿಸಿದರು.
ಬಿಜೆಪಿಗೆ ಸೇರ್ಪಡೆ ಉದ್ದೇಶಕ್ಕಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಅನರ್ಹ ಅಸ್ತ್ರ ಬಳಕೆ ಮಾಡಲಾಗಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಹೊರಡಿಸಿರುವ ಅನರ್ಹತೆಯ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುವ ವಿಶ್ವಾಸವಿದೆ ಎಂದು ಹೇಳಿದರು.
'ಬಿಹಾರಕ್ಕೆ ಮಿಡಿದ ಮೋದಿ 52 ಇಂಚಿನ ಎದೆ, ಕರ್ನಾಟಕ ವಿಚಾರದಲ್ಲಿ ಕಲ್ಲುಬಂಡೆ ಆಗಿದ್ದೇಕೆ?'
ಅವೈಜ್ಞಾನಿಕವಾದ ನೋಟು ಅಮಾನ್ಯ, ಜಿಎಸ್‌ಟಿಯಂತಹ ಯೋಜನೆಗಳನ್ನು ಜಾರಿಗೊಳಿಸಿದರ ಪರಿಣಾಮವಾಗಿಯೇ ಇಂದು ದೇಶದ ಆರ್ಥಿಕ ಮಟ್ಟಕುಸಿಯಲು ಕಾರಣವಾಗಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.