
ಪೆಲ್ಲಿಂಗ್, ಸಿಕ್ಕಿಮ್ (ಮೇ.21): ಕಾಶ್ಮೀರ, ಕಾಶ್ಮೀರಿಗಳು ಹಾಗೂ ಕಾಶ್ಮೀರಿಯತ್ (ಕಾಶ್ಮೀರತನ) ಭಾರತಕ್ಕೆ ಸೇರಿದ್ದು ಎಂದಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ , ಕಾಶ್ಮೀರ ಬಿಕ್ಕಟ್ಟಿಗೆ ಶೀಘ್ರವೇ ಪರಿಹಾರ ಕಂಡುಹಿಡಿಯಲು ಸರ್ಕಾರ ಬದ್ದವಾಗದೆಯೆಂದು ಹೇಳಿದ್ದಾರೆ.
ಕಾಶ್ಮೀರ, ಕಾಶ್ಮೀರಿಗಳು ಹಾಗೂ ಕಾಶ್ಮೀರಿಯತ್ ಭಾರತಕ್ಕೆ ಸೇರಿದ್ದು. ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸರ್ಕಾರ ಬದ್ದವಾಗಿದೆ ಎಂಬುವುದನ್ನು ನಾನು ಖಚಿತಪಡಿಸುತ್ತಿದ್ದೇನೆ, ಎಂದು ಸಿಕ್ಕಿಮ್’ನಲ್ಲಿ ಸಭೆಯನ್ನುದ್ದೇಶಿಸಿ ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಪಾಕಿಸ್ತಾನವು ಕಾಶ್ಮೀರದ ಹೆಸರಿನಲ್ಲಿ ಹಿಂಸೆಯನ್ನು ಮುಂದುವರೆಸಿದೆ. ಆದರೆ ಇಂತಹ ರೀತಿಗಳನ್ನು ಕೈಬಿಟ್ಟು ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಹಾಗೂ ಸಹಕಾರ ನೀಡಲು ಪಾಕಿಸ್ತಾನ ಮುಂದಾಗು ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ.
ಗಡಿಗೆ ಸಂಬಂಧಿಸಿ ಚೀನಾದೊಂದಿಗಿನ ಸಂಘರ್ಷ ಕಡಿಮೆಯಾಗಿದೆ. ಪ್ರಮಾಣವಚನ ಕಾರ್ಯಕ್ರಮಕ್ಕೆ ಪಾಕಿಸ್ತಾನ ಪ್ರಧಾನಿ ನವಾಝ್ ಶರೀಫ್’ಗೆ ಆಹ್ವಾನ ನೀಡಿದ್ದು ಸೌಹಾರ್ದಾಯುತ ಸಂಬಂಧ ಬೆಳೆಸುವಂತಾಗಲೇ ಹೊರತು ಕೇವಲ ದ್ವಿಪಕ್ಷೀಯ ಸಂಬಂಧ ಮುಂದುವರಿಸಲು ಅಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.