ಮಂಡ್ಯಕ್ಕೆ ನೀರು ಬೇಕು: ಕುತ್ತಿಗೆಯವರೆಗೂ ಮಣ್ಣಿನಲ್ಲಿ ತಲೆ ಹೂತು ರಾಜ್ಯ ಸರಕಾರದ ವಿರುದ್ಧ ಕಜವೇ ಸದಸ್ಯರ ಪ್ರತಿಭಟನೆ

Published : Aug 09, 2017, 11:16 AM ISTUpdated : Apr 11, 2018, 12:47 PM IST
ಮಂಡ್ಯಕ್ಕೆ ನೀರು ಬೇಕು: ಕುತ್ತಿಗೆಯವರೆಗೂ ಮಣ್ಣಿನಲ್ಲಿ ತಲೆ ಹೂತು ರಾಜ್ಯ ಸರಕಾರದ ವಿರುದ್ಧ ಕಜವೇ ಸದಸ್ಯರ ಪ್ರತಿಭಟನೆ

ಸಾರಾಂಶ

ಸಿಎಂ ಸಿದ್ದರಾಮಯ್ಯ ಹಾಸನ ಭಾಗಕ್ಕೆ ‌ನೀರು ಬಿಟ್ಟು ಕೆಆರ್'ಎಸ್ ಭಾಗದ ರೈತರಿಗೆ ನೀರು ಬಿಡದೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆಂದು ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಈ ಕೂಡಲೇ ರಾಜ್ಯ ಸರ್ಕಾರ ನೀರು ಬಿಡದಿದ್ದರೆ ತಾನು ಜೀವಂತ ಸಮಾಧಿಯಾಗುವುದಾಗಿ ಎಚ್ಚರಿಸಿ ತನ್ನ ಸಾವಿಗೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಮತ್ತು ನೀರಾವರಿ ಮಂತ್ರಿ ಕಾರಣವಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಂಡ್ಯ(ಆ. 09): ಮಂಡ್ಯ ಜಿಲ್ಲೆಯ ನಾಲೆಗಳಿಗೆ ನೀರು ಬಿಡುವಂತೆ ಆಗ್ರಹಿಸಿ ಮದ್ದೂರಿನ ಕೆರೆಯಂಗಳದಲ್ಲಿ ಕಳೆದ 37 ದಿನಗಳಿಂದ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿದ್ದ ಧರಣಿ ಹೋರಾಟ ಇಂದಿನಿಂದ ತೀವ್ರಗೊಂಡಿದೆ.  ಕಜವೇ ರಾಜ್ಯಾಧ್ಯಕ್ಷ ರಮೇಶ್ ಗೌಡ  ಕೆರೆಯಂಗಳದಲ್ಲಿ‌ ಕತ್ತಿನವರೆಗೂ ಗುಂಡಿಯಲ್ಲಿ ಹೂತು ಹಾಕಿಸಿಕೊಂಡು ವಿನೂತನವಾಗಿ ಪ್ರತಿಭಟನೆಗೆ ಇಳಿದಿದ್ದಾರೆ. ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವ ಮೂಲಕ ಮಂಡ್ಯ ಜಿಲ್ಲೆಗೆ ದ್ರೋಹ ಬಗೆಯುತ್ತಿರೋದಾಗಿ ರಮೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಿಎಂ ಸಿದ್ದರಾಮಯ್ಯ ಹಾಸನ ಭಾಗಕ್ಕೆ ‌ನೀರು ಬಿಟ್ಟು ಕೆಆರ್'ಎಸ್ ಭಾಗದ ರೈತರಿಗೆ ನೀರು ಬಿಡದೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆಂದು ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಈ ಕೂಡಲೇ ರಾಜ್ಯ ಸರ್ಕಾರ ನೀರು ಬಿಡದಿದ್ದರೆ ತಾನು ಜೀವಂತ ಸಮಾಧಿಯಾಗುವುದಾಗಿ ಎಚ್ಚರಿಸಿ ತನ್ನ ಸಾವಿಗೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಮತ್ತು ನೀರಾವರಿ ಮಂತ್ರಿ ಕಾರಣವಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬರ್ಲಿನ್‌ನಲ್ಲಿ ಟಿವಿಎಸ್‌ ಬೈಕ್ : ರಾಹುಲ್‌ ಗಾಂಧಿ ಭಾರಿ ಮೆಚ್ಚುಗೆ
ಇಂದು ಭಾರತ-ಒಮಾನ್‌ ಮುಕ್ತ ವ್ಯಾಪಾರ ಒಪ್ಪಂದ