ವಿಹಿಂಪ, ಬಜರಂಗದಳ ಧಾರ್ಮಿಕ ಉಗ್ರವಾದಿ! ಆರ್‌ಎಸ್‌ಎಸ್‌ ರಾಷ್ಟ್ರೀಯವಾದಿ ಸಂಘಟನೆ

Published : Jun 15, 2018, 10:12 AM IST
ವಿಹಿಂಪ, ಬಜರಂಗದಳ ಧಾರ್ಮಿಕ ಉಗ್ರವಾದಿ! ಆರ್‌ಎಸ್‌ಎಸ್‌ ರಾಷ್ಟ್ರೀಯವಾದಿ ಸಂಘಟನೆ

ಸಾರಾಂಶ

ಮೆರಿಕದ ಗುಪ್ತಚರ ಸಂಸ್ಥೆಯಾದ ಸಿಐಎ ಹೊಸದಾಗಿ ಮುದ್ರಿಸಿರುವ ವಲ್ಡ್‌ರ್‍ ಫ್ಯಾಕ್ಟ್ಬುಕ್‌ ಎಂಬ ದಾಖಲೆಯಲ್ಲಿ ಭಾರತದ ಸಂಘ ಪರಿವಾರದ ಸಂಸ್ಥೆಗಳಾದ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಹಾಗೂ ಬಜರಂಗ ದಳಗಳನ್ನು ಧಾರ್ಮಿಕ ಭಯೋತ್ಪಾದಕ ಗುಂಪುಗಳು ಎಂದು ಹೆಸರಿಸಲಾಗಿದೆ.

ನವದೆಹಲಿ :  ಅಮೆರಿಕದ ಗುಪ್ತಚರ ಸಂಸ್ಥೆಯಾದ ಸಿಐಎ ಹೊಸದಾಗಿ ಮುದ್ರಿಸಿರುವ ವಲ್ಡ್‌ರ್‍ ಫ್ಯಾಕ್ಟ್ಬುಕ್‌ ಎಂಬ ದಾಖಲೆಯಲ್ಲಿ ಭಾರತದ ಸಂಘ ಪರಿವಾರದ ಸಂಸ್ಥೆಗಳಾದ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಹಾಗೂ ಬಜರಂಗ ದಳಗಳನ್ನು ಧಾರ್ಮಿಕ ಭಯೋತ್ಪಾದಕ ಗುಂಪುಗಳು ಎಂದು ಹೆಸರಿಸಲಾಗಿದೆ.

ಇತ್ತೀಚೆಗೆ ಈ ಪುಸ್ತಕವನ್ನು ಮುದ್ರಿಸಲಾಗಿದೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಈ ಎರಡೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿವೆ. ಇನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಅನ್ನು ಬಿಜೆಪಿಯ ಸೈದ್ಧಾಂತಿಕ ಮಾತೃ ಸಂಸ್ಥೆ ಹಾಗೂ ರಾಷ್ಟ್ರೀಯವಾದಿ ಸಂಘಟನೆ ಎಂದು ವಿಶ್ಲೇಷಿಸಲಾಗಿದೆ.

ಬಜರಂಗದಳದ ರಾಷ್ಟ್ರೀಯ ವಕ್ತಾರ ಮನೋಜ್‌ ವರ್ಮಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾನೂನು ತಜ್ಞರ ಜತೆ ಈ ಕುರಿತಂತೆ ಸಮಾಲೋಚಿಸುತ್ತಿದ್ದೇವೆ. ನಮ್ಮ ಸಂಘಟನೆಯನ್ನು ಧಾರ್ಮಿಕ ಭಯೋತ್ಪಾದಕ ಗುಂಪು ಎಂದು ಹೆಸರಿಸಿದ್ದು ಇತ್ತೀಚೆಗೆ ತಿಳಿಸಿದೆ ಎಂದರು.

ಇದೇ ಪಟ್ಟಿಯಲ್ಲಿ ಕಾಶ್ಮೀರದ ಹುರಿಯತ್‌ ಕಾನ್ಫರೆನ್ಸ್‌ ಅನ್ನು ಪ್ರತ್ಯೇಕತಾವಾದಿ ಗುಂಪು ಎಂದು ಹೆಸರಿಸಲಾಗಿದೆ. ಇನ್ನೊಂದೆಡೆ ಮೆಹಮೂದ್‌ ಮದನಿಯ ಜಮೀಯತ್‌ ಉಲೇಮಾ ಎ ಹಿಂದ್‌ ಸಂಘಟನೆಯನ್ನು ಧಾರ್ಮಿಕ ಸಂಘಟನೆ ಎಂದು ಕರೆಯಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ ಮುಸ್ಲಿಂ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!