ಬೆಂಗಳೂರಿನಲ್ಲಿ ಈದ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರು ನಿಯಮ ಉಲ್ಲಂಘನೆಗೆ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೆಲ್ಮೆಟ್ ಇಲ್ಲದೆ ಮತ್ತು ಟ್ರಿಪಲ್ ರೈಡಿಂಗ್ ಮಾಡುತ್ತಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಮಾ.31): ಇಂದು ದೇಶಾದ್ಯಂತ ಈದ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗಿದೆ. ಮುಸ್ಲಿಮರ ಅತಿದೊಡ್ಡ ಹಬ್ಬ. ಆದರೆ, ಬೆಂಗಳೂರಿನ ಟ್ರಾಫಿಕ್ ಪೊಲೀಸರು ಕೂಡ ಈದ್ ಹಬ್ಬವನ್ನು ಟ್ರಾಫಿಕ್ ಉಲ್ಲಂಘನೆ ಮಾಡುವ ದಿನವನ್ನಾಗಿ ಬಿಟ್ಟಿದ್ದಾರೆ. ಸಾಮಾನ್ಯ ದಿನಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ನಿಂತು ಬೈಕ್, ಕಾರ್‌ಗಳನ್ನು ಹಿಡಿದು ದಂಡ ವಸೂಲಿ ಮಾಡುವ ಪೊಲೀಸರು ಇಂದು ಮಾತ್ರ ಗರುಡಗಂಬದ ಹಾಗೆ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತುಬಿಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಲು ಸಾಲು ವಿಡಿಯೋಗಳು ಪೋಸ್ಟ್ ಆಗುತ್ತಿದ್ದು, ಟ್ರಾಫಿಕ್ ಪೊಲೀಸ್ರೇ ಸ್ವಲ್ಪನಾದ್ರೂ ಧೈರ್ಯ ತೋರಿಸಿ, ಕಣ್ಣೆದುರು ಹೆಲ್ಮೆಟ್ ಇಲ್ಲದೇ ತಿರುಗಾಡುತ್ತಿದ್ದರೂ ಗರುಡಗಂಬದ ಹಾಗೆ ನಿಂತು ಪೋಸ್ ನೀಡೋದಲ್ಲ ಎಂದು ಕಿಡಿಕಾರಿದ್ದಾರೆ.
ರಸ್ತೆಯಲ್ಲಿ ಜನರ ಸುರಕ್ಷತೆ ಬಗ್ಗೆ ಕಳವಳ: ರಾಜ್ಯ ಸರ್ಕಾರದಲ್ಲಿ ಪ್ರತಿನಿತ್ಯ ಎನ್ನುವಂತೆ ಕಾನೂನು ಸುವ್ಯವಸ್ಥೆ ಬಗ್ಗೆ ಕಳವಳಗಳು ವ್ಯಕ್ತವಾಗುತ್ತಿದೆ. ಇದರ ನಡುವೆ ಈದ್ ಹಬ್ಬದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಸಂಚಾರ ನಿಯಮಗಳನ್ನು ಸ್ಪಷ್ಟವಾಗಿ ನಿರ್ಲಕ್ಷಿಸುತ್ತಿರುವುದು ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಕಾನೂನು ಜಾರಿಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ನಗರದಾದ್ಯಂತ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಇಲ್ಲದೆ ಅಪಾಯಕಾರಿ ಟ್ರಿಪಲ್ ರೈಡಿಂಗ್ ಮಾಡುವುದು, ವೀಲ್ಹಿಂಗ್‌ನಲ್ಲಿ ತೊಡಗುವುದನ್ನು ಕಾಣಬಹುದು, ಆದರೂ ಪೊಲೀಸರು ಈ ಉಲ್ಲಂಘನೆಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿರುವಂತೆ ಹಲವು ಪ್ರದೇಶಗಳಲ್ಲಿ ಕಂಡುಬಂದಿದೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಪೊಲೀಸರು ಆಯ್ದ ರೀತಿಯಂತೆ ಕಾನೂನು ಸುವ್ಯವಸ್ಥೆ ಮಾಡೋದಲ್ಲ ಎಂದು ಎಚ್ಚರಿಸಿದ್ದಾರೆ. ಈದ್ ಹಬ್ಬದ ಸಂದರ್ಭದಲ್ಲಿ ಹೀಗೆ ಹೆಲ್ಮೆಟ್ ಇಲ್ಲದೆ ಓಡಾಡೋದನ್ನು ಕಣ್ಮುಚ್ಚಿ ನೋಡುವ ನೀವು.ಹಿಂದೂ ಅಥವಾ ಕ್ರಿಶ್ಚಿಯನ್ ಹಬ್ಬವಾಗಿದ್ದರೆ ಅದೇ ಸೌಮ್ಯತೆಯನ್ನು ತೋರಿಸುತ್ತಿದ್ದರೆ ಎಂದು ಪ್ರಶ್ನೆ ಮಾಡಿದ್ದಾರೆ.
