ಉಮೇಶ್ ರೆಡ್ಡಿ ಮೀರಿಸುವ ಕಾಮುಕ: ಹೈಪ್ರೊಫೈಲ್ ಮಹಿಳೆಯರು ಈತನ ಟಾರ್ಗೆಟ್

Published : Jun 27, 2017, 10:18 PM ISTUpdated : Apr 11, 2018, 01:00 PM IST
ಉಮೇಶ್ ರೆಡ್ಡಿ ಮೀರಿಸುವ ಕಾಮುಕ: ಹೈಪ್ರೊಫೈಲ್ ಮಹಿಳೆಯರು ಈತನ ಟಾರ್ಗೆಟ್

ಸಾರಾಂಶ

ಭಾವಚಿತ್ರವನ್ನು ಬದಲಾಯಿಸಿ  ಮ್ಯಾಟ್ರಿಮೋನಿಗೆ ತನ್ನ ಪ್ರೊಫೈಲ್​ ಪಿಕ್ಚರ್​ ಹಾಕಿದ್ದ . ಒಂದೊಂದು ಪ್ರೊಫೈಲ್​ಗೂ ಒಂದೊಂದು ಹೆಸರು ಹಾಕಿ ಸುಮಾರು 30ಕ್ಕೂ ಹೆಚ್ಚು ಹೆಸರಲ್ಲಿ ವ್ಯವಹರಿಸ್ತಿದ್ದ..

ಬೆಂಗಳೂರು(ಜೂ.27): ಈತ ಉಮೇಶ್​ ರೆಡ್ಡಿಗೂ ಒಂದು ಕೈ ಮೇಲು.. ಈ ಕಾಮುಕನಿಗೆ ಪ್ರತಿಷ್ಠಿತ ಮಹಿಳೆಯರೇ ಟಾರ್ಗೆಟ್​. ಹೈ-ಫೈ ಮಹಿಳೇರನ್ನ ನಂಬಿಸಿ ಬಳಸಿಕೊಂಡು ಕೈ ಕೊಡ್ತಿದ್ದ ವಂಚಕ ಇವಾಗ ಅಂದರ್ ಆಗಿದ್ದಾನೆ.. ಬರೋಬ್ಬರಿ 40ಕ್ಕೂ ಹೆಚ್ಚು ಹೈಪ್ರೊಫೈಲ್​ ಲೇಡಿಗಳಿಗೆ ಚೀಟ್ ಮಾಡಿದ್ದಾನೆ. ಅಷ್ಟೇ ಅಲ್ಲ.. ಲಕ್ಷಾಂತರ ರೂಪಾಯಿ ವಂಚಿಸಿ ಜೇಬಿಗಿಳಿಸಿದ್ದಾನೆ.

ಈತನ ಹೆಸ್ರು ಸಾಧತ್ ಖಾನ್​. ವಯಸ್ಸಿನ್ನೂ 28ದಾಟಿಲ್ಲ. ಹಾಸನ ಮೂಲಕ ಆಟೋ ಡ್ರೈವರ್​ಗೆ ನಯವಾದ ಮಾತು ಹಾಗೂ ಫಾರಿನ್​ ಇಂಗ್ಲಿಷೇ ಬಂಡವಾಳ​. ಮಹಾನ್ ಕಾಮುಕ ಸಾಧತ್ ಖಾನ್​ನಿಂದ ಸುಮಾರು 40 ಮಹಿಳೆಯರು ವಂಚನೆಗೆ ಒಳಗಾಗಿದ್ದಾರೆ. ಮಲ್ಟಿ ಟ್ಯಾಲೆಂಟೆಡ್​​ ಈ ನಟೋರಿಯಸ್​​ ಸದ್ಯ ಜೈಲು ಸೇರಿದ್ದಾನೆ.

ITI ಮುಗ್ಸಿ ಊರು ಬಿಟ್ಟು ಕೋರಮಂಗಲದ ಟೆಲಿಕಾಲರ್​ ಕೆಲಸಕ್ಕೆ ಸೇರಿಕೊಂಡಿದ್ದ ಸಾಧತ್ ಖಾನ್​. ಭಾವಚಿತ್ರವನ್ನು ಬದಲಾಯಿಸಿ  ಮ್ಯಾಟ್ರಿಮೋನಿಗೆ ತನ್ನ ಪ್ರೊಫೈಲ್​ ಪಿಕ್ಚರ್​ ಹಾಕಿದ್ದ . ಒಂದೊಂದು ಪ್ರೊಫೈಲ್​ಗೂ ಒಂದೊಂದು ಹೆಸರು ಹಾಕಿ ಸುಮಾರು 30ಕ್ಕೂ ಹೆಚ್ಚು ಹೆಸರಲ್ಲಿ ವ್ಯವಹರಿಸ್ತಿದ್ದ.. ಬಾಡಿಗೆಗೆ ಐಷಾರಾಮಿ ಆಡಿ ,ಬೆನ್ಝ್​  ಕಾರು ತೋರಿಸಿ ಮದ್ವೆ ಆಗ್ತೀನಿ ಅಂತ ನಂಬಿಸ್ತಿದ್ದ. ಲಕ್ಸುರಿ ಹೋಟೇಲ್​ಗೆ ಕರೆದ್​ಕೊಂಡ್ ಹೋಗಿ ಮಹಿಳೆಯರ ದೇಹಸೂರೆ ಮಾಡ್ತಿದ್ದ.  ಇಂಟರೆಸ್ಟಿಂಗ್​ ಅಂದ್ರೆ ಒಬ್ಬಳನ್ನ ಚೀಟ್​ ಮಾಡಿದ ಬಳಿಕ ಆಕೆ ಕೊಟ್ಟ ದುಡ್ಡಿನ ಅರ್ಧ ಭಾಗವನ್ನೇ ಬಂಡವಾಳ ಮಾಡಿಕೊಂಡು ಮತ್ತೊಬ್ಬಳಿಗೆ ಬಲೆ ಬೀಸುತ್ತಿದ್ದ ಈ ಆಸಾಮಿ. ಇದೇ ರೀತಿ ಬಾಗಲೂರು ಪ್ರತಿಷ್ಠಿತ ಕಾಲೇಜಿನ ಲೆಕ್ಚರರ್​ಗೂ ಮೋಸ ಮಾಡಿದ್ದ  ಸಾಧತ್ ಖಾನ್​.

ಅಧಿಕೃತವಾಗಿ 40 ಮಹಿಳೆಯರಾದ್ರೂ ಮರ್ಯಾದೆಗೆ ಅಂಜಿ ದೂರು ಕೊಡದವರ ಸಂಖ್ಯೆ ನೂರಕ್ಕೂ ಹೆಚ್ಚು ಇರಬಹುದು ಅಂತ ಪೊಲೀಸರು ಶಂಕಿಸಿದ್ದಾರೆ.  ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಈತನನ್ನ ಮತ್ತೆ ಕಸ್ಟಡಿಗೆ ತೆಗೆದುಕೊಳ್ಳೋ ಸಾಧ್ಯತೆ ಇದೆ. ಈ ಸಂಬಂಧ ಬಾಗಲೂರು ಪೊಲೀಸ್​ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!