ಸುಪ್ರೀಂ ತೀರ್ಪಿನ ಬೆನ್ನಲ್ಲೇ ಅತೃಪ್ತ ಶಾಸಕರ ಪ್ರತಿಕ್ರಿಯೆ, ಮುಂದಿನ ನಡೆ ಪ್ರಕಟ!

By Web DeskFirst Published Jul 17, 2019, 12:38 PM IST
Highlights

ರಾಜ್ಯ ರಾಜಕಾರಣದಲ್ಲಿ ಮಹತ್ತರ ತಿರುವು| ಸುಪ್ರೀಂ ಮಧ್ಯಂತರ ತೀರ್ಪಿನ ಬೆನ್ನಲ್ಲೇ ಅತೃಪ್ತ ಶಾಸಕರ ಪ್ರತಿಕ್ರಿಯೆ!| ಸರ್ಕಾರ ಉಳಿಸಲು ಮುಂಬೈನಿಂದ ಬರ್ತಾರಾ? ಅಥವಾ ಸುಮ್ಮನಾಗ್ತಾರಾ?| ಅತೃಪ್ತ ಶಾಸಕರು ಹೇಳಿದ್ದೇನು?

ಬೆಂಗಳೂರು[ಜು.17]: ರಾಜ್ಯ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ಪ್ರಕಟಿಸಿದ್ದು, ಇದು ಸ್ಪೀಕರ್ ಹಾಗೂ ಅತೃಪ್ತ ಶಾಸಕರು ಇಬ್ಬರಿಗೂ ರಿಲೀಫ್ ನೀಡಿದೆ. ಹೀಗಿದ್ದರೂ ತೀರ್ಪಿನಿಂದ ಸರ್ಕಾರ ಪತನಗೊಳ್ಳುವ ಲಕ್ಷಣಗಳು ಮಾತ್ರ ಮತ್ತಷ್ಟು ಹೆಚ್ಚಾಗಿವೆ. ಸದ್ಯ ಈ ಎಲ್ಲಾ ಹೈಡ್ರಾಮಾದ ಬೆನ್ನಲ್ಲೇ ಅತೃಪ್ತ ಶಾಸಕರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ತಮ್ಮ ಮುಂದಿನ ನಡೆ ಏನು ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ.

ಸುಪ್ರೀಂ ಮಹಾ ತೀರ್ಪು: ರಾಜೀನಾಮೆ ಸ್ವೀಕಾರ, ಸ್ಪೀಕರ್‌ಗಿಲ್ಲ ಒತ್ತಡ

ಸುಪ್ರಿಂ ಮಧ್ಯಂತರ ತೀರ್ಪು ಪ್ರಕಟಿಸಿದ ಬಳಿಕ ಪ್ರತಿಕ್ರಿಯಿಸಿರುವ ಅತೃಪ್ತ ಶಾಸಕರು 'ಸುಪ್ರೀಂಕೋರ್ಟ್ ನೀಡಿರುವ ತೀರ್ಪುನ್ನು ನಾವು ಸ್ವಾಗತಿಸುತ್ತೇವೆ. ರಾಜೀನಾಮೆ ನೀಡಿರುವ ನಾವು ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದೇವೆ. ವಿಶ್ವಾಸಮತ ಯಾಚನೆ ಹಿನ್ನೆಲೆ ಸದನಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಯಾವ ಕಾರಣಕ್ಕೂ ವಾಪಸ್ ಹೋಗಲ್ಲ, ನಮ್ಮ ನಿರ್ಧಾರಕ್ಕೆ ಬದ್ಧ' ಎಂದಿದ್ದಾರೆ. ಈ ಪ್ರತಿಕ್ರಿಯೆಯಿಂದ ಸರ್ಕಾರ ಬೀಳುವುದು ಬಹುತೇಕ ಖಚಿತವಾಗಿದೆ. 

ಸುಪ್ರೀಂ ತೀರ್ಪು: ಸರ್ಕಾರಕ್ಕೆ ಸೋಲು?, ಯಾವುದಯ್ಯಾ ಸಿಎಂಗೆ ಮುಂದಿನ ದಾರಿ?

ಕಳೆದೆರಡು ವಾರದಿಂದ ಏನೇನಾಯ್ತು?

ರಾಜೀನಾಮೆ ನೀಡಿ ಮುಂಬೈ ಸೇರಿದ್ದ ಅತೃಪ್ತ ಶಾಸಕರು ಅದೇನೇ ಮಾಡಿದರೂ ಮರಳಿ ಬರಲು ಒಪ್ಪಿರಲಿಲ್ಲ. ದೋಸ್ತಿ ನಾಯಕರು ಅತೃಪ್ತ ಶಾಸಕರನ್ನು ಓಲೈಸಿ ಮರಳಿ ಕರೆ ತರಲು ಯತ್ನಿಸುತ್ತಿರುವಾಗಲೇ ರಾಜೀನಾಮೆ ಅಂಗೀಕರಿಸಲು ವಿಳಂಬವಾಗುತ್ತಿದೆ ಎಂದು ದೂರಿ ಸುಪ್ರೀಂ ಕದ ತಟ್ಟಿದ್ದರು. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಮಧ್ಯಂತರ ತೀರ್ಪು ಪ್ರಕಟಿಸಿದ್ದು ಅತೃಪ್ತ ಶಾಸಕರಿಗೆ ವಿಪ್ ಅನ್ವಯವಾಗುವುದಿಲ್ಲ. ವಿಶ್ವಾಸಮತದ ವೇಳೆ ಸದನದಲ್ಲಿ ಹಾಜರಿರುವುದು ಅವರ ವಿವೆಚನೆಗೆ ಬಿಟ್ಟಿದ್ದು ಎಂದಿದೆ. ಇನ್ನು ಸರ್ಕಾರ ಉಳಿಯಬೇಕಿದ್ದರೆ ಅತೃಪ್ತ ಶಾಸಕರೇ ಮನಸ್ಸು ಬದಲಾಯಿಸಿ ಮರಳಬೇಕಷ್ಟೇ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

click me!