ಕೈನಲ್ಲಿ ಮತ್ತೆ ಮನೆ ಮಾಡಿದ ಆತಂಕ : ಅಜ್ಞಾತ ಸ್ಥಳಕ್ಕೆ ಈ ಮೂವರು ಕಾಂಗ್ರೆಸ್ ನಾಯಕರು

By Web DeskFirst Published Jul 17, 2019, 12:33 PM IST
Highlights

ಕರ್ನಾಟಕ ರಾಜಕೀಯ ಪ್ರಹಸನದ ಬಗ್ಗೆ ಸುಪ್ರೀಂಕೋರ್ಟ್ ನಿಂದ ತೀರ್ಪು ಹೊರಬಿದ್ದಿದೆ. ಈ ವಿಚಾರವೀಗ ಕಾಂಗ್ರೆಸ್ ನಾಯಕರಲ್ಲಿ ಆತಂಕ ಮೂಡುವಂತೆ ಮಾಡಿದೆ. 

ಬೆಂಗಳೂರು[ಜು.17] : ಸುಪ್ರೀಂಕೋರ್ಟ್ ರಾಜ್ಯ ರಾಜಕೀಯದ ಬಗ್ಗೆ ಮಹತ್ವದ ತೀರ್ಪನ್ನು ಪ್ರಕಟ ಮಾಡಿದೆ. ವಿಶ್ವಾಸಮತದ ವೇಳೆ ಅತೃಪ್ತ ಶಾಸಕರು ಹಾಜರಾಗಬಹುದು ಅಥವಾ ಹಾಜರಾಗದೇ ಇರಬಹುದು ಎಂದು ತೀರ್ಪಿತ್ತಿದ್ದು, ಕಾಂಗ್ರೆಸ್ ನಾಯಕರನ್ನು ಕಂಗೆಡಿಸಿದೆ. 

ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಕಾಂಗ್ರೆಸ್ ಮೂವರು ನಾಯಕರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಕೈ ಹಿರಿಯ ನಾಯಕ ಸಿದ್ದಾರಾಮಯ್ಯ ಕೆಪಿಸಿಸಿ ಅಧ್ಯಕ್ಷ  ದಿನೇಶ್ ಗುಂಡೂರಾವ್, ಸಚಿವ ಕೃಷ್ಣ ಬೈರೇಗೌಡ ಕೆಕೆ ಗೆಸ್ಟ್ ಹೌಸ್ ನಿಂದ ಒಂದೇ ಕಾರಿನಲ್ಲಿ ತೆರಳಿದ್ದಾರೆ. 

ಕರ್ನಾಟಕ ರಾಜಕೀಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಶ್ವಾಸ ಮತ ಯಾಚನೆ ಮಾಡಲು ಸಿಎಂ ಕುಮಾರಸ್ವಾಮಿ ನಿರ್ಧಾರ ಮಾಡಿದ್ದು, ಈ ವೇಳೆ ಅತೃಪ್ತರಿಗೆ ಯಾವುದೇ ಒತ್ತಾಯ ಹೇರುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದ್ದು, ಇದರಿಂದ ಸರ್ಕಾರದ ಭವಿಷ್ಯದ ಬಗ್ಗೆ ಸಹಜವಾಗಿ ಆತಂಕ ಮೂಡಿದೆ.

ಈ ನಿಟ್ಟಿನಲ್ಲಿ ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೂವರು ಕಾಂಗ್ರೆಸ್ ನಾಯಕರೂ ಕೂಡ ಮುಂದಿನ ಮಾರ್ಗಗಳ ಕುರಿತು ಸಮಾಲೋಚನೆ ನಡೆಸಲು ತೆರಳಿದ್ದಾರೆ ಎನ್ನಲಾಗಿದೆ.

click me!