
ಕೋಲಾರ[ಜೂ. 01] ದೆಹಲಿ ಮೂಲದಿಂದಲೇ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡರಿಗೆ ಈ ಶಾಕಿಂಗ್ ಸುದ್ದಿ ಗೊತ್ತಾಗಿದೆಯಂತೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದು ಸಚಿವ ಸಂಪುಟವೂ ರಚನೆಯಾಗಿದೆ. ಇಂಥ ಸಂದರ್ಭದಲ್ಲಿ ಕೃಷ್ಣಭೈರೇಗೌಡರ ಬತ್ತಳಿಕೆ ಸೇರಿಕೊಂಡ ಆ ಹೊಸ ಸುದ್ದಿ ಯಾವುದು?
ಲೋಕ ಸಮರದಲ್ಲಿ ಸದಾನಂದ ಗೌಡರ ಜತೆ ಸೆಣೆಸಿ ಬೆಂಗಳೂರು ಉತ್ತರದಲ್ಲಿ 676982 ವೋಟು ಪಡೆದು 147518 ಮತಗಳ ಸೋಲು ಕಂಡಿದ್ದ ಸಚಿವ ಕೃಷ್ಣ ಭೈರೇಗೌಡ ಕೋಲಾರದಲ್ಲಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಲು ದೆಹಲಿಯ ಬಿಜೆಪಿ ವರಿಷ್ಠರಿಂದಲೇ ಸೂಚನೆ ಬಂದಿದೆ ಎಂದು ಬಾಂಬ್ ಸಿಡಿಸಿದ್ದಾರೆ.
ಬಿಎಸ್ ಯಡಿಯೂರಪ್ಪಗೆ ಕೈ ಶಾಸಕನ ಬಹಿರಂಗ ಸವಾಲು
ದೆಹಲಿ ಮೂಲಗಳಿಂದಲೇ ನನಗೆ ಮಾಹಿತಿ ಸಿಕ್ಕಿದೆ. ಏನಾದರೂ ಮಾಡಿ ಮೈತ್ರಿ ಸರ್ಕಾರವನ್ನ ಉರುಳಿಸಬೇಕು ಅನ್ನೋ ನಿರ್ಧಾರಕ್ಕೆ ಬಿಜೆಪಿಯವರು ಬಂದೇ ಬಿಟ್ಟಿದ್ದಾರೆ ಆದರೆ ಸರ್ಕಾರಕ್ಕೆ ಏನು ಮಾಡಲು ಸಾಧ್ಯವಿಲ್ಲ ಎಂಬ ವಿಶ್ವಾಸವನ್ನು ಹೊರಹಾಕಿದ್ದಾರೆ.
ಬಿಜೆಪಿಯವರು ಜನರ ದಿಕ್ಕು ತಪ್ಪಿಸುವುದರಲ್ಲಿ ನಿಸ್ಸೀಮರು. ಕಳೆದ 10 ತಿಂಗಳಿನಿಂದ ಇದೇ ಕೆಲಸ ಮಾಡಿಕೊಂಡು ಬಂದಿದ್ದಾರೆ. ಇದು ಇಲ್ಲಿಗೆ ನಿಲ್ಲಲ್ಲ. ಮುಂದೆಯೂ ಹೇಳಿಕೆ ನೀಡುತ್ತಲೆ ಇರುತ್ತಾರೆ. ಆದರೆ ದೋಸ್ತಿ ಸರಕಾರಕ್ಕೆ ಮಾತ್ರ ಏನೂ ಆಗಲ್ಲ ಎಂದು ಕರ್ನಾಟಕ ಬಿಜೆಪಿ ನಾಯಕರನ್ನು ಲೇವಡಿ ಮಾಡಿದ್ದಾರೆ.ಆಗಾಗ.. ಅಲ್ಲಲ್ಲಿ ದೋಸ್ತಿ ಸರಕಾರದಲ್ಲಿ ಅಪಸ್ವರದ ಮಾತುಗಳನ್ನು ಸಚಿವರೇ ಆಡುತ್ತಿದ್ದರೂ ಅಗ್ರ ಪಂಕ್ತಿಯ ನಾಯಕರು ಏನೂ ಆಗೇ ಇಲ್ಲ ಎಂದು ಓಡಾಡಿಕೊಂಡೇ ಇದ್ದಾರೆ. ಆಪರೇಶನ್ ಕಮಲ, ಆಪರೇಶನ್ ಹಸ್ತ.. ಕುದುರೆ ವ್ಯಾಪಾರ... ಆರೋಪ-ಪ್ರತ್ಯಾರೋಪ ಮೂರು ಕಡೆಯಿಂದ ಬರ್ತಾನೆ ಇದೆ. ನಾವು ಅವನ್ನೆಲ್ಲ ನಿಮ್ಮ ಮುಂದೆ ಇಡ್ತಾನೆ ಬಂದಿದ್ದೇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.