ಸಚಿವ ಸ್ಥಾನಕ್ಕಾಗಿ ಮತ್ತೆ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟ

First Published Jun 30, 2018, 7:23 AM IST
Highlights

ಕೆಲ ದಿನಗಳ ಕಾಲ ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನ ಸಿಗದೇ ಇದ್ದಿದ್ದಕ್ಕೆ ಸ್ಫೋಟಗೊಂಡಿದ್ದ ಅಸಮಧಾನ ಇತ್ತೀಚೆಗಷ್ಟೇ ತಣ್ಣಗಾಗಿತ್ತು. ಆದರೆ ಇದೀಗ ಮತ್ತೋರ್ವ ಶಾಸಕ ಬಹಿರಂಗವಾಗಿಯೇ ಅಸಮಧಾನ ಹೊರಹಾಕಿದ್ದಾರೆ. 

ಬೆಂಗಳೂರು :  ಜಾತ್ಯತೀತ ಜನತಾದಳ ಪಕ್ಷದ ಶಾಸಕನಾಗಿದ್ದರೆ ನಾನು ಈಗಾಗಲೇ ಸಚಿವನಾಗಿರುತ್ತಿದ್ದೆ. ಜೆಡಿಎಸ್‌ನವರು ನಾನು ಕೇಳುವ ಮೊದಲೇ ಸಚಿವ ಸ್ಥಾನ ನೀಡುತ್ತಿದ್ದರು. ಆದರೆ, ಕಾಂಗ್ರೆಸ್‌ ಪಕ್ಷದಲ್ಲಿ ಯುವ ಶಾಸಕರಿಗೆ ಆದ್ಯತೆ ನೀಡುತ್ತಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ. ಸುಧಾಕರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಅವರ ಜೆ.ಪಿ. ನಗರದ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್‌ ಹಿರಿಯರ ಪಕ್ಷ ಮತ್ತು ಹಳೆಯ ಪಕ್ಷ ಆದ್ದರಿಂದ ನನಗೆ ಸಚಿವ ಸ್ಥಾನ ತಪ್ಪಿದೆ ಎಂದು ಪರೋಕ್ಷವಾಗಿ ಪಕ್ಷದ ನಡೆಯನ್ನು ಟೀಕಿಸಿದರು. ಪ್ರಸ್ತುತ ಸಚಿವ ಸ್ಥಾನದ ಬಗ್ಗೆ ನನಗೆ ಯಾವುದೇ ನಿರೀಕ್ಷೆಗಳಿಲ್ಲ. ಆದರೆ, ಹೈಕಮಾಂಡ್‌ ನಿರ್ಧಾರ ಮಾಡಿ ಸಚಿವ ಸ್ಥಾನ ನೀಡಿದರೆ ಸಚಿವನಾಗಿ ಜನ ಸೇವೆ ಮಾಡಲು ಸಿದ್ಧ. ಸದ್ಯಕ್ಕೆ ಶಾಸಕನಾಗಿ ನಾನು ಮಾಡಬೇಕಾದ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

click me!