
ಬೆಂಗಳೂರು (ಜೂ. 06): 'ಕಾಲ' ಚಿತ್ರ ಯಾವುದೇ ಕಾರಣಕ್ಕೂ ಬಿಡುಗಡೆ ಆಗಬಾರದು. ನಮ್ಮ ಹೋರಾಟ ರಜನಿಕಾಂತ್ ವಿರುದ್ಧ. ಚಿತ್ರ ಬಿಡುಗಡೆಯಾಗಲು ನಾವು ಬಿಡಲ್ಲ ಎಂದು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.
ನಾಗರಹಾವು ಚಿತ್ರ ತಮಿಳಿನಲ್ಲಿ ಡಬ್ ಆಗಿದ್ದಾಗ ಅದನ್ನು ಮೂಲೆ ಗುಂಪು ಮಾಡಿದ್ರು. ತಮಿಳುನಾಡಿನಲ್ಲಿ ಕನ್ನಡ ಚಿತ್ರಕ್ಕೆ ಗೌರವ ಕೊಡಲಿಲ್ಲ. ಈಗ ಕಾವೇರಿ ವಿಚಾರವನ್ನು ತಮ್ಮ ಹಕ್ಕು ಎನ್ನುತ್ತಿದ್ದಾರೆ. ಕೋರ್ಟ್ ಮನವಿ ಮಾಡಿದರೂ ನಮಗೆ ಕನ್ನಡ ಮುಖ್ಯ. ಕೋರ್ಟ್ ಹೋರಾಡಬೇಡಿ ಎಂದು ಹೇಳಿಲ್ಲ. ಮುಖ್ಯಮಂತ್ರಿ ಕೂಡ ನಮ್ಮ ಜತೆ ಇದ್ದಾರೆ. ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆ ಮಾಡಲು ನಾವು ಬಿಡುವುದಿಲ್ಲ ಎಂದಿದ್ದಾರೆ.
ಕಾಲಾ ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡಬಾರದು. ಮನವಿ ಧಿಕ್ಕರಿಸಿದರೆ ಟಿಕೆಟ್ ಪಡೆದು ಒಳಗೆ ನುಗ್ತೀವಿ. ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ ಗಳನ್ನ ಒಡೆದು ಹಾಕ್ತೀವಿ. ನಮ್ಮ ಕಾರ್ಯಕರ್ತರೆಲ್ಲ ಮುತ್ತಿಗೆ ಹಾಕಲು ಸಿದ್ಧರಿದ್ದಾರೆ ಎಂದು ಸಂಪಿಗೆ ಹಾಗೂ ಮಂತ್ರಿಮಾಲ್ ಮಾಲಿಕರಿಗೆ ಪ್ರವೀಣ್ ಶೆಟ್ಟಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.