ತಿರುಪತಿ ರೀತಿ – ಶಬರಿಮಲೆ ದೇಗುಲದ ಅಭಿವೃದ್ಧಿ

By Suvarna Web DeskFirst Published Jan 17, 2018, 7:36 AM IST
Highlights

ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ಭಕ್ತರಿಗೆ ಇರುವ ಸೌಲಭ್ಯದಂತೆ ಶಬರಿ ಮಲೆಯ ಅಯ್ಯಪ್ಪಸ್ವಾಮಿ ದೇವಾಲಯದಲ್ಲೂ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಕೇರಳ ಸರ್ಕಾರ ಉದ್ದೇಶಿಸಿದೆ.

ತಿರುವನಂತಪುರಂ: ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ಭಕ್ತರಿಗೆ ಇರುವ ಸೌಲಭ್ಯದಂತೆ ಶಬರಿ ಮಲೆಯ ಅಯ್ಯಪ್ಪಸ್ವಾಮಿ ದೇವಾಲಯದಲ್ಲೂ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಕೇರಳ ಸರ್ಕಾರ ಉದ್ದೇಶಿಸಿದೆ. ಸಿಎಂ ಪಿಣರಾಯಿ ವಿಜಯನ್ ನಿರ್ದೇಶನದಂತೆ ತಜ್ಞರ ತಂಡವೊಂದು ತಿರುಮಲ ಅಭಿವೃದ್ಧಿ ಮಾದರಿ ಅಧ್ಯಯನಕ್ಕೆ ಶೀಘ್ರ ತಿರುಪತಿಗೆ ಭೇಟಿ ನೀಡಲಿದೆ. ಆಂಧ್ರ ಸಿಎಂ ಚಂದ್ರಬಾಬು

ನಾಯ್ಡು ಅವರು ಈ ತಂಡಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಸಚಿವರೊಬ್ಬರು ತಿಳಿಸಿದ್ದಾರೆ. ಇದೇ ವೇಳೆ ಮಕರ ವಿಳಕ್ಕು (ಸಂಕ್ರಾಂತಿ) ದಿನ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ 255 ಕೋಟಿ ರು. ಆದಾಯ ಬಂದಿದೆ. ಇದು ಕಳೆದ ವರ್ಷಕ್ಕಿಂತ 45 ಕೋಟಿ ರು. ಏರಿಕೆಯಾಗಿದೆ.

click me!