ಬಾಲ ಬಿಚ್ಚಿದ ಉಗ್ರರು: ಗುಂಡಿಟ್ಟು ವೀರ ಯೋಧನ ಹತ್ಯೆ

Published : Jun 15, 2018, 10:51 AM ISTUpdated : Jun 15, 2018, 11:04 AM IST
ಬಾಲ ಬಿಚ್ಚಿದ ಉಗ್ರರು: ಗುಂಡಿಟ್ಟು ವೀರ ಯೋಧನ ಹತ್ಯೆ

ಸಾರಾಂಶ

ಕೆಲ ದಿನಗಳಿಂದ ಸುಮ್ಮನಾಗಿದ್ದ ಉಗ್ರರು ಮತ್ತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಭಾರತ ಸೇನೆಯ ವೀರ ಯೋಧನನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ. ಹಿಜ್ಬುಲ್‌ ಕಮಾಂಡರ್‌ ಸಮೀರ್‌ ಟೈಗರ್‌ ನನ್ನು ಹತ್ಯೆಗೈದ ಸೇನಾ ಪಡೆಯಲ್ಲಿ ಔರಂಗಜೇಬ್‌ ಕೆಲಸ ಮಾಡಿದ್ದರು.

ಶ್ರೀನಗರ ಜೂನ್ 15: ಕೆಲ ದಿನಗಳಿಂದ ಸುಮ್ಮನಾಗಿದ್ದ ಉಗ್ರರು ಮತ್ತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಭಾರತ ಸೇನೆಯ ವೀರ ಯೋಧರೊಬ್ಬರನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ.

ಗುಂಡಿನ ದಾಳಿಯಿಂದ ಸಂಪೂರ್ಣ ಛಿದ್ರಗೊಂಡ ಯೋಧನ ದೇಹ ಪುಲ್ವಾಮಾ ಜಿಲ್ಲೆಯಲ್ಲಿ ಪತ್ತೆಯಾಗಿದೆ. ರಜೌರಿ ನಿವಾಸಿಯಾಗಿದ್ದ ಯೋಧ ಔರಂಗಜೇಬ್ ರಂಜಾನ್‌ ರಜೆಗಾಗಿ ಮನೆಗೆ ಆಗಮಿಸಿದ್ದರು. ಅವರನ್ನು ಲಾಂಪೋರಾದ ಬಳಿ ಅಪಹರಣ ಮಾಡಲಾಗಿತ್ತು.  ಶೋಪಿಯಾನ್‌ನಲ್ಲಿ 44 ರೈಫ‌ಲ್ಸ್‌ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯೋಧ ಉಗ್ರರ ಕೃತ್ಯಕ್ಕೆ ಬಲಿಯಾಗಿದ್ದಾರೆ.

ಪತ್ರಿಕೆ ಸಂಪಾದಕನಿಗೂ ಗುಂಡಿಟ್ಟ ಉಗ್ರರು

ಹಿಜ್ಬುಲ್‌ ಕಮಾಂಡರ್‌ ಸಮೀರ್‌ ಟೈಗರ್‌ ನನ್ನು ಹತ್ಯೆಗೈದ ಸೇನಾ ಪಡೆಯಲ್ಲಿ ಔರಂಗಜೇಬ್‌ ಕೆಲಸ ಮಾಡಿದ್ದರು. ಇದೇ ಕಾರಣಕ್ಕೆ ಔರಂಗಜೇಬ್‌ರನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಅಪಹರಣ ಮಾಡಿದ್ದು ಯಾವಾಗ?
ಶಾಡಿಮಾರ್ಗ್‌ ಸೇನಾ ನೆಲೆಯ ಬಳಿ ಪ್ರಯಾಣಿಕ ವಾಹನವನ್ನೇರಿ ಜೂನ್ 12 ರಂದು ಮನೆ ಕಡೆ ಹೊರಟಿದ್ದರು. ಆದರೆ ಅಲ್ಲಿಂದ ಎರಡು ಕಿಮೀ ದೂರದಲ್ಲಿ ವಾಹನವನ್ನು ತಡೆದ ಉಗ್ರರು ಯೋಧರನ್ನು ಅಪಹರಿಸಿದ್ದರು. ಇದಾದ ಮೇಲೆ ಶೋಧ  ಆರಂಭಿಸಿದ್ದರೂ ಸುಳಿವು ಪತ್ತೆಯಾಗಿರಲಿಲ್ಲ. ಆದರೆ ಇದೀಗ ಯೋಧನ ಶವ ಪುಲ್ವಾಮದ ಬಳಿ ಪತ್ತೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇಂದ್ರ, ಮೋದಿ ಮಾಡಿದ್ದೆಲ್ಲ ತಪ್ಪು ಎನ್ನಲಾಗದು, Vote Chori ಆರೋಪದಿಂದ ಕಾಂಗ್ರೆಸ್‌ನ ನೈತಿಕತೆ ಕುಸಿತ!
ಪ್ರಧಾನಿ ಮೋದಿ ಸಮಾಧಿ ಉದ್ಘೋಷದ ವಿರುದ್ಧ ಸಂಸತ್ತಲ್ಲಿ ಗದ್ದಲ: ಕ್ಷಮೆಗೆ ಆಗ್ರಹ