ಕಾಶ್ಮೀರ ರಾಜಕೀಯ ಸಮಸ್ಯೆ, ರಾಜಕೀಯವಾಗಿ ನಿಭಾಯಿಸಬೇಕು: ಹಾಮಿದ್ ಅನ್ಸಾರಿ

By Suvarna Web DeskFirst Published Aug 10, 2017, 4:34 PM IST
Highlights

ಕಾಶ್ಮೀರವು ರಾಜಕೀಯ ಸಮಸ್ಯೆಯಾಗಿದ್ದು ಅದನ್ನು ರಾಜಕೀಯವಾಗಿ ನಿಭಾಯಿಸಬೇಕು ಎಂದು ಉಪ-ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸುತ್ತಿರುವ ಹಾಮಿದ್ ಅನ್ಸಾರಿ ಅಭಿಪ್ರಾಯ ವ್ಯಕ್ತಪಡಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಘಟಿಸುತ್ತಿರುವ ವಿದ್ಯಾಮಾನಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಅನ್ಸಾರಿ,  ಕಾಶ್ಮೀರ ಸಮಸ್ಯೆಯು ಮೂಲಭೂತವಾಗಿ ರಾಜಕೀಯ ಸ್ವರೂಪದ್ದು, ಹಾಗೂ ಅದನ್ನು ಅದೇ ರೀತಿ ನಿಭಾಯಿಸಬೇಕು. ಅಲ್ಲಿ ಕಲ್ಲು ಎಸೆಯುತ್ತಿರುವ ಬಾಲಕ/ಬಾಲಕಿಯರು ನಮ್ಮ ದೇಶದ ಪ್ರಜೆಗಳೇ ಆಗಿದ್ದಾರೆ, ಎಂದು ಹೇಳಿದ್ದಾರೆ.

ನವದೆಹಲಿ: ಕಾಶ್ಮೀರವು ರಾಜಕೀಯ ಸಮಸ್ಯೆಯಾಗಿದ್ದು ಅದನ್ನು ರಾಜಕೀಯವಾಗಿ ನಿಭಾಯಿಸಬೇಕು ಎಂದು ಉಪ-ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸುತ್ತಿರುವ ಹಾಮಿದ್ ಅನ್ಸಾರಿ ಅಭಿಪ್ರಾಯ ವ್ಯಕ್ತಪಡಸಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಘಟಿಸುತ್ತಿರುವ ವಿದ್ಯಾಮಾನಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಅನ್ಸಾರಿ,  ಕಾಶ್ಮೀರ ಸಮಸ್ಯೆಯು ಮೂಲಭೂತವಾಗಿ ರಾಜಕೀಯ ಸ್ವರೂಪದ್ದು, ಹಾಗೂ ಅದನ್ನು ಅದೇ ರೀತಿ ನಿಭಾಯಿಸಬೇಕು. ಅಲ್ಲಿ ಕಲ್ಲು ಎಸೆಯುತ್ತಿರುವ ಬಾಲಕ/ಬಾಲಕಿಯರು ನಮ್ಮ ದೇಶದ ಪ್ರಜೆಗಳೇ ಆಗಿದ್ದಾರೆ, ಎಂದು ಹೇಳಿದ್ದಾರೆ.

ಉಪ-ರಾಷ್ಟ್ರಪತಿಯವಧಿಯಲ್ಲಿ ನೀಡಿದ ಕೊನೆ ಸಂದರ್ಶನದಲ್ಲಿ, ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣು ವಾತಾವ್ರಣದ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಎರಡನೇ ಬಾರಿ ಉಪ-ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ ಹುದ್ದೆಯಿಂದ ನಿರ್ಗಮಿಸುತ್ತಿರುವ ಅನ್ಸಾರಿ, ಭಾರತದ ಮುಸ್ಲಿಮರಲ್ಲಿ ಆತಂಕ ಹಾಗೂ ಅಭದ್ರತೆಯ ಭಾವನೆ ಇದೆ ಎಂದು ಹೇಳಿದ್ದಾರೆ.

ಖಾಸಗಿ ಚ್ಯಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ, ಮುಸ್ಲಿಮರಲ್ಲಿ ಆತಂಕ ಹಾಗೂ ಅಭದ್ರತೆ ಭಾವನೆ ಇದೆಯೇ ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ, ‘ಹೌದು, ಈ ವಿಶ್ಲೇಷಣೆ ಸರಿಯಾಗಿಯೇ ಇದೆ. ಆತಂಕ ಹಾಗೂ ಅಭದ್ರತೆ ಭಾವನೆ ಮುಸ್ಲಿಮರಲ್ಲಿ ಮನೆ ಮಾಡಿದೆ. ನನಗೆ ಬೇರೆ ಬೇರೆ ಕಡೆಯಿಂದ ಈ ಬಗ್ಗೆ ತಿಳಿದುಬಂದಿದೆ,’ ಎಂದು ಹಾಮಿದ್ ಅನ್ಸಾರಿ ಪ್ರತಿಕ್ರಿಯಿಸಿದ್ದಾರೆ.

ಮುಸ್ಲಿಮರಿಗೆ ಸಲಹೆ:

ತ್ರಿವಳಿ ತಲಾಖ್ ಬಗ್ಗೆ ಮಾತನಾಡಿದ ಅನ್ಸಾರಿ, ಇದು ಧಾರ್ಮಿಕ ನಿಯಮವಲ್ಲ ಬದಲಾಗಿ ಸಾಮಾಜಿಕ ಕಟ್ಟಳೆಯಾಗಿದೆ. ಈ ಬಗ್ಗೆ ಸಮುದಾಯದ ಒಳಗಿನಿಂದ ಸುಧಾರಣೆ ಕೆಲಸವಾಗಬೇಕು ಎಂದು ಹೇಳಿದ್ದಾರೆ. ಮುಸ್ಲಿಮರು ಶಿಕ್ಷಣ ಗಳಿಸಬೇಕು, ಹಾಗೂ ಸಮಯಕ್ಕೆ ತಕ್ಕಂತೆ ಬದಲಾಗಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ.     

click me!