ನಟ ದೊಡ್ಡಣ್ಣನ ಅಳಿಯ ವೀರೇಂದ್ರ ತೀವ್ರ ವಿಚಾರಣೆ

Published : Dec 14, 2016, 11:59 AM ISTUpdated : Apr 11, 2018, 12:47 PM IST
ನಟ ದೊಡ್ಡಣ್ಣನ ಅಳಿಯ ವೀರೇಂದ್ರ ತೀವ್ರ ವಿಚಾರಣೆ

ಸಾರಾಂಶ

ಗಂಗಾನಗರದ ಸಿಬಿಐ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದು, ಸಂಬಂಧಿಗಳ ಬ್ಯಾಂಕ್​ ಖಾತೆ ಬಳಸಿ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿದೆ. ವೀರೇಂದ್ರನ ಆಪ್ತರಾದ ನಾಗರಾಜು ಮತ್ತು ತಿಪ್ಪೇಸ್ವಾಮಿಯ ತೀವ್ರ ವಿಚಾರಣೆ ನಡೆದಿದೆ. ವೀರೇಂದ್ರನ ಆಪ್ತ ಸುಮಂದರ್​ ಸಿಂಗ್​`ನನ್ನು ಸಿಬಿಐ ಬಂಧಿಸುವ ಸಾಧ್ಯತೆ ಇದೆ.

ಬೆಂಗಳೂರು(ಡಿ.14): ಬಾತ್ ರೂಂ ತಿಜೋರಿಯಲ್ಲಿ ಕೋಟಿ ಕೋಟಿ ಅಕ್ರಮ ಸಂಪತ್ತು ಇಟ್ಟಿದ್ದ  ಹವಾಲ ಕಿಂಗ್ ಪಿನ್, ನಟ ದೊಡ್ಡಣ್ಣನ ಅಳಿಯ ಕೆ.ಸಿ. ವೀರೇಂದ್ರ ವೀರೇಂದ್ರನ ವಿಚಾರಣೆಯನ್ನ ಸಿಬಿಐ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಅಕ್ರಮದಲ್ಲಿ ಆತನ ಸಂಬಂಧಿಗಳೂ ಭಾಗಿಯಾಗಿದ್ದು, ವೀರೇಂದ್ರನ ಹತ್ತಕ್ಕೂ ಹೆಚ್ಚು ಸಂಬಂಧಿಗಳನ್ನ ವಿಚಾರಣೆ ನಡೆಸಲಾಗುತ್ತಿದೆ.

ಗಂಗಾನಗರದ ಸಿಬಿಐ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದು, ಸಂಬಂಧಿಗಳ ಬ್ಯಾಂಕ್​ ಖಾತೆ ಬಳಸಿ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿದೆ. ವೀರೇಂದ್ರನ ಆಪ್ತರಾದ ನಾಗರಾಜು ಮತ್ತು ತಿಪ್ಪೇಸ್ವಾಮಿಯ ತೀವ್ರ ವಿಚಾರಣೆ ನಡೆದಿದೆ. ವೀರೇಂದ್ರನ ಆಪ್ತ ಸುಮಂದರ್​ ಸಿಂಗ್​`ನನ್ನು ಸಿಬಿಐ ಬಂಧಿಸುವ ಸಾಧ್ಯತೆ ಇದೆ.

ಈ ಮಧ್ಯೆ, ವೀರೇಂದ್ರನ ಜೊತೆ ಸೇರಿ ಚಿತ್ರದುರ್ಗ ಜಿಲ್ಲೆಯ ಎಸ್​ಬಿಐ, ಎಸ್​ಬಿಎಮ್​, ಐಸಿಐಸಿಐ, ಕೋಟಕ್​ ಮಹಿಂದ್ರಾ ಮತ್ತಿತರ ಬ್ಯಾಂಕ್​`ಗಳ ಅಧಿಕಾರಿಗಳು ಬ್ಲ್ಯಾಕ್ ಅಂಡ್ ವೈಟ್ ದಂಧೆಯಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ, ಬ್ಯಾಂಕ್​ನ ಅಧಿಕಾರಿಗಳಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​  ನೀಡುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದರಾಮಯ್ಯ ಸಿಎಂ ಸ್ಥಾನ ಬಿಡ್ತಾರಾ?: ಶಾಸಕ ಜನಾರ್ದನ ರೆಡ್ಡಿ ಹೇಳಿದ್ದೇನು?
ದೆಹಲಿಯಿಂದ ಬೆಂಗಳೂರಿನತ್ತ ಡಿಕೆಶಿ, ವಿಮಾನನಿಲ್ದಾಣಕ್ಕೆ ಬಂದ ಹಸಿರು ಬಣ್ಣದ ಹೊಸ ಬೆಂಜ್‌ ಕಾರು!