ಮಂತ್ರಿಗಿರಿ ತೋರಿಸಲು ಜಮೀರ್‌ಗೆ ಫಾರ್ಚುನರ್ ಬೇಕಂತೆ!

First Published Jun 19, 2018, 3:29 PM IST
Highlights

ನನಗೆ ದೊಡ್ಡ ಕಾರು ಬಳಸಿಯೇ ಅಭ್ಯಾಸ ಹಾಗಾಗಿ ಫಾರ್ಚುನರ್ ಕೇಳಿದ್ದೇನೆ ಹೀಗೆಂದು ಹೇಳಿದ್ದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಖಾನ್.ಒಂದು ಕಡೆ ಸಿಎಂ ಕುಮಾರಸ್ವಾಮಿ ವೆಚ್ಚ ಕಡಿತದ ಬಗ್ಗೆ ಪಾಠ ಹೇಳುತ್ತಿದ್ದರೆ ಅವರದ್ದೇ ಸಂಪುಟದ ಸಚಿವರು ಸರಕಾರದಿಂದ ಸಿಗುವ ಸೌಲಭ್ಯಗಳ ಜತೆಗೆ ಬೇಡಿಕೆ ಪಟ್ಟಿಯನ್ನು ಇಡುತ್ತಿದ್ದಾರೆ.

ಬೆಂಗಳೂರು ಜೂನ್ 19 :  ನನಗೆ ದೊಡ್ಡ ಕಾರು ಬಳಸಿಯೇ ಅಭ್ಯಾಸ ಹಾಗಾಗಿ ಫಾರ್ಚುನರ್ ಕೇಳಿದ್ದೇನೆ ಹೀಗೆಂದು ಹೇಳಿದ್ದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಖಾನ್.

ಒಂದು ಕಡೆ ಸಿಎಂ ಕುಮಾರಸ್ವಾಮಿ ವೆಚ್ಚ ಕಡಿತದ ಬಗ್ಗೆ ಪಾಠ ಹೇಳುತ್ತಿದ್ದರೆ ಅವರದ್ದೇ ಸಂಪುಟದ ಸಚಿವರು ಸರಕಾರದಿಂದ ಸಿಗುವ ಸೌಲಭ್ಯಗಳ ಜತೆಗೆ ಬೇಡಿಕೆ ಪಟ್ಟಿಯನ್ನು ಇಡುತ್ತಿದ್ದಾರೆ.

ವಿಕಾಸಸೌಧ ದಲ್ಲಿ  ಮಾತನಾಡಿದ ಜಮೀರ್,  ಫಾರ್ಚೂನರ್ ಕಾರ್ ಕೇಳಿದ್ದೇನೆ. ಆದರೆ ಸಿದ್ದರಾಮಯ್ಯ ಬಳಸಿದ ಕಾರೇ ಬೇಕು ಅಂತ ಕೇಳಿಲ್ಲ.  ಸಚಿವ-ಮಂತ್ರಿ ಅಂದ ಮೇಲೆ ಕಾರು-ಗೀರು ಬೇಕಾಗುತ್ತದೆ. ನಾವು ಕುಮಾರಸ್ವಾಮಿ ಅವರಂತೆ  ಪಾಪ್ಯುಲರ್ ಫೇಸ್  ಅಲ್ಲ ಎಂದು ಹೇಳಿ ಪರೋಕ್ಷವಾಗಿ ಎಚ್ ಡಿಕೆ ಗೆ ಟಾಂಗ್ ನೀಡಿದರು.

ರಾಜ್ಯದ ಜನತೆ ಬಳಿ ಜಮೀರ್ ಅಹಮದ್ ಕ್ಷಮೆ ಕೇಳಿದ್ದು ಯಾಕೆ?

ತನ್ವೀರ್ ಸೇಠ್ ವಿರುದ್ಧ ವಾಗ್ದಾಳಿ:  ಚುನಾವಣೆ ಮುಗಿದು ಒಂದೂವರೆ ತಿಂಗಳ ನಂತರ ತನ್ವೀರ್ ಸೇಠ್ ನಾನು ಅವರನ್ನು ಸೋಲಿಸೋಕೆ ಯತ್ನಿಸಿದೆ ಎಂದಿದ್ದಾರೆ. ಅಂದರೆ  ನಾನು ಇನ್ನೊಬ್ಬ ನಾಯಕರನ್ನು  ಸೋಲಿಸುವಷ್ಟು ಸಮರ್ಥ ಅಂತ ತನ್ವೀರ್ ಸೇಠ್ ಹೇಳಿದ ಹಾಗಾಗಿದೆ. ಸ್ವತಃ ನನಗೆ ನನಗೇ ಗೊತ್ತಿರಲಿಲ್ಲ, ನಾನು ಇನ್ನೊಬ್ಬ ನಾಯಕರನ್ನು ಅವರ ಕ್ಷೇತ್ರಕ್ಕೆ ತೆರಳಿ ಸೋಲಿಸುವಷ್ಟು  ಸಮರ್ಥ ಇದ್ದೇನೆ ಎನ್ನುವುದು ಎಂದು ಹೇಳಿ ತನ್ವೀರ್ ವಿರುದ್ಧ ವಾಗ್ದಾಳಿ ಮಾಡಿದರು.

