
ಧಾರವಾಡ(ನ.27): ಕರ್ನಾಟಕ ರಾಜ್ಯದ ನಕಾಶೆ ಹೋಲುವ ಹುಣಸೆ ಮರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಫೋಟೋ ಕಲಘಟಗಿ ತಾಲೂಕಿನದ್ದು ಎಂದು ತಿಳಿದು ಬಂದಿದೆ. ಈ ಮರ ಎಲ್ಲಿದೆ ಎಂಬುದು ಇಷ್ಟು ದಿನಗಳ ಕಾಲ ಯಾರಿಗೂ ಗೊತ್ತಿರಲಿಲ್ಲ.
ಕೆಲವರು ಈ ಮರ ತಮ್ಮೂರಿನ ಬಳಿ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳುತ್ತಿದ್ದರು. ಆದರೆ ಈಗ ಕರ್ನಾಟಕ ಮ್ಯಾಪ್ ಹೋಲುವ ವಿಶಿಷ್ಟ ಮರ ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿದೆ ಎನ್ನುವುದು ಸಾಬೀತಾಗಿದೆ. ಹೀಗಾಗಿ ಮರ ಎಲ್ಲಿದೆ ಎಂಬ ಅನುಮಾನಗಳಿಗೆ ತೆರೆ ಬಿದ್ದಿದೆ. ಹುಣಸೆ ಮರದಲ್ಲಿ ಕರ್ನಾಟಕ ನಕಾಶೆ ಮೂಡಿದ್ದು ನಮ್ಮ ಗ್ರಾಮಕ್ಕೊಂದು ಹೆಮ್ಮೆ ಎನ್ನುತ್ತಾರೆ ಹಿರೇಹೊನ್ನಹಳ್ಳಿ ಗ್ರಾಮಸ್ಥರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.