
ಮುಂಬೈ(ಡಿ.08): ಕೆಟೋನ್ ಜೆನ್ನಿಂಗ್ಸ್.. ಇಂಗ್ಲೆಂಡ್ ಕ್ರಿಕೆಟ್ ಸಾಗರದಲ್ಲಿ ಹೊಸ ಅಲೆ. ಮುಂಬೈನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್`ಗೆ ಪಾದಾರ್ಪಣೆ ಮಾಡಿದ ಜೆನ್ನಿಂಗಸ್, ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಟೆಸ್ಟ್ ಕ್ಯಾಪ್ ಪಡೆದು ನಾಯಕ ಅಲಿಸ್ಟರ್ ಕುಕ್ ಜೊತೆ ಮೈದಾನಕ್ಕಿಳಿದ ಜೆನ್ನಿಂಗ್ಸ್ ಭಾರತದ ಬೌಲಿಂಗ್ ದಾಳಿಯನ್ನ ಯಶಸ್ವಿಯಾಗಿ ಎದುರಿಸಿದರು. 219 ಎಸೆತಗಳಲ್ಲಿ ಭರ್ಜರಿ 112 ರನ್ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ವಿದೇಶದಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದ ಇಂಗ್ಲೀಷ್ ಆಟಗಾರ ಎಂಬ ಖ್ಯಾತಿ ಗಳಿಸಿದ್ದಾರೆ.
ಆರ್`ಸಿಬಿಯ ಮಾಜಿ ಕೋಚ್ ಪುತ್ರ ಜೆನ್ನಿಂಗ್ಸ್: ಈ ಜೆನ್ನಿಂಗ್ಸ್ ಬೇರಾರೂ ಅಲ್ಲ. 2008ರಿಂದ 2013ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಿ ಕೆಲಸ ಮಾಡಿದ್ದ ದಕ್ಷಿಣ ಆಫ್ರಿಕಾದ ರಾಯ್ ಜೆನ್ನಿಂಗ್ಸ್ ಪುತ್ರ. ರಾಯ್ ಜೆನ್ನಿಂಗ್ಸ್ 2004ರಲ್ಲಿ ದಕ್ಷಿಣ ಆಫ್ರಿಕಾದ ಕೋಚ್ ಆಗಿ, 19 ವರ್ಷದೊಳಗಿನವರ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.