ಹೈಕಮಾಂಡ್ ಸುಮ್ಮಸುಮ್ಮನೆ ಯಾರಿಗೂ ಮಂತ್ರಿ ಮಾಡಲ್ಲ. ನಾನೇನು ರಾಹುಲ್  ಗಾಂಧಿ ನೆಂಟ ಅಲ್ಲ. ತನ್ವೀರ್ ಸೇಠ್ ಕೂಡ ಸಮಾವೇಶ ಮಾಡಲಿ, ನಾನು ಮಾಡುತ್ತೇನೆ, ಜನ ಯಾರ ಬಳಿ ಹೋಗ್ತಾರೋ ನೋಡೋಣ. ತನ್ವೀರ್ ಸೇಠ್ ತಮ್ಮ ಕ್ಷೇತ್ರ ಬಿಟ್ಟು  ಪಕ್ಕದ ಕ್ಷೇತ್ರಕ್ಕೂ ಹೋಗಿಲ್ಲ. ಚಾಮರಾಜ ಕ್ಷೇತ್ರಕ್ಕೂ ಹೋಗಿಲ್ಲ ನನಗೆ ಜನಬೆಂಬಲ ಇದೆ ಎಂಬುದನ್ನು ತನ್ವೀರ್ ಸೇಠ್ ತಿಳಿದುಕೊಳ್ಳಲಿ ಎಂದು ಪಾಠ ಮಾಡಿದರು.

ರೋಷನ್ ಬೇಗ್ ಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತ ಅಸಮಾಧಾನ ಆಗಿದೆ. ರಾಜಕೀಯದಲ್ಲಿ ಇದೆಲ್ಲಾ ಸಹಜ ಈಗ ಅವರು ಸಚಿವರೆ ಅಲ್ಲ ಹೀಗಿರುವಾಗ ಅವರಿಗೆ ಹಜ್ ಖಾತೆ ಕೊಡೋಕಾಗುತ್ತಾ?  ಅವರು ಸೀನಿಯರ್ ಲೀಡರ್, ಯಾಕೆ ಹೀಗೆ ಮಾಡ್ತಿದ್ದಾರೋ ಗೊತ್ತಿಲ್ಲ. ಮುಸಲ್ಮಾನ ಸಚಿವರ ಬಳಿ ಹಜ್ ಖಾತೆ ಇರೋದು ವಾಡಿಕೆ. ಆ ಪ್ರಕಾರ ನನಗೆ ಕೊಟ್ಟಿದ್ದಾರೆ.  ನಾನು ಹಾಗೂ ಖಾದರ್ ಇಬ್ಬರೇ ಸಮುದಾಯದಿಂದ  ಸಚಿವರಾಗಿದ್ದೇವೆ ಎಂದು ಹೇಳಿದರು.

ಸಿದ್ದರಾಮಯ್ಯ ನಮ್ಮ ನಾಯಕರು. ಸಿದ್ದರಾಮಯ್ಯ ಹೊಸ ಬಜೆಟ್ ಬೇಡ ಅಂತ ಸಲಹೆ ನೀಡಿದ್ದಾರೆ. ನಾನು ಬಜೆಟ್ ಮಂಡಿಸಿ ಒಂದೂವರೆ ತಿಂಗಳಾಗಿದೆ ಅಷ್ಟೇ, ಹೀಗಾಗಿ ಹೊಸ ಬಜೆಟ್ ಬೇಡ ಅಂತ ಸಿದ್ದರಾಮಯ್ಯ ಸಲಹೆ ಕೊಟ್ಟಿದ್ದಾರೆ. ಅದರಲ್ಲಿ ತಪ್ಪೇನೂ‌ ಇಲ್ಲ ಎಂದರು.

ಕುಮಾರಸ್ವಾಮಿ ತಮ್ಮ ಜತೆಗೆ ಯಾರೇ ಬರುತ್ತೀನಿ ಅಂದರೂ ಬಾ ಬ್ರದರ್ ಅಂತಾರೆ. ಅದು ಅವರ ಸ್ವಭಾವ, ಹೀಗಾಗಿ ಅವರು ಜತೆಗೆ ರೇವಣ್ಣ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಹೆಚ್.ಡಿ. ರೇವಣ್ಣ ವರ್ಗಾವಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ ವಿಚಾರ ಗೊತ್ತಿಲ್ಲ ಎಂದು ಹೇಳಿದರು.

click me!