ಒಂದೇ ಏಟಿನಲ್ಲಿ 2 ಹಕ್ಕಿ ಹೊಡೆಯಲು ಪ್ಲಾನ್! ಬಿಜೆಪಿಯಿಂದ ಮೊದಲ ದಾಳ

By Web DeskFirst Published Jul 6, 2019, 3:11 PM IST
Highlights

11 ಶಾಸಕರ ರಾಜೀನಾಮೆಯಿಂದಾಗಿ ರಾಜ್ಯದಲ್ಲಿ ರಾಜಕೀಯ ಹೈಡ್ರಾಮ ನಡೆಯುತ್ತಿದೆ. ಮೈತ್ರಿ ಸರ್ಕಾರ ಪತನವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದ್ದು, ಬಿಜೆಪಿ ಮೊದಲ ದಾಳವನ್ನು ಪ್ರಯೋಗಿಸಿದೆ. 

ಬೆಂಗಳೂರು (ಜು.07): ಮೈತ್ರಿ ಸರ್ಕಾರದ 11 ಶಾಸಕರು ರಾಜೀನಾಮೆ ಸಲ್ಲಿಸಿದ್ದು, ಈಗ ಬಿಜೆಪಿಯು ಅಖಾಡಕ್ಕಿಳಿದಿದೆ. ರಾಜ್ಯದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಹೈಡ್ರಾಮಾದಲ್ಲಿ ಮೊದಲ ದಾಳ ಪ್ರಯೋಗಿಸಿದೆ.

ರಾಜ್ಯ ರಾಜಕಾರಣದ ಪ್ರಸಕ್ತ ಬೆಳವಣಿಗೆಗಳ ಕುರಿತು ಮಾತನಾಡಿದ, ಬಿಜೆಪಿ ನಾಯಕ ಡಿ.ವಿ. ಸದಾನಂದ ಗೌಡ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸುವ ಮೂಲಕ ಬಿಜೆಪಿ ಎಂಟ್ರಿಯ ಸುಳಿವು ನೀಡಿದರು.

ಇದನ್ನೂ ಓದಿ | ಫಲಿಸದ ಡಿಕೆಶಿ ಮಾತುಕತೆ: 11 ಶಾಸಕರ ರಾಜೀನಾಮೆ! ರಾಜ್ಯಪಾಲರ ಆಟ ಶುರು!

ಕೇಂದ್ರ ಗೃಹ ಸಚಿವರು ಮಧ್ಯಪ್ರವೇಶ ಮಾಡಬೇಕು. ರಾಜ್ಯ ಸರ್ಕಾರದ ಮಾಹಿತಿಯನ್ನು ರಾಷ್ಟ್ರಪತಿಗಳಿಗೆ ನೀಡಬೇಕು ಎಂದು ಡಿ.ವಿ.ಸದಾನಂದಗೌಡ, ಗೃಹ ಮಂತ್ರಿಯೂ ಆಗಿರುವ ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಷಾಗೆ ಆಹ್ವಾನ ನೀಡಿದರು.

ಕಾನೂನಾತ್ಮಕವಾಗಿ ನಡೆದು ಕೊಳ್ಳುವ ಜಾಣ ನಡೆ ತೋರುತ್ತಿರುವ ಬಿಜೆಪಿಯು, ಆ ಮೂಲಕ ರಾಜ್ಯ ರಾಜಕಾರಣಕ್ಕೆ ಮಧ್ಯಪ್ರವೇಶಿಸಲು ಅಮಿತ್ ಷಾಗೆ ಎರಡೆರಡು ಅವಕಾಶ ನೀಡಿದೆ.

click me!