'JDS ಜತೆಗಿನ ಮೈತ್ರಿ ಪಕ್ಷದ ಭವಿಷ್ಯಕ್ಕೆ ಮಾರಕ': ಕಾಂಗ್ರೆಸ್ ನಾಯಕತ್ವ ಈಗ ನಿರಾಳ!

By Web DeskFirst Published Jul 24, 2019, 9:17 AM IST
Highlights

ಜೆಡಿಎಸ್ ಜತೆಗಿನ ಮೈತ್ರಿ ಪಕ್ಷದ ಭವಿಷ್ಯಕ್ಕೆ ಮಾರಕ ಎನ್ನುತ್ತಿದ್ದ ಕಾಂಗ್ರೆಸಿಗರು| ಕಾಂಗ್ರೆಸ್ ನಾಯಕತ್ವ ಈಗ ನಿರಾಳ!

ಬೆಂಗಳೂರು[ಜು.24]: ಮೈತ್ರಿ ಸರ್ಕಾರದ ಪತನದಿಂದ ಕಾಂಗ್ರೆಸ್ ನಾಯಕತ್ವಕ್ಕೆ ಜೆಡಿಎಸ್‌ನ ಹೊರೆಯಿಂದ ಮುಕ್ತವಾದ ಭಾವ ಮೂಡಿದೆ

ಮೈತ್ರಿ ಸರ್ಕಾರ ಇದ್ದಷ್ಟು ದಿನವೂ ಕಾಂಗ್ರೆಸ್ ಪಕ್ಷದ ಭವಿಷ್ಯಕ್ಕೆ ಮಾರಕ ಎಂಬ ಅಭಿಪ್ರಾಯ ಕಾಂಗ್ರೆಸ್ ನಾಯಕರು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರದ್ದಾಗಿತ್ತು. ಜೆಡಿಎಸ್ ಪಕ್ಷವು ಮೈತ್ರಿ ಧರ್ಮ ಪಾಲಿಸದೇ ಇದ್ದದ್ದು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾರ್ಯಾಲಯ ಕಾಂಗ್ರೆಸ್ ಶಾಸಕರ ಬೇಡಿಕೆಗಳಿಗೆ ಮಣೆ ಹಾಕುತ್ತಿರಲಿಲ್ಲ. ಇದರಿಂದಾಗಿ ಕಾಂಗ್ರೆಸ್ ಶಾಸಕರಿಂದ ಸತತ ದೂರು ಬರುತ್ತಿದ್ದ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ಪಕ್ಷಕ್ಕೆ ಮಾರಕ ಎಂಬ ಅಭಿಪ್ರಾಯ ಪಕ್ಷದಲ್ಲಿತ್ತು.

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಕಳೆದ ಮೂರು ವಾರಗಳಿಂದ ಏನೇನಾಯ್ತು?

ಇದಲ್ಲದೆ, ಕ್ಷೇತ್ರದ ಮಟ್ಟದಲ್ಲಿ ಕಾರ್ಯಕರ್ತರಿಂದಲೂ ಮೈತ್ರಿಗೆ ತೀವ್ರ ವಿರೋಧವಿತ್ತು. ಜೆಡಿಎಸ್ ಮುಖ್ಯಮಂತ್ರಿಯಿದ್ದುದರಿಂದ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರದಲ್ಲಿ ಜೆಡಿಎಸ್‌ನ ಸ್ಥಳೀಯ ನಾಯಕರು ಪ್ರಭಾವಿಗಳಾಗಿ ಬೆಳೆಯುತ್ತಿದ್ದರು. ಇದು ಕಾಂಗ್ರೆಸ್ ಕಾರ್ಯಕರ್ತರಿಗೆ ತೀವ್ರ ಬೇಸರ ಉಂಟು ಮಾಡಿತ್ತು. ಕೆಲವು ಕ್ಷೇತ್ರಗಳಲ್ಲಂತೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸ್ ದೂರುಗಳು ದಾಖಲಾಗತೊಡಗಿದ್ದವು. ಇದರಿಂದ ಬೇಸತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ನಾಯಕತ್ವದ ವಿರುದ್ಧ ಧ್ವನಿಯೆತ್ತಿದ್ದರು. ಅಲ್ಲದೆ, ಮತ್ತೆ ಕೆಲವು ಕ್ಷೇತ್ರಗಳಲ್ಲಿ ಕಾರ್ಯಕರ್ತರು ಅನ್ಯ ಪಕ್ಷಗಳತ್ತ ಮುಖ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಆದರೆ, ಈಗ ಮೈತ್ರಿ ಸರ್ಕಾರ ಪತನಗೊಳ್ಳುವುದರೊಂದಿಗೆ ಕಾಂಗ್ರೆಸ್ ಜವಾಬ್ದಾರಿಯುತ ಪ್ರತಿಪಕ್ಷದ ಸ್ಥಾನ ನಿರ್ವಹಿಸಬಹುದು. ಇದೇ ವೇಳೆ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ದಿಸೆಯಲ್ಲೂ ಮುಂದಾಗಬಹುದು. ಈ ದೃಷ್ಟಿಯಲ್ಲಿ ಮೈತ್ರಿ ಸರ್ಕಾರದ ಪತನ ಕಾಂಗ್ರೆಸ್ ನಾಯಕತ್ವಕ್ಕೆ ಮುಕ್ತ ಭಾವ ಮೂಡಿಸಿ

click me!