
ತಾಯಿಯ ಕೊನೆಯ ಆಸೆಯನ್ನ ಇಡೇರಿಸುವುದಕ್ಕಾಗಿ ಈ ಯೋಧ ಏನಮಾಡಿದ್ದಾನೆ ಗೋತ್ತಾ ? ತನ್ನ ಜೀವದ ಹಂಗು ತೊರೆದು ಹೆತ್ತಮ್ಮನ ಇಚ್ಚೆ ಪೊರೈಸಿದ್ದಾನೆ , ಹೆತ್ತಮ್ಮನ ಮೃತ್ತದೇಹವನ್ನ ಸೂಮಾರು 50 ಕಿ.ಮಿ. ಹೆಗಲ ಮೇಲೆ ಹೊತ್ತು ಸ್ವಗ್ರಾಮಕ್ಕೆ ತಂದ ಕರುಣಾ ಜನಕ ಸ್ಟೋರಿ ಇದು
ಇದು ನಮ್ಮ ಯೋಧನನೊಬ್ಬನ ಕರುಣಾಜನಕ ಕಥೆ. ಅಮ್ಮನ ಕಳೆದುಕೊಂಡ ನೋವು. ನಂಬಿದ ಸೇನಾಧಿಕಾರಿಗಳು ಸಹಾಯಕ್ಕೆ ಬಾರದ ದುಃಖ. ಪ್ರಕೃತಿ ಮುನಿಸಿನ ಮಧ್ಯೆ ಅಮ್ಮನ ಇಚ್ಛೆಯಂತೆ ಸ್ವಗ್ರಾಮದಲ್ಲೇ ಅಂತ್ಯಸಂಸ್ಕಾರ ನಡೆಸಲು ಐವತ್ತು ಕಿಲೋಮೀಟರ್ ತಾಯಿ ಶವವನ್ನು ಯೋಧ ಹೆಗಲ ಮೇಲೆ ಹೊತ್ತು ಸಾಗಿದ ಹೃದಯವಿದ್ರಾಕ ದೃಶ್ಯ ಇದು.
ಪಠಾಣ್ಕೋಟ್ನಲ್ಲಿ ಕರ್ತವ್ಯ ನಿರತ ಯೋಧ ಮೊಹಮದ್ ಅಬ್ಬಾಸ್ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಸ್ವಗ್ರಾಮ ಕರ್ನಾಲ್ನಿಂದ ಕರೆಸಿಕೊಂಡಿದ್ದ. ದುರಂತ ನೋಡಿ. ಯೋಧನ ತಾಯಿ ಸಕೀನಾ ಬೇಗಂ ಜನವರಿ 28 ರಂದು ಹೃದಯಾಘಾತದಿಂದ ಮರಣ ಹೊಂದಿದ್ದರು. ಹಿಮಾವೃತ ಪ್ರದೇಶದಲ್ಲಿ ಅಂತ್ಯಕ್ರಿಯೆ ಸಾಧ್ಯವಾಗಲಿಲ್ಲ. ಊರಿಗೆ ಕೊಂಡೊಯ್ಯೋಣ ಎಂದರೆ ಸೇನಾಧಿಕಾರಿಗಳು ನೆರವಿಗೆ ಬರಲಿಲ್ಲ. ನಾಲ್ಕು ದಿನಗಳು ಕಳೆದುಹೋಯ್ತು. ಬೇರೆ ಮಾರ್ಗವಿಲ್ಲದೇ ತಾಯಿ ಕೊನೆ ಆಸೆಯಂತೆ ಸ್ವಗ್ರಾಮದಲ್ಲೇ ಅಂತ್ಯಕ್ರಿಯೆ ನೆರವೇರಿಸಲು ಶವ ಹೆಗಲಿಗೇರಿಸಿಕೊಂಡ.
5-6 ಇಂಚು ಆಳಕ್ಕೆ ಹೂಳುತ್ತಿದ್ದ ಹಿಮದ ಮೇಲೆ ಕಾಲ್ನಡಿಗೆಯಲ್ಲೇ ಶ್ರೀನಗರದಿಂದ ಸುಮಾರು 50 ಕಿ.ಮೀ ಹೀಗೆ ಶವ ಹೊತ್ತು ಸಾಗಿದ. ಯೋಧನ ಜೊತೆ ಒಂದಿಷ್ಟು ಸಂಬಂಧಿಕರು ಹೆಗಲು ಜೋಡಿಸಿದರು.
ಈ ಹೃದಯ ವಿದ್ರಾವಕ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.ಇಲ್ಲಿ ಜಿಲ್ಲಾಡಳಿತವಾಗಲಿ, ಸೇನಾಧಿಖಾರಿಗಳಾಗಲಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಬಹುದಿತ್ತು. ಕರುಣೆಯಿಲ್ಲದ ಅಧಿಕಾರಿಗಳಿಗೆ ದೇಶ ಸೇವಕನ ಕೂಗು ಕೇಳಿಸಲೇ ಇಲ್ಲ. ಛೀ.. ಇದೆಂಥಾ ಸಮಾಜ ನಮ್ಮದು..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.