ಬೆಂಗಳೂರು ಬಿಟ್ಟ ಸುಧಾಕರ, ಶನಿವಾರದ ಮ್ಯಾನ್ ಆಫ್ ದಿ ಮ್ಯಾಚ್ MTB ನಾಗರಾಜ್!

Published : Jul 13, 2019, 10:43 PM ISTUpdated : Jul 13, 2019, 10:48 PM IST
ಬೆಂಗಳೂರು ಬಿಟ್ಟ ಸುಧಾಕರ, ಶನಿವಾರದ ಮ್ಯಾನ್ ಆಫ್ ದಿ ಮ್ಯಾಚ್ MTB ನಾಗರಾಜ್!

ಸಾರಾಂಶ

ರಾಜಕೀಯ ಹೈಡ್ರಾಮಕ್ಕೆ ಕೊನೆ ಇಲ್ಲ. ಶನಿವಾರದ ಮ್ಯಾನ್ ಆಫ್ ದಿ ಮ್ಯಾಚ್ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಸಲ್ಲುತ್ತದೆ.  ಇಡೀ ದಿನದ ಘಟನಾವಳಿಗಳು ಎಂಟಿಬಿ ಸುತ್ತವೇ ಗಿರಕಿ ಹೊಡೆದವು.

ಬೆಂಗಳೂರು[ಜು. 13] ರಿವರ್ಸ್ ಆಪರೇಶನ್ ಮಾತನಾಡುತ್ತಿದ್ದ ದೋಸ್ತಿ ಪಡೆಯವರು ಶನಿವಾರ ಅಖಾಡಕ್ಕೆ ಧುಮುಕಿದ್ದರು. ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಶನಿವಾರ ಮುಂಜಾನೆಯಿಂದಲೂ ಎಂಟಿಬಿಯನ್ನು ಕಾಂಗ್ರೆಸ್ ನಾಕರು ಭೇಟಿಯಾಗುತ್ತಲೇ ಇದ್ದರು.

ಕಾಂಗ್ರೆಸ್: ರಾಜೀನಾಮೆ ಹಿಂಪಡೆಯಲು ಎಂಟಿಬಿ ನಾಗರಾಜ್  ಜತೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಮಾತುಕತೆ. ರಾತ್ರಿ ವೇಳೆಗೆ ಸೆಕೆಂಡ್ ರೌಂಡ್ ಮಾತುಕತೆ. ಕೊನೆಗೂ ಅಡ್ಡಗೋಡೆ ಮೇಲೆ ದೀಪವಿಟ್ಟ ಹೊಸಕೋಟೆ ಶಾಸಕ. ಪಕ್ಷದಲ್ಲೇ ಉಳಿದುಕೊಂಡಿರುವ ಕಾಂಗ್ರೆಸ್ ಶಾಸಕರು ದೇವನಹಳ್ಳಿ ಸಮೀಪದ ರೆಸಾರ್ಟ್ ನಲ್ಲಿ ಇದ್ದು ಹಿರಿಯ ನಾಯಕರು ಭೇಟಿ ಮಾಡಿ ಬರುತ್ತಿದ್ದಾರೆ.

ಬಿಗ್ ಬ್ರೆಕಿಂಗ್: ಎಂಟಿಬಿ ನಾಗರಾಜ್ ರಾಜೀನಾಮೆ ವಾಪಸ್, ಆದ್ರೆ ಒಂದ್ ಕಂಡಿಶನ್!

ಅತೃಪ್ತರು: ರಾಜೀನಾಮೆ ಕೊಟ್ಟು ಹೋಗಿರುವ ಶಾಸಕರು ಮುಂಬೈನ ಖಾಸಗಿ ಹೊಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ಪಕ್ಷೇತರರು ಸಹ ಅಲ್ಲೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.

ಬಿಜೆಪಿ : ಶಾಸಕರು ಬೆಂಗಳೂರಿನ ಯಲಹಂಕ ಸಮೀಪದಲ್ಲಿ ತಮ್ಮ ವಾಸ್ತವ್ಯ ಮಾಡಿಕೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಶನಿವಾರ ಅಲ್ಲಿಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಣೆ ಮಾಡಿಕೊಂಡು ಬಂದಿದ್ದಾರೆ.

ಜೆಡಿಎಸ್:  ಇನ್ನು  ಜೆಡಿಎಸ್ ಶಾಸಕರಿಗೆ ನಂದಿ ಗಿರಿಧಾಮದ ಸಮೀಪದಲ್ಲಿನ ರೆಸಾರ್ಟ್ ನಲ್ಲಿಯೇ ಉಳಿದುಕೊಂಡಿದ್ದು ಮಾಜಿ ಪ್ರಧಾನಿ ದೇವೇಗೌಡ ಶಾಸಕರ ವಿವರಣೆ ಪಡೆದುಕೊಂಡಿದ್ದಾರೆ.

ಸುಧಾಕರ್ ದೆಹಲಿಗೆ: ರಾಜೀನಾಮೆ ನೀಡಿದ್ದ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ದೆಹಲಿಗೆ ತೆರಳಿದ್ದಾರೆ ಎಂದು  ವರದಿಯಾಗಿದ್ದರೂ ಅವರು ಅತೃಪ್ತರ  ಜತೆ ಸೇರಿಕೊಳ್ಳಲು ಮುಂಬೈಗೆ ಹೋಗಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಸುಧಾಕರ್ ಬೆಂಗಳೂರನ್ನು ಬಿಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!