ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ 'ಹರಿದು ಹೋದ ಸ್ಪೀಕರ್'!

By Web DeskFirst Published Jul 19, 2019, 12:43 PM IST
Highlights

ರಾಜ್ಯದಲ್ಲಿ ಮುಂದುವರೆದ ರಾಜಕೀಯ ಪ್ರಹಸನ| ಅತ್ತ ಸದನದಲ್ಲಿ ಹೈಡ್ರಾಮಾ, ಇತ್ತ ಟ್ವಿಟರ್‌ನಲ್ಲಿ ಸೌಂಡ್ ಮಾಡುತ್ತಿದೆ ಹರಿದು ಹೋದ ಸ್ಪೀಕರ್| ರಾಜಕೀಯ ಪ್ರಹಸನಕ್ಕೆ ಮುಕ್ತಿ ಸಿಗಲಿ, ಏನಾದರೊಂದು ನಿರ್ಧಾರ ಪ್ರಕಟಿಸಲಿ ಎಂಬುವುದೇ ಪ್ರಜೆಗಳ ಆಗ್ರಹ. 

ಬೆಂಗಳೂರು[ಜು.19]: ಕಳೆದೆರಡು ವಾರದಿಂದ ನಡೆಯುತ್ತಿರುವ ರಾಜಕೀಯ ಪ್ರಹಸನ ಕೊನೆಗಾಣುತ್ತಿಲ್ಲ. ದೋಸ್ತಿ ನಾಯಕರು ಅಧಿಕಾರ ಉಳಿಸಿಕೊಳ್ಳಲು ಹೆಣಗಾಣುತ್ತಿದ್ದರೆ, ಅತ್ತ ಬಿಜೆಪಿ ನಾಯಕರು ವಿಶ್ವಾಸಮತ ಮಂಡಿಸಿ ಎಂದು ಪಟ್ಟು ಹಿಡಿದಿದ್ದಾರೆ. ಇನ್ನೇನು ಈ ಎಲ್ಲಾ ಹೈಡ್ರಾಮಾ ಕೊನೆಗಾಣಲಿದೆ ಎನ್ನುವಷ್ಟರಲ್ಲಿ ವಿಶ್ವಾಸಮತ ಮಂಡನೆ ವಿಳಂಬವಾಗುತ್ತಿದೆ. ಹೀಗಿರುವಾಗ ಮತ್ತೊಂದೆಡೆ ಟ್ವಿಟರ್‌ನಲ್ಲಿ ಹರಿದುಹೋದ ಸ್ಪೀಕರ್ ಬಹಳಷ್ಟು ಸೌಂಡ್ ಮಾಡಲಾರಂಭಿಸಿದೆ.

ಹೌದು ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ನಾಟಕೀಯ ಬೆಳವಣಿಗೆಗಳಿಂದ ಜನರೆಲ್ಲಾ ಬೇಸತ್ತಿದ್ದಾರೆ. ಹೀಗಿದ್ದರೂ ರಾಜಕೀಯ ನಾಯಕರ ಕಿತ್ತಾಟ ಮುಂದುವರೆದಿದೆ. ಅತೃಪ್ತ ಶಾಸಕರನ್ನು ಮರಳಿ ಕರೆತರಲು ದೋಸ್ತಿ ನಾಯಕರು ಎಲ್ಲಾ ಪ್ರಯತ್ನಗಳನ್ನು ನಡೆಸಿದ್ದು, ಯಾವುದೂ ಫಲಿಸಿಲ್ಲ. ಹೀಗಿರುವಾಗ ಸಿಎಂ ಕುಮಾರಸ್ವಾಮಿ ಕೊನೆಯ ಯತ್ನ ಎಂಬಂತೆ ವಿಶ್ವಾಸಮತ ಮಂಡನೆಯ ದಾಳವೆಸೆದಿದ್ದರು. ಸ್ಪೀಕರ್ ರಮೇಶ್ ಕುಮಾರ್ ಗುರುವಾರ 11 ಗಂಟೆಗೆ ವಿಶ್ವಾಸಮತ ಮಂಡನೆಗೆ ದಿನಾಂಕ ನಿಗದಿಪಡಿಸಿದ್ದರಾದರೂ, ದೋಸ್ತಿ ನಾಯಕರು ಸುಪ್ರೀಂ ತೀರ್ಪು ಉಲ್ಲೇಖಿಸಿ ಕ್ರಿಯಾಲೋಪವೆತ್ತಿ ತಂತ್ರಗಾರಿಕೆ ಮೆರೆದಿದ್ದರು. ಆದರೆ ಇದರಿಂದ ಕುಪಿತಗೊಂಡ ಬಿಜೆಪಿ ನಾಯಕರು ಅಹೋರಾತ್ರಿ ಧರಣಿ ಹೂಡಿಸಿದ್ದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ 'ಹರಿದು ಹೋದ ಸ್ಪೀಕರ್' ಭಾರೀ ಸೌಂಡ್ ಮಾಡುತ್ತಿದೆ. ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಸೇರಿ ನೆಟ್ಟಿಗರು ’ಸ್ಪೀಕರ್’ ಫೋಟೋ ಶೇರ್ ಮಾಡಿದ್ದಾರೆ. 

ಈ ಸ್ಪೀಕರ್ ಕೆಟ್ಟುಹೋಗಿದೆ... pic.twitter.com/x0z3xyUnNg

— K S Eshwarappa (@ikseshwarappa)

ಈ ಕುರಿತಾಗಿ ಬಿಜೆಪಿ ನಾಯಕ ಕೆ. ಎಸ್ ಈಶ್ವರಪ್ಪ ಮಾಡಿರುವ ಟ್ವೀಟ್ ಭಾರೀ ವೈರಲ್ ಆಗಿದೆ.

Works better than the Speaker in Karnataka. pic.twitter.com/wtCzziGYMZ

— Ajay Kurpad (@KurpadAjay)

ಇಂತಹ ಟ್ವೀಟ್ ವೈರಲ್ ಆಗುತ್ತಿದ್ದ ಬೆನ್ನಲ್ಲೇ ಯಕ್ಷಗಾನ ಸಂಘಟಕ ಅನಿಲ್ ಕುಮಾರ್ ಶೆಟ್ಟಿ ಪ್ರಕಟಣೆಯೊಂದನ್ನು ಹೊರಡಿಸಿ 'ರವೀಂದ್ರ ಕಲಾಕ್ಷೇತ್ರದ ಎಲ್ಲಾ ಸ್ಪೀಕರ್‌ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿವೆ,. ವದಂತಿಗಳಿಗೆ ಕಿಡಿಗೊಡಬೇಡಿ. ಇಂದಿನ ಕಾರ್ಯಕ್ರಮ ಸುಸೂತ್ರವಾಗಿ ಜರುಗಲಿದೆ' ಎಂದೂ ಸ್ಪಷ್ಣನೆ ನೀಡಿದ್ದಾರೆ.

click me!