ಕೋರ್ಟ್ ತೀರ್ಪು: ನಾಲ್ವರನ್ನು ಬಂಧಿಸುವಂತಿಲ್ಲ, ಇದು ಡಿಕೆಶಿಗೆ ಅನ್ವಯವಾಗಲ್ಲ

By Web DeskFirst Published Sep 17, 2019, 3:50 PM IST
Highlights

ಕಾಂಗ್ರೆಸ್ ಟ್ರಬಲ್ ಶೂಟರ್‌ಗೆ ಮತ್ತೆ ಟ್ರಬಲ್| ಡಿಕೆಶಿ ಮೇಲ್ಮನವಿ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ| ಇಡಿ ನೀಡಿದ ಸಮನ್ಸ್ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಡಿಕೆಶಿ.

ಬೆಂಗಳೂರು, (ಸೆ.17): ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಮತ್ತೆ ಹಿನ್ನಡೆಯಾಗಿದ್ದರೆ, ಇತರೆ ನಾಲ್ವರು ಆರೋಪಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ.

ನವದೆಹಲಿ ನಿವಾಸದಲ್ಲಿ ಸಿಕ್ಕ 8.6 ಕೋಟಿ ರು ಅಕ್ರಮ ಹಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ರದ್ದುಕೋರಿ ಮೇಲ್ಮನವಿ ಸಲ್ಲಿಸಿದ್ದ ಡಿಕೆಶಿ ಅರ್ಜಿಯನ್ನು ಇಂದು (ಮಂಗಳವಾರ) ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

22 ವಯಸ್ಸಲ್ಲೇ ಹವಾಲಾ ದಂಧೆಯಲ್ಲಿ ಡಿಕೆಶಿ ಪುತ್ರಿ: ಸಿಂಗಾಪುರ್ ಪ್ರಜೆಯಿಂದ ಬಹಿರಂಗ

ಇದಕ್ಕೂ ಮೊದಲು ಇ.ಡಿ ನೀಡಿದ್ದ ಸಮನ್ಸ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದ್ರೆ ಇದನ್ನು ಹೈಕೋರ್ಟ್ ಏಕಸದಸ್ಯ  ಅರ್ಜಿ ವಜಾ ಮಾಡಿ ತೀರ್ಪು ನೀಡಿತ್ತು. 

 ಏಕ ಸದಸ್ಯ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಡಿಕೆ ಶಿವಮಕುಮಾರ್ ಅವರು ಮೇಲ್ಮನವಿ ಸಲ್ಲಿಸಿದ್ದರು. ಆದ್ರೆ ಈ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ಕೂಡ ವಜಾ ಮಾಡಿದ್ದು, ಡಿಕೆಶಿಗೆ ಮತ್ತೆ ಹಿನ್ನಡೆಯಾಗಿದೆ. 

ಡಿಕೆ ಶಿವಕುಮಾರ್‌ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದ್ರೆ ಡಿಕೆಶಿ ಕೇಸ್‌ನಲ್ಲಿ ಇದ್ದ ಇನ್ನುಳಿದ ನಾಲ್ವರಿಗೆ ಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಯಾವುದೇ ಕಾರಣಕ್ಕೂ ಸಚಿನ್ ನಾರಾಯಣ್, ಸುನೀಲ್ ಶರ್ಮಾ ಆಂಜನೇಯ್ಯ ಅವರನ್ನು 4 ವಾರಗಳ ಕಾಲ ಬಂಧಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ.

"

"

click me!