ವಿಶ್ವಾಸಮತ ಚರ್ಚೆ ವೇಳೆ ಎದ್ದು ಹೊರ ನಡೆದ ಬಿಜೆಪಿ ಶಾಸಕರು

By Web Desk  |  First Published Jul 19, 2019, 12:41 PM IST

ರಾಜ್ಯದಲ್ಲಿ ವಿಶ್ವಾಸಮತ ಯಾಚನೆಗೆ ಡೆಡ್ ಲೈನ್ ನೀಡಲಾಗಿದೆ. ಕಲಾಪದಲ್ಲಿ ವಿವಿಧ ರೀತಿಯ ಚರ್ಚೆಗಳು ಮುಂದುವರಿದಿದ್ದು, ಇದರ ನಡುವೆಯೇ ಇಬ್ಬರು ನಾಯಕರು ಜಯದ ಚಿಹ್ನೆ ತೋರಿಸಿ ಕಲಾಪದಿಂದ ಎದ್ದು ಹೊರನಡೆದಿದ್ದಾರೆ.


ಬೆಂಗಳೂರು [ಜು.19] : ರಾಜ್ಯ ರಾಜಕೀಯದಲ್ಲಿ ಹೈ ಡ್ರಾಮ ನಡೆಯುತ್ತಿದೆ.  ವಿಶ್ವಾಸ ಮತ ಯಾಚನೆಗೆ ಡೆಡ್ ಲೈನ್ ನೀಡಲಾಗಿದೆ. ಇತ್ತ ಮೈತ್ರಿ ಪಾಳಯದಲ್ಲಿ ಇನ್ನೂ ಕೂಡ ಭರವಸೆ ಉಳಿಸಿಕೊಂಡಿದೆ. 

ಆದರೆ ಇತ್ತ ಅತೃಪ್ತರು ಮುಂಬೈ ಸೇರಿದ್ದು, ಕೆಲವರು  ಎಸ್ಕೇಪ್ ಆಗಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಪಾಳಯದಲ್ಲಿ ತಮ್ಮದೇ ಗೆಲುವಿನ ವಿಶ್ವಾಸ ಹೆಚ್ಚಾಗಿದೆ. 

Latest Videos

undefined

ಮಧ್ಯಾಹ್ನದ ವೇಳೆ ವಿಶ್ವಾಸಮತ ಯಾಚನೆ ಮಾಡಬೇಕು ಎಂದು ಗವರ್ನರ್ ಡೆಡ್ ಲೈನ್ ನೀಡಿದ್ದಾರೆ. ಆದರೆ ಹಲವು ಚರ್ಚೆಗಳು ಸದನದಲ್ಲಿ ಮುಂದುವರಿದಿದ್ದು, ವಿಕ್ಟರಿ ಚಿಹ್ನೆ ತೋರಿಸಿ ಬಿಜೆಪಿ ಮುಖಂಡ ಆರ್. ಅಶೋಕ್, ಹಾಗೂ ಮಲ್ಲೇಶ್ವರಂ ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ ಸದನದಿಂದ ಹೊರ ನಡೆದಿದ್ದಾರೆ. 

ಕರ್ನಾಟಕ ರಾಜಕೀಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ಮೈತ್ರಿ ಪಾಳಯವೂ ಕೂಡ ತಮ್ಮ ಗೆಲುವಿಗಾಗಿ ನಿರಂತರವಾಗಿ ಯತ್ನದಲ್ಲಿದ್ದು, ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ತಮ್ಮ ಶಾಸಕರ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದಾರೆ.

click me!