ಹೆಲ್ಮೆಟ್ ಇಲ್ಲದೆ ರಾಜಾರೋಷವಾಗಿ ಓಡಾಟ: ಈ ಹಿಂದೆ, ಹಿಂದೂ ಮೆರವಣಿಗೆಗಳು ಅಥವಾ ಕ್ರಿಶ್ಚಿಯನ್ ಸಭೆಗಳ ಸಮಯದಲ್ಲಿ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತು, ದಂಡ ಮತ್ತು ವಾಹನ ವಶಪಡಿಸಿಕೊಳ್ಳುವಿಕೆ ಅಂತೂ ಸಾಮಾನ್ಯವಾಗಿತ್ತು. ಹಾಗಿದ್ದರೂ, ಈದ್ ಹಬ್ಬದ ಸಮಯದಲ್ಲಿ, ಪೊಲೀಸರು ವಿಭಿನ್ನ ನಿಯಮಗಳನ್ನು ಅನುಸರಿಸುತ್ತಿರುವಂತೆ ತೋರುತ್ತಿದೆ, ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ತಮ್ಮ ಬೈಕ್‌ಗಳಲ್ಲಿ ಹೆಲ್ಮೆಟ್ ಇರೋದೇ ಮರೆತವರಂತೆ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ತಿರುಗಾಡುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾನೂನುಗಳ ಏಕರೂಪದ ಜಾರಿ ಮಾಡುವಲ್ಲಿ ವಿಫಲರಾಗಿದ್ದಾರೆ. ಸಾರ್ವಜನಿಕ ಸುರಕ್ಷತೆಯನ್ನು ರಾಜಿ ಮಾಡಿಕೊಳ್ಳುವ ತುಷ್ಟೀಕರಣ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲಾ ನಾಗರೀಕರ ಮೇಲೆ ಸಮಾನವಾಗಿ ಕಾನೂನು ಜಾರಿ ಮಾಡುತ್ತಿಲ್ಲ.ಕಾಂಗ್ರೆಸ್ ಸರ್ಕಾರವು ಸಾರ್ವಜನಿಕ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ ಮಾತ್ರವಲ್ಲದೆ ರಸ್ತೆಗಳಲ್ಲಿ ಜೀವಗಳಿಗೆ ಅಪಾಯವನ್ನುಂಟುಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ʼಒಂದು ಮಚ್ಚಿನ ಕಥೆ ನೋಡಿದ್ರಿ, ನನ್ನ ಕುಟುಂಬಕ್ಕೆ ತೊಂದರೆಯಾಗಿದೆʼ- Bigg Boss Vinay Gowda ಮೊದಲ ರಿಯಾಕ್ಷನ್
ಸಂಚಾರ ನಿಯಮಗಳು ಪ್ರತಿಯೊಬ್ಬರ ಸುರಕ್ಷತೆಗಾಗಿ ಅಸ್ತಿತ್ವದಲ್ಲಿವೆ ಮತ್ತು ಅವುಗಳ ಜಾರಿ ನಿಷ್ಪಕ್ಷಪಾತವಾಗಿರಬೇಕು. ಆದರೆ, ಪ್ರಸ್ತುತ ಆಡಳಿತದಲ್ಲಿ ಇದು ಆಗುತ್ತಿರುವಂತೆ ಕಾಣುತ್ತಿಲ್ಲ. ರಾಜಕಾರಣ ಏನೇ ಇರಲಿ, ಜನರ ರಕ್ಷಣೆ ಮಾಡಬೇಕಿರುವ ಜವಾಬ್ದಾರಿ ಪೊಲೀಸರದ್ದು. ಆದರೆ, ಪೊಲೀಸರು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಇಂದು ಕಲ್ಲುಕಂಬದ ರೀತಿ ನಿಂತಿರುವುದು ಕಂಡಿದೆ.
ದರ್ಶನ್ ಸಿನಿಮಾ ಕಾಪಿ ಮಾಡುವಾಗ ಎಡವಟ್ಟು! ರಜತ್, ವಿನಯ್ ಬಳಿಕ ಬುಲೆಟ್ ರಕ್ಷಕ್ಗೂ ಕಾನೂನು ಉರುಳು?